ನಾಲ್ಕು ತಿಂಗಳ ಹಸುಳೆಯೊಂದಿಗೆ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿದ್ದ ಶಾಸಕಿ

Social Share

ಮುಂಬೈ,ಫೆ 27- ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶದಲ್ಲಿ ಎನ್‍ಸಿಪಿ ಶಾಸಕಿಯೊಬ್ಬರು ತಮ್ಮ ನಾಲ್ಕು ತಿಂಗಳ ಮಗುವಿನೊಂದಿಗೆ ಭಾಗವಹಿಸಿ ಗಮನ ಸೆಳೆದರು.

ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ಮುಂಬೈಗೆ ಆಗಮಿಸಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‍ಸಿಪಿ) ಶಾಸಕಿ ಸರೋಜ್ ಅಹಿರೆ ಅವರು ತಮ್ಮ ನಾಲ್ಕು ತಿಂಗಳ ಮಗನೊಂದಿಗೆ ಕಾಣಿಸಿಕೊಂಡರು. ಕಳೆದ ವರ್ಷ ಡಿಸೆಂಬರ್‍ನಲ್ಲಿ ನಾಗ್ಪುರದಲ್ಲಿ ನಡೆದ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲೂ ಅಹಿರೆ ಮಗುವಿನೊಂದಿಗೆ ಭಾಗವಹಿಸಿದ್ದರು.

ಬಿಎಸ್‍ವೈಗೆ ಮೋದಿ ಬಹುಪರಾಕ್

ವಿಧಾನಭವನದಲ್ಲಿ ಹಿರ್ಕಾನಿ ಘಟಕವಿದ್ದು, ಇದನ್ನು ಮಹಿಳೆಯರು ತಮ್ಮ ಮಕ್ಕಳಿಗೆ ಹಾಲುಣಿಸಲು ಬಳಸಬಹುದು. ವಿಧಾನಭವನದ ಎಲ್ಲಾ ಮಹಿಳೆಯರು ಇದನ್ನು ಬಳಸಿಕೊಳ್ಳಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಮಗುವಿನೊಂದಿಗೆ ಭಾಗವಹಿಸಿದ್ದ ಅಹಿರೆ ಅವರು, ಹಿರ್ಕಾನಿ ಘಟಕದಲ್ಲಿರುವ ಧೂಳಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬಾಣಂತಿಯರು ಮತ್ತು ಮಕ್ಕಳು ತಂಗುವ ಕೊಠಡಿಯನ್ನು ಸ್ವಚ್ಚಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿಗೆ ಥ್ಯಾಂಕ್ಸ್ ಹೇಳಿದ ಕಾಂಗ್ರೆಸ್

ಡಿಸೆಂಬರ್ 2022 ರಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಬಿಜೆಪಿ ಶಾಸಕ ಜಯಕುಮಾರ್ ಗೋರ್ ಅವರು ವಾಕರ್ ಹಿಡಿದು ಆಗಮಿಸಿ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಿ ಗಮನ ಸೆಳೆದರು. ಈ ಹಿಂದೆ ಅಂದಿನ ರಾಜ್ಯ ಹಣಕಾಸು ಸಚಿವ ಜಯಂತ್ ಪಾಟೀಲ್ ಅವರು ಸದನದಲ್ಲಿ ಗಾಲಿಕುರ್ಚಿಯಲ್ಲಿ ಕುಳಿತು ಬಜೆಟ್ ಮಂಡಿಸಿದ್ದು ಸ್ಮರಣೀಯವಾಗಿದೆ.

NCP, MLA, Saroj Ahire, arrives, 4-month-old son, Maharashtra, Budgetsession,

Articles You Might Like

Share This Article