Sunday, April 12, 2026
Homeರಾಷ್ಟ್ರೀಯ'ಸವಾಲುಗಳನ್ನು ಎದುರಿಸಲು ಸಿದ್ದರಾಗಿ' : ಮನ್‌ ಕಿ ಬಾತ್‌ನಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಕರೆ

‘ಸವಾಲುಗಳನ್ನು ಎದುರಿಸಲು ಸಿದ್ದರಾಗಿ’ : ಮನ್‌ ಕಿ ಬಾತ್‌ನಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಕರೆ

Mann ki Baat: PM Modi urges citizens to jointly face challenges emerging due to West Asia war

ನವದೆಹಲಿ, ಮಾ.29- ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆಯಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಒಟ್ಟಾಗಿ ಎದುರಿಸಲು ದೇಶದ ಎಲ್ಲ ನಾಗರಿಕರು ಏಕತೆಯಿಂದ ಮುಂದಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಜೊತೆಗೆ, ಎಲ್ಲರೂ ಎಚ್ಚರಿಕೆಯಿಂದಿದ್ದು ,ವದಂತಿಗಳಿಗೆ ಒಳಗಾಗಬಾರದು ಎಂದು ಆಕಾಶವಾಣಿಯಲ್ಲಿ ತಮ ಮಾಸಿಕ ಮನ್‌ ಕಿ ಬಾತ್‌ನಲ್ಲಿ ತಿಳಿಸಿದ್ದಾರೆ.

ಗಲ್‌್ಫ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ 1 ಕೋಟಿಗೂ ಹೆಚ್ಚು ಭಾರತೀಯರಿಗೆ ಎಲ್ಲ ರೀತಿಯ ಸಹಾಯ ನೀಡುತ್ತಿರುವುದಕ್ಕಾಗಿ ಆ ದೇಶಗಳಿಗೆ ಕೃತಜ್ಞತೆ ಸಲ್ಲಿಸಿದರು.

ನಮ ನೆರೆಯ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಗಿಂತ ಹೆಚ್ಚು ಕಾಲದಿಂದ ತೀವ್ರ ಯುದ್ಧ ನಡೆಯುತ್ತಿದೆ. ಇದು ನಿಶ್ಚಯವಾಗಿಯೂ ಸವಾಲಿನ ಸಮಯ. ಮತ್ತೊಮೆ 140 ಕೋಟಿ ಭಾರತೀಯರು ಒಟ್ಟಾಗಿ ಈ ಸವಾಲನ್ನು ಎದುರಿಸಬೇಕು ಎಂದು ಈ ಮೂಲಕ ಮನವಿ ಮಾಡುತ್ತೇನೆ ಎಂದು ಪ್ರಧಾನಿ ಹೇಳಿದರು.

ಪಶ್ಚಿಮ ಏಷ್ಯಾದ ಸಂಘರ್ಷವು ಫೆಬ್ರವರಿ 28ರಿಂದ ಆರಂಭಗೊಂಡಿದ್ದು, ಅಮೆರಿಕ ಮತು ್ತಇಸ್ರೇಲ್‌ ಜೊತೆಗೂಡಿ ಇರಾನ್‌ ಮೇಲೆ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಇರಾನ್‌ ತನ್ನ ನೆರೆಯ ಪ್ರದೇಶದಲ್ಲಿರುವ ಅಮೆರಿಕದ ಮೈತ್ರಿ ರಾಷ್ಟ್ರಗಳು ಹಾಗೂ ರಾಯಭಾರ ಕಚೇರಿ ಮತ್ತು ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡಿದೆ.

ಇರಾನ್‌ ನಿಯಂತ್ರಣದಲ್ಲಿರುವ ಹಾರ್ಮುಜ್‌ ಜಲಸಂಧಿ ಜಾಗತಿಕವಾಗಿ ಮಹತ್ವದ ಸಾಗಣೆ ಮಾರ್ಗವಾಗಿದ್ದು, ವಿಶ್ವದ ಸುಮಾರು ಶೇ.20 ರಷ್ಟು ಇಂಧನ ಈ ಮಾರ್ಗದ ಮೂಲಕ ಸಾಗುತ್ತದೆ. ಸಂಘರ್ಷ ಆರಂಭವಾದ ಬಳಿಕ ಬಹಳ ಕಡಿಮೆ ಹಡಗುಗಳಿಗೆ ಮಾತ್ರ ಈ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಈಗಾಗಲೆ ಬಹ್ರೇನ್‌, ಕುವೈತ್‌, ಜೋರ್ಡಾನ್‌, ಇರಾನ್‌, ಫ್ರ್ಸ್‌ಾ, ಇಸ್ರೇಲ್‌ ಮತ್ತು ಮಲೇಶ್ಯಾ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಿ ಶಾಂತಿ ಪ್ರಕ್ರಿಯೆಗೆ ಮನವಿ ಮಾಡಿದ್ದೇನೆ ಇದರ ಜೊತೆಗೆ ಮಾರ್ಚ್‌ 24ರಂದು ಟ್ರಂಪ್‌ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಉಪಯುಕ್ತ ಅಭಿಪ್ರಾಯ ವಿನಿಮಯ ಮಾಡಿಕೊಂಡೆವು ಎಂದು ತಿಳಿಸಿದ್ದಾರೆ.

RELATED ARTICLES

Latest News