ಮಾಸ್ಕೋವ್, ಮಾ.1- ಉಕ್ರೇನ್ ಮೇಲಿನ ದಾಳಿಯನ್ನು ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಖಂಡಿಸಿದ್ದು, ದೇಶದ ಜನ ಅಸಹಕಾರ ತೋರಿಸುವಂತೆ ಮನವಿ ಮಾಡಿದ್ದಾರೆ. ಚಳುವಳಿಯ ಕಾರಣಕ್ಕೆ ಜೈಲಿನಲ್ಲಿರುವ ನಬಲ್ನಿ, ರಷ್ಯಾದ ಪ್ರತಿಯೊಬ್ಬರ ಇಚ್ಚೆಯಿಂದ ದಾಳಿ ಮಾಡಿರುವುದಾಗಿ ಅಧ್ಯಕ್ಷ ವಾಡ್ಲಿಮಿರ್ ಪುಟೀನ್ ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ ಅದು ಆ ರೀತಿಯಿಲ್ಲ, ಉಕ್ರೇನಿಯರನು ರಷ್ಯಾದ ಪ್ರಜೆಗಳ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ರಷ್ಯಾದ ಎಲ್ಲಾ ಜನ ದಾಳಿಗೆ ಬೆಂಬಲವಾಗಿಲ್ಲ. ಅಧ್ಯಕ್ಷರು ಬಿಂಬಿಸುತ್ತಿರುವುದು ಸರಿಯಲ್ಲ. ನಾವು ಯುದ್ಧಕ್ಕೆ ಬೆಂಬಲವಾಗಿಲ್ಲ ಎಂಬುದನ್ನು ನಾವು ತೋರಿಸಬೇಕಿದೆ. ಇದಕ್ಕಾಗಿ ಮೌನವಾಗಿರದೇ, ನಾಗರೀಕ ಅಹಕಾರ ತೋರಿಸಬೇಕಿದೆ ಎಂದು ನವಲ್ನಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಯುದ್ಧ ಆರಂಭದ ದಿನದಿಂದಲೂ ರಷ್ಯಾದಲ್ಲಿ ಚಳವಳಿಗಳು ಆರಂಭವಾಗಿವೆ. ಸಾವಿರಾರು ಜನ ದೇಶಾದ್ಯಂತ ಪ್ರತಿಭಟನೆ ನಡೆಸಿದ ಯುದ್ಧವನ್ನು ವಿರೋಧಿಸಿದ್ದಾರೆ. ಇಂದು ಕೂಡ ರಾಜಧಾನಿ ಮಾಸ್ಕೋವ್ ಸೇರಿದಂತೆ ಹಲವು ಭಾಗಗಳಲ್ಲಿ ಪ್ರತಿಭಟನೆಗಳಾಗಿವೆ.
ಒಂದೆಡೆ ಜಾಗತಿಕ ರಾಷ್ಟ್ರಗಳ ಪ್ರತಿರೋಧ ಹಾಗೂ ದೇಶಿಯ ಜನರ ವಿರೋಧದ ನಡುವೆಯೂ ಅಧ್ಯಕ್ಷ ಪುಟಿನ್ ತಮ್ಮ ನಿಲುವನ್ನು ಬದಲಿಸದೆ ಯುದ್ಧವನ್ನು ಮುಂದುವರೆಸಿದ್ದು, ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ.
