ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ

Spread the love

ನವದೆಹಲಿ.ಮೇ.19-ಕಳೆದ 1988 ರ ರಸ್ತೆ ಅಪಘಾತ ಪ್ರಕರಣದಲ್ಲಿ ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧುಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.  34 ವರ್ಷಗಳ ಹಿಂದಿನ ರಸ್ತೆ ಅಪಘಾತ ಪ್ರಕರಣದಲ್ಲಿ ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಎಂಬುವವರು ಸಾವನ್ನಪ್ಪಿದ್ದರು ಆಗ ಪಂಜಾಬ್ ಪೊಲೀಸರು ನವಜೋತ್ ಸಿಂಗ್ ಸಿದ್ಧು ಮೇಲೆ ಪ್ರಕರಣ ದಾಖಲಾಗಿತ್ತು .ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸ್ಥಳೀಯ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿತ್ತು.

2018ರ ಮೇ ನಲ್ಲಿ ಆದೇಶವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮ್ಮತಿ ನೀಡಿತ್ತು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು. ಒನ್ನೊಂದೆಡೆ ಕಳೆದ 2018 ಮೇನಲ್ಲಿ 65 ವರ್ಷ ವಯಸ್ಸಿನ ವ್ಯಕ್ತಿಗೆ ಸ್ವಯಂಪ್ರೇರಿತವಾಗಿ ಹಾನಿಯನ್ನುಂಟು ಮಾಡಿದ ಪ್ರಕರಣದಲ್ಲಿ ನವಜೋತ್ ಸಿಧು ತಪ್ಪಿತಸ್ಥರೆಂದು ಕಂಡುಬಂದರೂ, ಸುಪ್ರೀಂ ಕೋರ್ಟ್ ಅವರಿಗೆ ಜೈಲು ಶಿಕ್ಷೆಯನ್ನು ತಪ್ಪಿಸಿ ಮತ್ತು ರೂ 1,000 ದಂಡವನ್ನು ವಿಧಿಸಿತು.

ಅದರೆ ಅಪಘಾತ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ನೀಡಿದೆ. ಆದೇಶದಂತೆ ಪಂಜಾಬ್ ಪೊಲೀಸರು ಸಿಧು ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Facebook Comments