5 ಲಕ್ಷ ಬಹುಮಾನ ಘೋಷಿತವಾಗಿದ್ದ ನಕ್ಸಲ್‍ ಲಖ್ಮಾ ಸೋದಿ ಎನಕೌಂಟರ್ ಗೆ ಬಲಿ

Social Share

ದಂತೇವಾಡ,ಫೆ.20- ಹಲವಾರು ಹಿಂಸಾಚಾರ ಘಟನೆಗಳಲ್ಲಿ ಭಾಗಿಯಾಗಿ ರುವ ಆರೋಪ ಹೊತ್ತು ಆತನ ತಲೆಗೆ ಐದು ಲಕ್ಷ ರೂ. ಬಹುಮಾನ ಘೋಷಿತವಾಗಿದ್ದ ನಕ್ಸಲೀಯನೊಬ್ಬ ಛತ್ತೀಸ್‍ಗಢದ ದಂತೇವಾಡ ಜಿಲ್ಲೆಯಲ್ಲಿ ಪೊಲೀಸರ ಎನ್‍ಕೌಂಟರ್‍ನಲ್ಲಿ ಹತನಾಗಿದ್ದಾನೆ. ಜಿಲ್ಲೆಯ ಅರ್ನಾಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಬುರ್‍ಗುಮ್ ಗ್ರಾಮದಲ್ಲಿನ ಅರಣ್ಯವೊಂದರ ಸಮೀಪ ನಕ್ಸಲರೊಂದಿಗೆ ನಿನ್ನೆ ಮಧ್ಯರಾತ್ರಿ ಗುಂಡಿನ ಕಾಳಗ ನಡೆಯಿತು.
ಜಿಲ್ಲಾ ಮೀಸಲು ಕಾವಲು ಪಡೆ ನಕ್ಸಲ್ ವಿರೋ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಗುಂಡಿನ ಚಕಮಕಿ ನಡೆದಿದೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಕಾರಿ ಸಿದ್ದಾರ್ಥ ತಿವಾರಿ ತಿಳಿಸಿದ್ದಾರೆ. ಪೊಲೀಸರ ಗುಂಡೇಟಿಗೆ ಬಲಿಯಾದ ಈತನನ್ನು ಲಖ್ಮಾ ಸೋದಿ(34) ಎಂದು ಗುರುತಿಸಲಾಗಿದೆ. ಈತನ ತಲೆಗೆ ಐದು ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಸೋದಿ ಮಾವೋವಾದಿ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದನು. ಈತ ಮಲಂಗೇರ್ ಪ್ರದೇಶ ಮಾವೋವಾದಿ ಸಮಿತಿಯ ಉಸ್ತುವಾರಿ ಕಮಾಂಡರ್ ಆಗಿದ್ದ ಎನ್ನಲಾಗಿದೆ. ಈತನು ಕೊಲೆ, ಕೊಲೆಯತ್ನ, ಅಪಹರಣ ಮುಂತಾದ 13ಕ್ಕೂ ಅಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಅವರು ತಿಳಿಸಿದ್ದಾರೆ.
ಮೃತನಿಂದ ಒಂದು ಪಿಸ್ತೂಲ್, 5 ಕೆಜಿ ಟಿಫಿನ್ ಬಾಂಬ್, ನಕ್ಸಲ್ ಸಮವಸ್ತ್ರ, ವಿದ್ಯುತ್ ವೈರ್‍ಗಳು, ವೈರ್ ಕಟರ್, ನಕ್ಸಲ್ ಸಾಹಿತ್ಯ ಮತ್ತು ಕೆಲವು ಕ್ಯಾಂಪಿಂಗ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿವಾರಿ ವಿವರಿಸಿದ್ದಾರೆ.

Articles You Might Like

Share This Article