ನವದೆಹಲಿ,ಮಾ.2- ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿಲ್ಲದಿದ್ದರೆ ಸಮಾಜ ಅಥವಾ ರಾಷ್ಟ್ರವು ತನ್ನ ಸಾಧನೆಗಳನ್ನು ಸಂಭ್ರಮಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಇಲ್ಲಿನ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‍ಎಚ್‍ಆರ್‍ಸಿ) ಆಯೋಜಿಸಿದ್ದ ಮಕ್ಕಳ ಲೈಂಗಿಕ ದೌರ್ಜನ್ಯ ವಸ್ತು ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ರಿಜಿಜು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ವಿಷಯದಲ್ಲಿ ನಾವು ಕಾನೂನು ನಿಬಂಧನೆಗಳನ್ನು ಮೀರಿ ಹೋಗಬೇಕಾಗುತ್ತದೆ ಮತ್ತು ಸಮಾಜವು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಗ್ಗೂಡಬೇಕಿದೆ ಎಂದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅತ್ಯಂತ ಗಂಭೀರ ಮತ್ತು ದಿಗ್ಭ್ರಮೆಗೊಳಿಸುವ ಅಪರಾಧವಾಗಿದೆ. ಇಂತಹ ಸಂದರ್ಭದಲ್ಲಿ ನಡೆಯುತ್ತಿರುವ ಸಮ್ಮೇಳನ ಸಕಾಲಿಕ ಮತ್ತು ಅತ್ಯಂತ ಪ್ರಸ್ತುತ ಎಂದು ವಿವರಿಸಿದರು.
ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನೆಡೆ
ಇಲ್ಲಿ ಚರ್ಚೆಗಳು ನಡೆದು ಉತ್ತಮ ನಿರ್ಣಯಗಳು ಮತ್ತು ಸಲಹೆಗಳು ಹೊರಬರಲಿವೆ ಎಂದು ನಿರೀಕ್ಷಿಸುತ್ತೇವೆ. ಎಲ್ಲಾ ಅಪರಾಧಗಳು ಕೆಟ್ಟವು, ಆದರೆ ಮಕ್ಕಳ ವಿರುದ್ಧದ ಅಪರಾಧಗಳನ್ನು ಅರಗಿಸಿಕೊಳ್ಳುವುದು ಕಷ್ಟ. ಇವು ಅತ್ಯಂತ ಗಂಭೀರ ಮತ್ತು ಗೊಂದಲದ ಸವಾಲುಗಳು ಸೃಷ್ಟಿಸಿವೆ. ಇವನ್ನು ಸಾಮಾನ್ಯ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಇದಕ್ಕಾಗಿ ವಿಶೇಷವಾದ ಪರಿಗಣನೆ ಅಗತ್ಯವಿದೆ ಎಂದರು.
ಎನ್‍ಎಚ್‍ಆರ್‍ಸಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ, ಆಯೋಗದ ಸದಸ್ಯರು, ಸಂಬಂಧಪಟ್ಟ ಸಚಿವಾಲಯಗಳ ಹಿರಿಯ ಅಕಾರಿಗಳು, ಕಾನೂನು ಮತ್ತು ಶಿಕ್ಷಣ ತಜ್ಞರು ಸಮ್ಮೆಳನದಲ್ಲಿ ಭಾಗವಹಿಸಿದ್ದರು.
#Nation, #cannotCelebrate, #achievements, #womenandchildren #notsafe, Kiren Rijiju,