ಲಿಮ್ಕಾ ದಾಖಲೆ ಬರೆದ ಬೃಹತ್ ತ್ರಿವರ್ಣ ಧ್ವಜ

Social Share

ಕೋಲಾರ, ಆ.16- ಸ್ವಾತಂತ್ರ್ಯದ 75 ಸಂವತ್ಸರಗಳನ್ನು ಪೂರೈಸಿದ ಸಂಭ್ರಮದಲ್ಲಿ ಜಿಲ್ಲೆಯಲ್ಲಿ ಬೃಹತ್ ತ್ರಿವರ್ಣ ಧ್ವಜ ಪ್ರದರ್ಶಿಸಿ ಲಿಮ್ಕಾ ಪುಸ್ತಕದಲ್ಲಿ ದಾಖಲೆ ನಿರ್ಮಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೋಲಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳ ಹರ್ ಘರ್ ತಿರಂಗಾ ಅಭಿಯಾನದ ಕರೆಗೆ ಓಗೊಟ್ಟು ಸಂಸದ ಎಸ್.ಮುನಿಸ್ವಾಮಿ ಅವರ ನೇತೃತ್ವದಲ್ಲಿ ದೇಶದ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಕ್ರೀಡಾಂಗಣದ ಉದ್ದಗಲಕ್ಕೂ ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ರಕ್ಷಣಾ ಇಲಾಖೆಯ ಸೇನಾ ಹೆಲಿಕಾಪ್ಟರ್‍ನಿಂದ ಪುಷ್ಪವೃಷ್ಟಿ ಸಲ್ಲಿಸಲಾಯಿತು.
ಆ ಕ್ಷಣದಲ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ಜನಸ್ತೋಮದ ಹರ್ಷೋದ್ಘಾರ ಎಲ್ಲೆ ಮೀರಿತ್ತು. ನಮ್ಮ ಧ್ವಜ ನಮ್ಮ ಹೆಮ್ಮೆ, ಭಾರತ ಮಾತೆಗೆ ಜೈಕಾರ ಸೇರಿದಂತೆ ದೇಶಪ್ರೇಮದ ಘೋಷಣೆಗಳನ್ನು ಕೂಗಿದರು. ಸಹಸ್ರಾರು ತ್ರಿವರ್ಣ ಧ್ವಜಗಳನ್ನು ಹಿಡಿದಿದ್ದ ಶಾಲಾ ಮಕ್ಕಳು ಸಂತಸದಿಂದ ಕುಣಿದಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಸೇರಿದಂತೆ ಜನಪ್ರತಿಧಿನಿಗಳು, ಅಧಿಕಾರಿಗಳು ಬೃಹತ್ ಬಾವುಟ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.

20್ಡ5630 ಅಡಿ ವಿಸ್ತಿರ್ಣ ಹೊಂದಿದ ರಾಷ್ಟ್ರಧ್ವಜವು ಒಟ್ಟು 1.29 ಲಕ್ಷ ಚದರ ಅಡಿ ಇದ್ದು, ಅದರಲ್ಲಿ 3600 ಚದರಡಿಯ ಅಶೋಕ ಚಕ್ರವನ್ನು ರೂಪಿಸಲಾಗಿದೆ. ಈ ಬಾವುಟ ತಯಾರಿಸಲು ಸುಮಾರು 12,800 ಮೀಟರ್ ಬಟ್ಟೆ ಬಳಸಲಾಗಿದ್ದು, 3200 ಕೆ.ಜಿ. ತೂಕ ಹೊಂದಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಮ್ಮ ಕೋಲಾರದ ದೇವರಾಯ ಸಮುದ್ರ ಬೆಟ್ಟದ ಮೇಲೆ 630 ಅಡಿ ಉದ್ದ ಹಾಗೂ 205 ಅಡಿ ರಾಷ್ಟ್ರಧ್ವಜವನ್ನು ಸೈನ್ಯಕ್ಕೆ ಸೇರಲು ತರಬೇತಿ ಪಡೆದ ಅಗ್ನಿಪಥ್ ಯೋಜನೆಯ ಯುವಕರು ಕೊಂಡೊಯ್ಯುತ್ತಿರುವುದು ನಿಜಕ್ಕೂ ರೋಮಾಂಚನ.

Articles You Might Like

Share This Article