‘ರಾಷ್ಟ್ರೀಯ ಐಕ್ಯತಾ ದಿವಸ್‍’ಗಾಗಿ ನಾಳೆ ಓಟ

Social Share

ಬೆಂಗಳೂರು, ಅ.29- ಭಾರತ ಸರ್ಕಾರವು ಅ. 31ರಂದು ದಿವಂಗತ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ 147ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಐಕ್ಯತಾ ದಿವಸ್ ಎಂದು ಆಚರಣೆ ಮಾಡಲು ನಿರ್ಧರಿಸಿದೆ.

ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಮತ್ತು ರಾಷ್ಟ್ರದ ಐಕ್ಯತೆ, ಭದ್ರತೆ ಹಾಗೂ ಸಮಗ್ರತೆಗಾಗಿ ನಾಳೆ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ 10 ಕಿಲೋ ಮೀಟರ್ ಐಕ್ಯತಾ ಓಟವನ್ನು ಆಯೋಜಿಸಲಾಗಿದೆ. ಈ ಐಕ್ಯತಾ ಓಟದಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ಘಟಕಗಳಿಂದ ಸುಮಾರು 500 ಮಂದಿ ಅಧಿಕಾರಿ- ಸಿಬ್ಬಂದಿಗಳು ಭಾಗವಹಿಸಲಿದ್ದಾರೆ.

ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮುಂಭಾಗ ನಾಳೆ ಬೆಳಗ್ಗೆ 6.30ಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಚಾಲನೆ ನೀಡಲಿದ್ದಾರೆ. ಈ ಐಕ್ಯತಾ ಓಟವು ಕಂಠೀರವ ಕ್ರೀಡಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ.

ಸದ್ಯಕ್ಕೆ ಟ್ವಿಟರ್‌ನಲ್ಲಿ ನಿರ್ಬಂಧಗಳ ಸಡಿಲಿಕೆ ಇಲ್ಲ

8 ಗಂಟೆಗೆ ಮುಕ್ತಾಯ ಸಮಾರಂಭದಲ್ಲಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಐಕ್ಯತಾ ಓಟದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದ ಅಧಿಕಾರಿ/ ಸಿಬ್ಬಂದಿಗೆ ಪದಕ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿದೆ.

ಅಪ್ಪು ಸಾಧನೆ ಪಠ್ಯವಾಗಲಿ : ಅಭಿಮಾನಿಗಳ ಆಗ್ರಹ

ನಗರದಲ್ಲಿ ಅಲ್ಲದೆ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಎಲ್ಲಾ ಪೊಲೀಸ್ ಘಟಕಗಳಲ್ಲಿ ಐಕ್ಯತಾ ಓಟವನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ಐಕ್ಯತಾ ದಿವಸ್: ರಾಷ್ಟ್ರೀಯ ಐಕ್ಯತಾ ದಿವಸ್‍ದಂದು ಐಕ್ಯತಾ ಪ್ರತಿಮೆ ಕೆವಾಡಿಯಾ, ಗುಜರಾತ್‍ನಲ್ಲಿ ರಾಷ್ಟ್ರದ ಎಲ್ಲಾ ರಾಜ್ಯಗಳ ಪೊಲೀಸ್ ಪಡೆಗಳು ಹಾಗೂ ಅರೆ ಸೇನಾ ಪಡೆಗಳಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ನಮನವನ್ನು ಕವಾಯತು ಮುಖಾಂತರ ಸಲ್ಲಿಸಲಾಗುತ್ತದೆ.

Articles You Might Like

Share This Article