ನಂದಿನಿ ಹಾಲು ಉತ್ಪನ್ನಗಳ ದರ ಪರಿಷ್ಕರಣೆ ಮಾಡಿ ಹೊಸ ಆದೇಶ

Social Share

ಬೆಂಗಳೂರು,ಜು.19- ಹಾಲಿನ ಉತ್ಪನ್ನಗಳ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇಂದಿನಿಂದ ಜಾರಿಗೆ ಬರುವಂತೆ ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮಾರಾಟ ದರವನ್ನು ಮರು ಪರಿಷ್ಕರಣೆ ಮಾಡಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ ಸತೀಶ್ ಆದೇಶ ಹೊರಡಿಸಲಾಗಿದೆ.

200 ಗ್ರಾಂ ಸ್ಯಾಚೆಯ ಮೊಸರಿನ ಜಿಎಸ್‍ಟಿ ಸೇರಿಸಿ 12.00 ಗೆ ಏರಿಸಲಾಗಿತ್ತು. ಈ ದರವನ್ನು ಪರಿಷ್ಕತಗೊಳಿಸಿ 10.50 ರೂ ಮಾಡಲಾಗಿದೆ. ಅದರಂತೆ 500 ಗ್ರಾಂ ಪ್ಯಾಕೆಟ್ ಗೆ 23ರೂ. 1ಲೀಟರ್ ಗೆ 45ರೂ. ದರ ನಿಗದಿ ಮಾಡಲಾಗಿದೆ.

200 ಗ್ರಾಂ ಸ್ಯಾಚೆಯ ಮಜ್ಜಿಗೆ ದರವನ್ನು 7ರೂ ನಿಂದ 8ಕ್ಕೆ ಏರಿಸಲಾಗಿತ್ತು. ಪರಿಷ್ಕತ ದರದಂತೆ 7.50ರೂ ಆಗಲಿದೆ. ಇದೇ ರೀತಿ 200 ಮಿ.ಲೀ ಲಸ್ಸಿ ದರವನ್ನು 10ರೂ ನಿಂದ 11ಕ್ಕೆ ಏರಿಸಲಾಗಿತ್ತು. ಇದೀಗ 10.50ರೂ ಮಾಡಲಾಗಿದೆ.

ಈ ಸಂಬಂಧ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಲಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ ಸತೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Articles You Might Like

Share This Article