ಗಡಿ ವಿವಾದ : ಕೇಂದ್ರ ಗೃಹ ಸಚಿವರಿಗೆ ದೂರು ನೀಡಿದ ಎನ್‍ಸಿಪಿ

Social Share

ನವದೆಹಲಿ,ಡಿ.9- ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಉಂಟಾಗಿರುವ ಗಡಿ ವಿವಾದವನ್ನು ತಕ್ಷಣವೇ ಪರಿಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಎನ್‍ಸಿಪಿ ಗೃಹಸಚಿವರಿಗೆ ದೂರು ನೀಡಿದೆ.

ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದ ಎನ್‍ಸಿಪಿ ಸಂಸದೆ ಸುಪ್ರಿಯಾ ಸುಳೆ ನೇತೃತ್ವದ ಸಂಸದರ ನಿಯೋಗ , ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ವಾಹನಗಳ ಮೇಲೆ ಕಲ್ಲುಗಳನ್ನು ಎಸೆಯಲಾಗುತ್ತಿದೆ. ಅಲ್ಲಿ ಮರಾಠಿಗರಿಗೆ ರಕ್ಷಣೆ ಇಲ್ಲದಂತಾಗಿದೆ. ತಕ್ಷಣವೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕಾದ ಅಗತ್ಯವಿದೆ ಎಂದು ಪತ್ರದಲ್ಲಿ ಮನವರಿಕೆ ಮಾಡಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಬ್ರೇಕ್, ಕಟೀಲ್ ಮುಂದುವರಿಕೆ

ಈ ಬೆಳವಣಿಗೆಗಳ ನಡುವೆಯೇ ಇತ್ತ ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಕನ್ನಡಿಗರನ್ನು ಕೆಣಕುವ ಪ್ರಯತ್ನ ಮಾಡಿದೆ. ಬೆಳಗಾವಿಯಲ್ಲಿ ಡಿಸೆಂಬರ್ 19ರಂದು ನಡೆಯುವ ಚಳಿಗಾಲದ ಧಿಅವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ ನಡೆಸಲು ನಿರ್ಧರಿಸಿದೆ.

ಅಧಿವೇಶನ ಆರಂಭವಾಗುವ ಹಿಂದಿನ ದಿನ ಡಿ.18ರಂದು ಮಹಾಮೇಳ ನಡೆಸಲು ಅನುಮತಿ ನೀಡಬೇಕೆಂದು ಬೆಳಗಾವಿ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಗರಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಬೆಳಗಾವಿಯ ವ್ಯಾಕ್ಸಿನ್ ಡಿಫೋ ಮೈದಾನದಲ್ಲಿ ಮೇಳಾವ ನಡೆಸಲು ಉದ್ದೇಶಿಸಲಾಗಿದೆ. ಮಹಾಮೇಳಾವ ನಡೆಸಲು ಬೆಳಗಾವಿ ಜಿಲ್ಲಾಡಳಿತ, ನಗರ ಪೊಲೀಸರು ಇನ್ನೂ ಅನುಮತಿ ನೀಡಿಲ್ಲ.

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎನ್‍ಸಿಪಿ ನಾಯಕ ಶರದ್ ಪವಾರ್, ಮಹಾರಾಷ್ಟ್ರದ ಗಡಿ ಸಚಿವ ಚಂದ್ರಕಾಂತ್ ಪಾಟೀಲ್, ಲೋಕೋಪಯೋಗಿ ಸಚಿವ ಶಂಭುರಾವ್, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕೂರ್, ಎನ್‍ಎನ್‍ಎಸ್ ನಾಯಕ ರಾಜ್ ಠಾಕ್ರೆ ಮತ್ತಿತರರನ್ನು ಆಹ್ವಾನಿಸಲು ಎಂಇಎಸ್ ಮುಂದಾಗಿದೆ.

ಕನ್ನಡಿಗರಿಗೆ ಬೆದರಿಕೆ: ಮಹರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಕನ್ನಡಿಗರಿಗೆ ಮಹಾ ಸರ್ಕಾರ ಬೆದರಿಕೆ ಹಾಕಿದೆ. ಕರ್ನಾಟಕ ಸೇರುವ ನಿರ್ಧಾರ ಮಾಡಿರುವ ಗ್ರಾಮಗಳ ಗ್ರಾಮ ಪಂಚಾಯ್ತಿಗಳನ್ನು ವಿಸರ್ಜನೆ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದೆ.

ಅಕ್ಕಲಕೋಟ ತಾಲೂಕಿನ 11 ಗ್ರಾಮ ಪಂಚಾಯತಿಗಳನ್ನು ವಿಸರ್ಜನೆ ಮಾಡಲು ಮಹಾ ಸರ್ಕಾರ ಮುಂದಾಗಿದೆ. ಈ ಮೂಲಕ ಉದ್ಧಟತನ ಮೆರೆಯುತ್ತಿರೋ ಮಹಾರಾಷ್ಟ್ರ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಕನ್ನಡಿಗರು ಸಜ್ಜಾಗಿದ್ದಾರೆ.
ಕರ್ನಾಟಕಕ್ಕೆ ಸೇರಲು ಠರಾವು ಪಾಸ್ ಮಾಡಿರುವ ಗ್ರಾಮಪಂಚಾಯ್ತಿ ವಿಸರ್ಜನೆ ಹಾಗೂ ಗ್ರಾಮ ಅಧಿಕಾರಿಗಳನ್ನು ಸೇವೆಯಿಂದ ತೆಗೆದು ಹಾಕುವ ಬೆದರಿಕೆ ಹಾಕಲಾಗಿದೆ. ಗಲ್ಲು ಶಿಕ್ಷೆ ನೀಡಿದರೂ ಯಾವುದಕ್ಕೂ ಹೆದರುವುದಿಲ್ಲ ಎಂದು ಗಡಿನಾಡ ಕನ್ನಡಿಗರು ಕೂಡ ಸೆಡ್ಡು ಹೊಡೆದಿದ್ದಾರೆ.

ಮಹಾರಾಷ್ಟ್ರ ಬ್ಯಾಂಕ್ ಮುತ್ತಿಗೆಗೆ ಯತ್ನಿಸಿದ ಕನ್ನಡಪರ ಹೋರಾಟಗಾರರು

2002ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 22 ಗ್ರಾಮಗಳ ಜನರು ಮಹಾರಾಷ್ಟ್ರಕ್ಕೆ ಸೇರಲು ನಿರ್ಧಾರ ಮಾಡಿದ್ದರು. ಅಗತ್ಯ ಮೂಲಭೂತ ಸೌಕರ್ಯ ನೀಡಿ ಇಲ್ಲವೇ ಮಹಾರಾಷ್ಟ್ರಕ್ಕೆ ಸೇರುತ್ತೇವೆಂದು ತೀರ್ಮಾನ ಮಾಡಿದ್ದರು. ಆ ಭಾಗಕ್ಕೆ ಆಗಿನ ಕರ್ನಾಟಕ ಸಿಎಂ ಆಗಿದ್ದ ಎಸ್.ಎಂ ಕೃಷ್ಣ 204 ಕೋಟಿ ರೂ. ಅನುದಾನ ನೀಡಿದ್ದರು.

ಆ ಮಾದರಿಯಲ್ಲೇ ಮಹಾರಾಷ್ಟ್ರ ಸರ್ಕಾರ ನಮಗೆ ಅನುದಾನ ನೀಡಿ ಎಲ್ಲಾ ಸೌಕರ್ಯ ನೀಡಲಿ ಎಂದು ಅಕ್ಕಲಕೋಟ ಜನರು ಒತ್ತಾಯಿಸಿದ್ದಾರೆ. ಅನುದಾನ ಹಾಗೂ ಇತರೆ ಸೌಕರ್ಯ ನೀಡಿ ಇಲ್ಲವೇ ಕರ್ನಾಟಕಕ್ಕೆ ಸೇರಲು ಅನುಮತಿ ನೀಡಿ ಎಂದು ಜಮರು ಒತ್ತಾಯ ಮಾಡಿದ್ದಾರೆ.

ಬಸ್ ಸಂಚಾರ ಆರಂಭ:
ಕಳೆದ ಎರಡು ದಿನಗಳಿಂದ ಬಂದ್ ಆಗಿದ್ದ ಬೆಳಗಾವಿ-ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಪುನರಾರಂಭಗೊಂಡಿದೆ. ಎಂದಿನಂತೆ ಬಸ್‍ಗಳು ಓಡಾಡುತ್ತಿದ್ದು, ಕೊಲ್ಲಾಪುರಕ್ಕೆ ತೆರಳುವ ಬಸ್‍ಗಳು ನಗರದ ಹೊರವಲಯಗಳವರೆಗೆ ಮಾತ್ರ ಸಂಚಾರ ಮಾಡುತ್ತಿವೆ.

ಕೊಲ್ಲಾಪುರ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ಪ್ರಯಾಣಿಕರ ಇಳಿಸಿ ವಾಪಸ್ ಕರ್ನಾಟಕಕ್ಕೆ ಬರಲಿವೆ. ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ನಿತ್ಯ 400ಕ್ಕೂ ಹೆಚ್ಚು ಬಸ್‍ಗಳು ಸಂಚಾರ ಮಾಡುತ್ತಿವೆ. ಪ್ರಮುಖವಾಗಿ ಬೆಳಗಾವಿ, ಚಿಕ್ಕೋಡಿ, ಕಾಗವಾಡ, ನಿಪ್ಪಾಣಿ ವಿಭಾಗಗಳಿಂದ ಸಂಚರಿಸುತ್ತವೆ.

ಹಿಮಾಚಲ ಗೆದ್ದ ಕಾಂಗ್ರೆಸ್ : ಸಿಎಂ ಆಯ್ಕೆ ಗೊಂದಲದ ನಡುವೆ ಆಪರೇಷನ್ ಭಯ

ಚಿಕ್ಕೋಡಿ ಉಪವಿಭಾಗದಿಂದ 200 ಬಸ್‍ಗಳ ಸಂಚಾರವನ್ನು ಮರು ಪ್ರಾರಂಭಿಸಲಾಗಿದೆ. ಆದರೆ ಪೂರ್ಣ ಪ್ರಮಾಣದ ಸಂಚಾರಕ್ಕೆ ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳು ಇನ್ನೂ ಸಮ್ಮತಿಸಿಲ್ಲ.

ಕರ್ನಾಟಕ ಬಸ್‍ಗಳಿಗೆ ಮಸಿ ಬಳಿದು ಪುಂಡಾಟಿಕೆ ಮೆರೆದಿದ್ದ ಮರಾಠಿ ಪುಂಡರು ಮತ್ತು ಶಿವಸೇನೆ, ಎಂಇಎಸ್, ಸ್ವರಾಜ್ಯ ಸಂಘಟನೆ ಸೇರಿ ವಿವಿಧ ಸಂಘಟನೆಗಳ ಪುಂಡಾಟಿಕೆ ಹಿನ್ನೆಲೆ ಎರಡು ದಿನಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್‍ಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಎರಡು ದಿನಗಳ ಬಳಿಕ ಇಂದಿನಿಂದ ಮತ್ತೆ ಬಸ್‍ಗಳ ಸಂಚಾರ ಪುನಾರಂಭ ಮಾಡಲಾಗಿದ್ದು ಪರಿಸ್ಥಿತಿ ಅವಲೋಕಿಸಿ ಹಂತ-ಹಂತವಾಗಿ ಬಸ್‍ಗಳ ಸಂಚಾರ ಆರಂಭ ಮಾಡಲಾಗುತ್ತದೆ. ಕೆಎಸ್‍ಆರ್‍ಟಿಸಿ ಬಸ್‍ಗಳು ಸಂಚಾರ ಆರಂಭಿಸಿದರೂ ಎಂಎಸ್‍ಆರ್‍ಟಿಸಿ ಮಹಾರಾಷ್ಟ್ರ ಸಾರಿಗೆ ಇಲಾಖೆ ಬಸ್‍ಗಳನ್ನು ಪ್ರಾರಂಭಿಸಿಲ್ಲ.

NCP, MP Supriya Sule, Shiv Sena, Union Minister, Amit Shah, border issue,

Articles You Might Like

Share This Article