ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪತ್ನಿ ಕುರಿತು ಸಿಧು ಭಾವನಾತ್ಮಕ ಪೋಸ್ಟ್

ನವದೆಹಲಿ,ಏ.6- ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಶಸ್ತ್ರ ಚಿಕಿತ್ಸೆ ಬಳಿಕ ಚಿತ್ರವೊಂದನ್ನು ಹಂಚಿಕೊಂಡು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ತಮ್ಮ ಪತ್ನಿಯ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಡೇಟ್‍ಗಳನ್ನು ಹಂಚಿಕೊಂಡಿರುವ ಸಿಧು ಅಪರೂಪದ ಕಾಯಿಲೆಯಾದ ಮೆಟಾಸ್ಟಾಸಿಸ್‍ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ರೋಗದಿಂದ ಪೀಡಿತ ಚರ್ಮವನ್ನು ತೆಗೆದು ಹಾಕಲಾಯಿತು ಮತ್ತು ಫ್ಲಾಪ್ ಬಳಸಿ ಮರುನಿರ್ಮಾಣ ಮಾಡಲಾಯಿತು ಎಂದು ಬರೆದುಕೊಂಡಿದ್ದಾರೆ. ಆಕೆಯ ಸಂಕಲ್ಪ ಬಲವಾಗಿದೆ, ಯಾವಾಗಲೂ ಮುಖದಲ್ಲಿ ನಗು … Continue reading ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪತ್ನಿ ಕುರಿತು ಸಿಧು ಭಾವನಾತ್ಮಕ ಪೋಸ್ಟ್