ಬಿಜೆಪಿ ಸರ್ಕಾರ ಹೊಗಳಿದ ಅನರ್ಹ ಶಾಸಕ ನಾರಾಯಣಗೌಡ

ಬೆಂಗಳೂರು, ಅ.01- ಈ ಸರ್ಕಾರದಲ್ಲಿ ಆಗುತ್ತಿರುವ ಕೆಲಸ ಮೈತ್ರಿ ಸರ್ಕಾರದಲ್ಲಿ ಆಗಿದ್ದರೆ ನಾನು ಪಕ್ಷ ಬಿಡುತ್ತಿರಲಿಲ್ಲ ಎಂದು ಅನರ್ಹ ಶಾಸಕ ನಾರಾಯಣಗೌಡ ತಿಳಿಸಿದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಈಗ ಆಗುತ್ತಿರುವ ಕೆಲಸದಲ್ಲಿ ಶೇ.20ರಷ್ಟು ಕೆಲಸವಾಗಿದ್ದರೂ ಪಕ್ಷ ಬಿಡುತ್ತಿರಲಿಲ್ಲ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಬರುವುದಾದರೆ ಸ್ವಾಗತಿಸುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ಮುಂಬೈನಲ್ಲಿ ಬ್ಯುಸಿನೆಸ್ ಮಾಡುತ್ತಿದ್ದವನು ಈಗ ಕರ್ಮಭೂಮಿಯ ಋಣ ತೀರಿಸಲು ಬಂದಿದ್ದೇನೆ. ಕ್ಷೇತ್ರದಲ್ಲಿ ಈಗ ಬಹಳಷ್ಟು ಕೆಲಸಗಳು ಆಗುತ್ತಿವೆ ಎಂದರು.

ನಮ್ಮ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿ ಬಾಕಿ ಇದ್ದು, ತೀರ್ಪು ಬಂದ ನಂತರ ಚುನಾವಣೆ ಎದುರಿಸುವ ಬಗ್ಗೆ ಯೋಚಿಸಲಾಗುವುದು. ಬಿಜೆಪಿಯಲ್ಲಿ ನಮ್ಮ ಬಗ್ಗೆ ಯಾರೂ ತಪ್ಪಾಗಿ ಮಾತನಾಡಿಲ್ಲ. ಸಣ್ಣಪುಟ್ಟ ಸಮಸ್ಯೆಗಳಿರುವುದು ಸಹಜ. ಅದನ್ನು ಅವರು ಬಗೆಹರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ನಾರಾಯಣಗೌಡ ವ್ಯಕ್ತಪಡಿಸಿದರು.