Sunday, April 12, 2026
Homeರಾಷ್ಟ್ರೀಯದೆಹಲಿಯಲ್ಲಿ ಹೊತ್ತಿ ಉರಿದ ವಸತಿ ಕಟ್ಟಡ, ಮಹಡಿಯಿಂದ ಜಿಗಿದು ಜೀವ ಉಳಿಸಿಕೊಂಡ ನಿವಾಸಿಗಳು

ದೆಹಲಿಯಲ್ಲಿ ಹೊತ್ತಿ ಉರಿದ ವಸತಿ ಕಟ್ಟಡ, ಮಹಡಿಯಿಂದ ಜಿಗಿದು ಜೀವ ಉಳಿಸಿಕೊಂಡ ನಿವಾಸಿಗಳು

Fire breaks out in multi-storey house in Delhi's Chand Bagh; trapped residents rescued

ನವದೆಹಲಿ, ಮಾ.29-ಈಶಾನ್ಯ ದೆಹಲಿಯ ಗೋಕಲ್‌ ಪುರಿ ಪ್ರದೇಶದಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಕೆಲ ನಿವಾಸಿಗಳು ಕಟ್ಟಡದಿಂದ ಹಾರಿ ಜೕವ ಉಳಿಸಿಕೊಂಡಿದ್ದಾರೆ.

ಭಜನ್‌ಪುರ ಬಳಿಯ ಚಾಂದ್‌ ಬಾಗ್‌ ಪ್ರದೇಶದ ಎಫ್‌ ಬ್ಲಾಕ್‌ನಲ್ಲಿರವ ಕಟ್ಟಡ ದಲ್ಲಿ ಬೆಳಗಿನ ಜಾವ 2.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರು ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿ ನಿಲ್ಲಿಸಿದ್ದ ಎರಡು ಸ್ಕೂಟರ್‌ಗಳು ಮತ್ತು ಮೋಟಾರ್‌ಸೈಕಲ್‌ಗೆ ಬೆಂಕಿ ಹೊತ್ತಿಕೊಂಡ ನಂತರ ಭಾರೀ ಹೊಗೆ ಆವರಿಸಿತ್ತು.ನಂತರ ನಿಖತ್‌ (22), ರಶೀದಾ (50), ಸೋನಿ (25) ಮತ್ತು ಆಶಿಫ್‌ (2)ಎಂಬ ಮಗುವಿನ ಜೊತೆ ಒಂದನೇ ಮಹಡಿಯೊಂದ ಕೆಳಗೆ ಜಿಗಿದಿದ್ದಾರೆ.

ನಾಲ್ವರನ್ನೂ ಜಗ್‌ ಪ್ರವೇಶ್‌ ಚಂದ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಅವರು ಅಪಾಯದಿಂದ ಪಾರಾಗಿದ್ದಾರೆ.ಎರಡನೇ, ಮೂರನೇ ಮತ್ತು ನಾಲ್ಕನೇ ಮಹಡಿಗಳಲ್ಲಿ ದಟ್ಟ ಹೊಗೆಯಿಂದ ಆವೃತವಾಗಿದ್ದ ಮಕ್ಕಳು ಸೇರಿದಂತೆ ಇತರ ಎಂಟು ನಿವಾಸಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ
ಅಧಿಕಾರಿಗಳ ಪ್ರಕಾರ,

ಕಟ್ಟಡವು ಸಾಂದ್ರವಾದ ರಚನೆಯನ್ನು ಹೊಂದಿದ್ದು, ಇದರಿಂದಾಗಿ ಹೊಗೆ ವೇಗವಾಗಿ ಸಂಗ್ರಹವಾಗಲು ಕಾರಣವಾಯಿತು, ಇದರಿಂದಾಗಿ ನಿವಾಸಿಗಳಿಗೆ ಸ್ಥಳಾಂತರಿಸುವುದು ಕಷ್ಟಕರವಾಗಿತ್ತು. ಮುಂಜಾನೆ 3.50 ರ ಹೊತ್ತಿಗೆ ಬೆಂಕಿಯನ್ನು ನಂದಿಸಲಾಯಿತು ಮತ್ತು ತಂಪಾಗಿಸುವ ಕಾರ್ಯಾಚರಣೆ ನಡೆಯುತ್ತಿದೆ. ಬೆಂಕಿಯ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು.

RELATED ARTICLES

Latest News