ಮೆಟ್ರೋ ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ಸಿಎಂಗೆ ಪತ್ರ

Social Share

ಬೆಂಗಳೂರು,ಫೆ.8- ಪದೇ ಪದೇ ಅವಘಡಗಳು ಸಂಭವಿಸುತ್ತಿರುವುದರಿಂದ ನಮ್ಮ ಮೆಟ್ರೋ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮತ್ತೆ ಆತಂಕ ಶುರುವಾಗಿದೆ. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿರುವ ಮೆಟ್ರೋ ಪಿಲ್ಲರ್‍ಗಳ ಗುಣಮಟ್ಟ ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಎಂಆರ್‌ಸಿಎಲ್ ನೌಕರರ ಸಂಘ ಪತ್ರ ಬರೆದಿದೆ.

ಈಗಾಗಲೆ ಹಲವಾರು ಅವಘಡಗಳು ಸಂಭವಿಸಿದ್ದರೂ ಮೆಟ್ರೋ ಅಧಿಕಾರಿಗಳು ಯಾವುದೆ ಕ್ರಮ ಕೈಗೊಳ್ಳದಿರುವುದರಿಂದ ನಾವು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇವೆ ಎಂದು ನೌಕರರ ಸಂಘದ ಅಧ್ಯಕ್ಷ ಸೂರ್ಯ ನಾರಾಯಣ ಮೂರ್ತಿ ಅವರು ತಿಳಿಸಿದ್ದಾರೆ.

ಮಾರ್ಚ್ 23ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಕೆಟ್ಟ ಮೇಲೂ ಬುದ್ದಿ ಕಲಿಯದ ಮೆಟ್ರೋ ಅಧಿಕಾರಿಗಳಿಗೆ ಬುದ್ದಿ ಕಲಿಸಬೇಕು ಎಂಬ ಉದ್ದೇಶದಿಂದ ಸಿಎಂಗೆ ಪತ್ರ ಬರೆಯಲಾಗಿದೆ ಎಂದು ಅವವರು ವಿವರಣೆ ನೀಡಿದ್ದಾರೆ. ಸಾವಿರಾರು ಕೋಟಿ ಯೋಜನೆಯ ಕಾಮಗಾರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೆಟ್ರೋ ಮೆಟ್ರೋ ನೌಕರರ ಸಂಘ, ಮೆಟ್ರೋ ಪಿಲ್ಲರ್ ಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರೂ ಕ್ವಾಲಿಟಿ ಚೆಕ್ ಗೆ ಹಿಂದೇಟು ಹಾಕಲಾಗುತ್ತಿದೆ.

ಮೊದಲ ಹಾಗೂ ಎರಡನೆಯ ಹಂತದ ಮೆಟ್ರೋ ಪಿಲ್ಲರ್ ಗಳ ಕ್ವಾಲಿಟಿ ಚೆಕ್ ಮಾಡಬೇಕು ಐಐಟಿ ಅಥವಾ ಐಐಎಸ್‍ಸಿ ತಜ್ಞರಿಂದ ಪಿಲ್ಲರ್‍ಗಳ ಕ್ವಾಲಿಟಿ ಚೆಕ್ ಮಾಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಈ ಮೇಲ್ ಮೂಲಕ ದೂರು ಸಲ್ಲಿಸಲಾಗಿದೆ.

ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನು?: ಕುಮಾರಸ್ವಾಮಿ

ಪಿಲ್ಲರ್‍ಗಳು ಹಾಗೂ ಟ್ರ್ಯಾಕ್ ಆಯಸ್ಸು ಬರೊಬ್ಬರಿ 100 ವರ್ಷ ಇರಬೇಕು ಆದರೆ, ಮೆಟ್ರೋ ಕಾಮಗಾರಿ ಆರಂಭವಾಗಿ 10 ವರ್ಷ ಕಳೆಯುವುದರೊಳಗೆ ಹಲವಾರು ಅವಘಡಗಳು ಸಂಭವಿಸುತ್ತಿರುವುದರಿಂದ ಕೂಡಲೆ ಗುಣಮಟ್ಟ ಪರಿಶೀಲನೆ ಮಾಡಬೇಕು ಎನ್ನುವುದು ನೌಕರರ ಸಂಘದ ಆಗ್ರಹವಾಗಿದೆ.

namma metro, work, test, BMRCL, employees, CM Bommai, Letter,

Articles You Might Like

Share This Article