ಭೋಪಾಲ್, ಮಾರ್ 29 : ಹುಲಿಗೆ ವಿಷ ಹಾಕಿ ಕೊಂದಿರುವ ಘಟನೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಇಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರು ತಮ ಪಶುಗಳ ಮೇಲೆ ದಾಳಿ ಮಾಡಿದ ಕಾರಣ ಪ್ರತೀಕಾರವಾಗಿ, ಅದರ ಆಹಾರಕ್ಕೆ ವಿಷ ಬೆರೆಸಿ ಕೊಂದಿದ್ದಾರೆ ಎನ್ನಲಾಗಿದೆ.
ಇದಲ್ಲದೆ ಇವರು ಮಾದಕ ಅಫೀಮು ಬೆಳೆ ಬೆಳೆದ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂದು ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕಿ ರಾಖಿ ನಂದಾ ತಿಳಿಸಿದ್ದಾರೆ. ಚಿಂದ್ವಾರಾ ಪಶ್ಚಿಮ ವಿಭಾಗದ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಗುಂಡಿಯಲ್ಲಿ ಹೂತು ಇಟ್ಟ ಸ್ಥಿತಿಯಲ್ಲಿ ಹುಲಿಯ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹುಲಿಯನ್ನು ಡಿಸೆಂಬರ್ 2004ರಲ್ಲಿ ಬಾಂಧವಗಢ ಹುಲಿ ಅಭಯಾರಣ್ಯದಿಂದ ತರಲಾಗಿತ್ತು.
ಇದು ಕೇವಲ ಬೇಟೆಯ ಪ್ರಕರಣವಲ್ಲ, ಆಡಳಿತ ಮತ್ತು ನಿಗಾವಹಿಸುವ ವ್ಯವಸ್ಥೆಯ ವೈಫಲ್ಯದ ಸ್ಪಷ್ಟ ಉದಾಹರಣೆ,ಎಂದು ಆರೋಪಿಸಲಾಗಿದೆ ಈ ಪ್ರಕರಣದ ಸಮಗ್ರ ತನಿಖೆಗಾಗಿ ಕ್ಷೇತ್ರ ನಿರ್ದೇಶಕಿ ನಂದಾ ಅವರನ್ನುವರ್ಗಾವಣೆ ಮಾಡಬೇಕು ಎಮದು ಪರಿಸರವಾದಿಗಳು ಒತ್ತಾಯಿಸಿದ್ದಾರೆ. ಈ ವರ್ಷ ಜನವರಿಯಿಂದ ಮಧ್ಯಪ್ರದೇಶದಲ್ಲಿ ಈಗಾಗಲೇ 14 ಹುಲಿಗಳು ಸಾವನ್ನಪ್ಪಿವೆ.
