ಮತ್ತೊಮ್ಮೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ

Social Share

ಬೆಂಗಳೂರು,ಡಿ.7- ಶೀಘ್ರದಲ್ಲೇ ಸಿಲಿಕಾನ್ ಸಿಟಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಗಮನವಾಗಲಿದೆ.
ಸಧ್ಯದಲ್ಲೇ ಉದ್ಘಾಟನೆಗೊಳ್ಳಲಿರುವ ಮೆಟ್ರೋ ಎರಡನೇ ಹಂತದ ರೈಲು ಯೋಜನೆಗೆ ಮೋದಿ ಅವರು ಹಸಿರು ನಿಶಾನೆ ತೋರಿಸಲು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

ವೈಟ್ ಫೀಲ್ಡನಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋ ಮಾರ್ಗದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ರೈಲು ಮಾರ್ಗವನ್ನು ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ನಾಳಿನ ಗುಜರಾತ್, ಹಿಮಾಚಲ ಪ್ರದೇಶ ರಾಜ್ಯ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಮೋದಿ ಅವರ ಚಿತ್ತ ಮುಂದಿನ ದಿನಗಳಲ್ಲಿ ನಡೆಯಲಿರುವ ಕರ್ನಾಟಕದ ಮೇಲೆ ನೆಟ್ಟಿದ್ದು, ಹಲವಾರು ಕಾಮಗಾರಿ ಉದ್ಘಾಟನೆ ನೆಪದಲ್ಲಿ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡಿ ಇಲ್ಲಿನ ಮತದಾರರ ಮನಸ್ಸು ಗೆಲ್ಲುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಡ್ರಾಮಾ ನೋಡಿದ ವಿದ್ಯಾರ್ಥಿಗಳನ್ನು ಗುಂಡಿಟ್ಟು ಕೊಲ್ಲಿಸಿದ ಕ್ರೂರಿ ಕಿಮ್

ಐಟಿ ಬಿಟಿ ಕಂಪನಿಗಳ ಸಂಪರ್ಕಕ್ಕೆ ಹೆಚ್ಚಿನ ಅನುಕೂಲವಾಗಿರೋ ಮಾರ್ಗವಾಗಿರುವ ವೈಟ್ ಫೀಲ್ಡ ಟು ಬೈಯಪ್ಪನಹಳ್ಳಿ ಮೆಟ್ರೋ ಲೈನ್ ಲೋಕಾರ್ಪಣೆ ಮೂಲಕ ನಮೋ ಮತ’ತಂತ್ರ ಆರಂಭವಾಗಲಿದೆ ಎನ್ನಲಾಗಿದೆ.
ಈ ಮಾರ್ಗದ ಸುರಕ್ಷತೆ ಬಗ್ಗೆ ಶೀಘ್ರದಲ್ಲೇ ಸೇಫ್ಟಿ ಕಮಿಷನರ್ ಅವರು ಪರಿಶೀಲನೆ ನಡೆಸಿದ ಬಳಿಕ ವಾಣಿಜ್ಯ ಬಳಕೆ ಸಂಚಾರಕ್ಕೆ ದಿನಾಂಕ ಫಿಕ್ಸ್ ಆಗಲಿದೆ.

ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ

13 ಎತ್ತರಿಸಿದ ಮಾರ್ಗ ಹೊಂದಿರುವ 15 ಕಿ.ಮೀ ಉದ್ದದ ಹೊಸ ಮೆಟ್ರೋ ಮಾರ್ಗದ ಟ್ರಯಲ್ ರನ್ ಈಗಾಗಲೇ ಆರಂಭವಾಗಿದ್ದು, ಶೀಘ್ರದಲ್ಲೇ ಮೋದಿ ಅವರಿಂದ ಈ ಮಾರ್ಗ ಲೋಕಾರ್ಪಣೆಗೊಳ್ಳಲಿದೆ.

#NammaMetro, #Whitefield, #Bangalore, #NarendraModi,

Articles You Might Like

Share This Article