ನವದೆಹಲಿ,ಜೂ.6- ಬೃಹತ್ ಕಾರ್ಯಚರಣೆ ನಡೆಸಿರುವ ಮಾದಕ ವಸ್ತುಗಳ ನಿಯಂತ್ರಣ ದಳ (ಎನ್‍ಸಿಬಿ) 25 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ. ಎನ್‍ಸಿಬಿ ಅಧಿಕಾರಿಗಳು ಇದುವರೆಗೂ ನಡೆಸಿರುವ ದಾಳಿಯಲ್ಲಿ 25 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಭಾರಿ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗಿದೆ.
ಏಜೆನ್ಸಿಯು ರಾಷ್ಟ್ರವ್ಯಾಪಿ ಡಾರ್ಕ್‍ನೆಟ್ ಆಧಾರಿತ ಡ್ರಗ್ ಸಿಂಡಿಕೇಟ್ ಅನ್ನು ಭೇದಿಸಿದ ನಂತರ ಹಲವಾರು ಕಳ್ಳಸಾಗಣೆದಾರರನ್ನು ಬಂಧಿಸಿ ಭಾರಿ ಪ್ರಮಾಣದ ಪಾರ್ಟಿಗಳಲ್ಲಿ ಬಳಸಲು ಸಾಗಿಸುತ್ತಿದ್ದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಮಾದಕ ವಸ್ತು ವಶಪಡಿಸಿಕೊಂಡ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಎನ್‍ಸಿಬಿ ಅಧಿಕಾರಿಗಳು ನಿರಾಕರಿಸಿದ್ದು ಹೆಚ್ಚಿನ ಮಾಹಿತಿಗಳನ್ನು ನಂತರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಮನರಂಜನೆ ಉಚಿತ ಅಲ್ಲ ಖಚಿತ ಅಂತಿದ್ದಾರೆ ವಿ.ಮನೋಹರ್..!
ಕಳೆದ ತಿಂಗಳು, ಭಾರತೀಯ ನೌಕಾಪಡೆಯ ವಿಶೇಷ ಕಾರ್ಯಾಚರಣೆಯಲ್ಲಿ, ಏಜೆನ್ಸಿಯು ಕೇರಳದ ಕರಾವಳಿಯಲ್ಲಿ ದೋಣಿಯಲ್ಲಿ ಸಾಗಿಸುತ್ತಿದ್ದ 25,000 ಕೋಟಿ ಮೌಲ್ಯದ 2,525 ಕೆಜಿ ಮೆಥಾಂಫೆಟಮೈನ್ ಅನ್ನು ವಶಪಡಿಸಿಕೊಂಡಿತ್ತು. ಇದುವರೆಗಿನ ದಾಳಿಯಲ್ಲಿ ಈ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದು ಇದೇ ಮೊದಲು ಎಂದು ಡೆಪ್ಯುಟಿ ಡೈರೆಕ್ಟರ್ ಜನರಲ್ ಸಂಜಯ್‍ಕುಮಾರ್ ಸಿಂಗ್ ತಿಳಿಸಿದ್ದರು.
ಎನ್‍ಸಿಬಿ ಮತ್ತು ನೌಕಾಪಡೆಯು ಹಿಂದೂ ಮಹಾಸಾಗರದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ದೇಶದ ವಿತ್ತಿಯ ಮೌಲ್ಯಕ್ಕಿಂತಲೂ ಅಧಿಕ ಬೆಲೆ ಬಾಳುವ ಡ್ರಗ್ಸ್ ವಶಪಡಿಸಿಕೊಂಡಿದೆ. ಈ ಪ್ರಮಾಣದ ಮಾದಕ ದ್ರವ್ಯವನ್ನು ಇರಾನ್‍ನ ಚಬಹಾರ್ ಬಂದರಿನಿಂದ ಸಾಗಿಸಲಾಗುತಿತ್ತು ಎನ್ನಲಾಗಿದ್ದು, ಡ್ರಗ್ಸ್‍ನ ಮೂಲ ಪಾಕಿಸ್ತಾನ ಎಂದು ತಿಳಿದುಬಂದಿದೆ.
ಈಜಿಪುರ ಮೇಲ್ಸೇತುವೆ ಶೀಘ್ರ ಪೂರ್ಣಗೊಳಿಸಲು ಡಿಸಿಎಂ ಆದೇಶ
ಆಪರೇಷನ್ ಸಮುದ್ರಗುಪ್ತ ಹೆಸರಿನ ವಿಶೇಷ ಕಾರ್ಯಾಚರಣೆಯನ್ನು ಫೆಬ್ರವರಿ 2022 ರಲ್ಲಿ ಪ್ರಾರಂಭಿಸಲಾಗಿದ್ದು, ಇದುವರೆಗೆ 4,000 ಕೆಜಿಗೂ ಹೆಚ್ಚು ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
#NCB, #busts, #panIndia, #drug, #trafficking,