ನ್ಯಾಟೋ ಮಹತ್ವದ ಸಭೆಯಲ್ಲಿ ಭಿನ್ನಾಭಿಪ್ರಾಯ

Social Share

ವಾಷಿಂಗ್ಟನ್,ಫೆ.25- ಉಕ್ರೇನ್ ಮೇಲೆ ರಷ್ಯಾ ದಾಳಿ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಅಭಿಪ್ರಾಯ ಕ್ರೂಢೀಕರಿಸಲು ನಾಳೆ ಬೆಳಗ್ಗೆ 9 ಗಂಟೆಗೆ ನ್ಯಾಟೋ ರಾಷ್ಟ್ರಗಳ ಸಭೆ ಕರೆಯಲಾಗಿದೆ ಎಂದು ಶ್ವೇತ ಭವನ ತಿಳಿಸಿದೆ. ರಷ್ಯಾ-ಉಕ್ರೇನ್ ಸಂಘರ್ಷ ದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಮಹಾಯುದ್ಧದ ಕರಿಛಾಯೆ ಆವರಿಸಿದೆ. ಬಹಳಷ್ಟು ರಾಷ್ಟ್ರಗಳ ಎಚ್ಚರಿಕೆ ನಡುವೆಯೂ ಕೂಡ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜಾಗತಿಕ ರಾಷ್ಟ್ರಗಳು ರಷ್ಯಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ. ಆದರೆ, ನ್ಯಾಟೋ ಪಡೆಗಳು ಉಕ್ರೇನ್‍ಗೆ ತೆರಳಿ ರಷ್ಯಾ ಸೇನಾ ಪಡೆಗೆ ಪ್ರತ್ಯುತ್ತರ ನೀಡುವ ಅವಕಾಶಗಳು ಕಡಿಮೆ ಎಂದು ಹೇಳಲಾಗಿದೆ.
ಈ ಮೊದಲು ಅಮೆರಿಕ ಸೇರಿದಂತೆ ನ್ಯಾಟೋ ರಾಷ್ಟ್ರಗಳು ನೇರವಾಗಿ ಅಖಾಡಕ್ಕಿಳಿಯಲಿದ್ದು, ರಷ್ಯಾ ಸೇನೆಯೊಂದಿಗೆ ಸಂಘರ್ಷ ನಡೆಸಲಿವೆ ಎಂಬ ಮಾತುಗಳು ಇದ್ದವು. ಆದರೆ, ಇದ್ದಕ್ಕಿದ್ದಂತೆ ಕೆಲವು ರಾಷ್ಟ್ರಗಳು ಪ್ರತಿ ದಾಳಿಯಿಂದ ಹಿಂದೆ ಸರಿದಿವೆ.  ಬದಲಾಗಿ ಮಾತುಕತೆ ಮತ್ತು ರಾಜತಾಂತ್ರಿಕತೆಯಿಂದ ಸಮಸ್ಯೆ ಬಗೆಹರಿಸಬಹುದು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಹೀಗಾಗಿ ನಾಳೆ ನಡೆಯುವ ಸಭೆ ಅತ್ಯಂತ ಮಹತ್ವದ್ದಾಗಿದೆ.

Articles You Might Like

Share This Article