ಬೆಂಗಳೂರು, ಫೆ.12-ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನೈಸರ್ಗಿಕ ಸಾವಯವ ಉತ್ಪನ್ನಗಳ ಶಾಖೆ ಉದ್ಘಾಟನೆಗೊಂಡಿದೆ. ಗ್ರಾಮ ರಾಜ್ಯ ಟ್ರಸ್ಟ್ ಇದು ಶಿವಮೊಗ್ಗದಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಅಂಗ ಸಂಸ್ಥೆಯಾಗಿದ್ದು, ಇದರ ಮೂಲಕ ನೈಸರ್ಗಿಕ ಸಾವಯವ ಪದಾರ್ಥಗಳು ಲಭ್ಯವಿದೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ 28 ನೇ ಶಾಖೆ ಧಾನ್ಯ ನ್ಯಾಚುರಲ್ಸ ಪ್ರಾರಂಭಗೊಂಡಿತು. ನಟ ಹಾಗೂ ನಿರ್ದೇಶಕ ಎಸ್.ನಾರಾಯಣ್ ಶಾಖೆಗೆ ಚಾಲನೆ ನೀಡಿದರು.
ಅಂಗಡಿಯಲ್ಲಿ ದಿನಸಿ, ಧಾನ್ಯಗಳು, ಪೂಜಾ ಸಾಮಾಗ್ರಿಗಳು, ಮಸಾಲ ಉತ್ಪನ್ನಗಳು, ಹರ್ಬಲ, ಡ್ರೈಫ್ರೂಟ್ಸ್ ಮತ್ತು ಜೇನುತುಪ್ಪ, ಗವ್ಯೋತ್ಪನ್ನಗಳು, ಪರ್ಸನಲ್ ಕೇರ್ ಐಟಮ್ಸ, ಗಾರ್ಡನ್ ಕೇರ್, ಕ್ಲೀನಿಂಗ್, ಹೌಸ್ ಹೋಲ್ಡ, ಚೂರ್ಣ ಹಾಗೂ ಗಿಡಮೂಲಿಕೆಗಳು ಮುಂತಾದವು ಕಡಿಮೆ ದರದಲ್ಲಿ ಸಿಗಲಿದೆ.
ಮಾಲೀಕರಾದ ಸ್ವಾತಿಮುಡಿಯೂರ್ ಹೇಳುವಂತೆ, ಈ ಮೊದಲು ಗ್ರಾಹಕಿಯಾಗಿದ್ದು, ಎಲ್ಲೇ ಹೋದರೂ ಇದರ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಇದರಿಂದ ಪ್ರೇರಣೆಗೊಂಡು ಶಾಖೆಯನ್ನು ತೆರೆಯಲಾಯಿತು. ಮುಂದೆ ವಿಸ್ತರಿಸಬೇಕೆಂಬ ಯೋಜನೆ ಇದೆ ಎಂದಿದ್ದಾರೆ.
ರ್ಯಾಪಿಡ್ ರಶ್ಮಿ, ನಟ ಮೋಹನ್, ಕಾಪೆಪೋರೇಟರ್ ರಾಘವೇಂದ್ರ ಮತ್ತು ಗ್ರಾಮರಾಜ್ಯದ ಪದಾಕಾರಿಗಳು ಹಾಜರಿದ್ದರು.
