ಬೆಂಗಳೂರು,ಜ.21- ನಂದಿನಿ ಹಾಲು ಪೂರೈಕೆ ಮಾಡುವ ಲಾರಿ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆ ಹಾದಿ ಹಿಡಿದಿರುವ ಹಿನ್ನೆಲೆ ಯಲ್ಲಿ ನಗರದಾದ್ಯಂತ ಕೆಎಂಎಫ್ ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಹಾಲು ಪೂರೈಕೆದಾರರಿಗೆ ಹೆಚ್ಚಿನ ಹಣ ನಿಗದಿಪಡಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರು ಹಾಗೂ ಚಾಲಕರು ನಿನ್ನೆಯಿಂದ ಮುಷ್ಕರ ಆರಂಭಿಸಿರು ವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಎಂಎಫ್ ಸಂಸ್ಥೆ ಮುಂಭಾಗ 250ಕ್ಕೂ ಹೆಚ್ಚು ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಸಮರ್ಪಕವಾಗಿ ನಂದಿನಿ ಹಾಲು ಸರಬರಾಜು ಮಾಡಲಾಗುತ್ತಿಲ್ಲ.
ಸದ್ಯ ಒಂದು ಟ್ರಿಪ್ಗೆ 1000-1200 ರೂಪಾಯಿ ಪಾವತಿ ಮಾಡುತ್ತಿರುವ ಬಮೂಲ್ ಆದರೆ ಆ ಹಣ ನಮಗೆ ಸಾಕಾಗುತ್ತಿಲ್ಲ. ಕಿಮೀ ಆಧಾರದ ಮೇಲೆ ಹಣ ಪಾವತಿ ಮಾಡಿ ಎಂದು ಲಾರಿ ಮಾಲೀಕರು ಹಾಗೂ ಚಾಲಕರು ಒತ್ತಾಯಿಸುತ್ತಿದ್ದಾರೆ.
ಶಿಕ್ಷಕರನ್ನು ಅಪಮಾನಿಸುತ್ತಿರುವ ಲೆಫ್ಟಿನೆಂಟ್ ಗೌರ್ನರ್ : ಸಿಸೋಡಿಯ ಆಕ್ರೋಶ
ಈ ಸಂಬಂಧ ಆರು ತಿಂಗಳಿಂದ ಬಮೂಲ್ಗೆ ಪತ್ರದ ಮೂಲಕ ಹಾಲು ಪೂರೈಕೆದಾರರು ಮನವಿ ಮಾಡುತ್ತಿದ್ದರೂ ಕೆಎಂಎಫ್ ಸುಮ್ಮನಿರುವುದನ್ನು ವಿರೋಧಿಸಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಯಿತು ಎಂದು ಲಾರಿ ಮಾಲೀಕರುಗಳು ತಿಳಿಸಿದ್ದಾರೆ.
ಮೆಟ್ರೋ ಪಿಲ್ಲರ್ ಕುಸಿತಕ್ಕೆ ಗುತ್ತಿಗೆದಾರ ಎಂಜಿನಿಯರ್ಗಳೇ ಹೊಣೆ
ಒಂದು ಟ್ರಿಪ್ಗೆ ಲಾರಿಗಳು ಸರಾಸರಿ 40 ಕಿಲೋಮೀಟರ್ ಸಂಚಾರ ಮಾಡುತ್ತವೆ. ಒಂದು ಲಾರಿಯಲ್ಲಿ 450 ಕ್ರೇಟ್ ಇರಲಿದ್ದು , ಒಂದು ಕ್ರೇಟ್ ನಲ್ಲಿ 12 ಲೀಟರ್ ನಂದಿನಿ ಹಾಲಿನ ಸಾಗಾಟ ಮಾಡುತ್ತಿದ್ದೇವೆ. ಆದರೂ ನಮಗೆ ನ್ಯಾಯ ಸಮ್ಮತ ದರ ನಿಗದಿ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Nandini milk, supply, Lorry, owners, protest,