ಛತ್ತೀಸ್‍ಗಢ (ಬಿಜಾಪುರ), ಜ.8- ಛತ್ತೀಸ್‍ಗಢದ ಬಸ್ತಾರ್ ವಿಭಾಗದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿ ಗುಂಪಿಗೆ ಸೇರಿದ ಮೂವರು ನಕ್ಸಲರನ್ನು ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ.ಸಿಪಿಐಗೆ ಸಂಬಂಧಿಸಿದ ಮೂವರು ನಕ್ಸಲರು ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ ಎಂದು ಬಸ್ತರ್ ವಲಯದ ಐಜಿಪಿ ಸುಂದರ್‍ರಾಜ್ ಮಾಹಿತಿ ನೀಡಿದ್ದಾರೆ.
ಜನವರಿ 6ರಂದು ನಡೆದ ಕಾರ್ಯಾಚರಣೆಯಲಿ ಈ ಮೂವರು ಮೃತಪಟ್ಟಿದ್ದಾರೆ. ಕಮ್ಲು ಪುನೆಂ ಮತ್ತು ಪುಂಗಿ ಎಂಬ ಇಬ್ಬರನ್ನು ಹೊಡೆದುರುಳಿಸಲಾಗಿದ್ದು, ಅವರಿಬ್ಬರೂ ವಿವಾಹವಾಗಲು ನಕ್ಸಲ್ ಕ್ಯಾಂಪ್‍ನಿಂದ ಹೊರಬಂದಿದ್ದರು ಎಂದು ತಿಳಿದುಬಂದಿದೆ.
ಮೂರನೆ ನಕ್ಸಲ್ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಈ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಬಿಜಾಪುರ ಪೊಲೀಸರು ಮುಂದಾಗಿದ್ದಾರೆ. ನಕ್ಸಲರು ಸಾಕಷ್ಟು ಹತಾಶೆ ಅನುಭವಿಸುತ್ತಿದ್ದು, ಪೊಲೀಸರ ಇತ್ತೀಚಿನ ಕಾರ್ಯಾಚರಣೆಯಿಂದಾಗಿ ದಿಕ್ಕಿಲ್ಲದಂತಾಗಿದ್ದಾರೆ.
