ಮುಂಬೈ,ಫೆ.12- ರಾಜ್ಯಪಾಲರ ಸ್ಥಾನಕ್ಕೆ ಭಗತ್ ಸಿಂಗ್ ಕೊಶ್ಯಾರಿ ರಾಜೀನಾಮೆ ನೀಡಿರುವುದನ್ನು ಸ್ವಾಗತಿಸಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಮುಖ್ಯಸ್ಥ ಜಯಂತ್ ಪಾಟೀಲ್, ಹೊಸ ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಮೊದಲಿನ ರಾಜ್ಯಪಾಲ ಕೊಶ್ಯಾರಿ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಹೊಸ ರಾಜ್ಯಪಾಲರನ್ನಾಗಿ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್‍ರನ್ನು ನೇಮಕ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಯಂತ್ ಪಾಟೀಲ್, ಹೊಸ ರಾಜ್ಯಪಾಲರು ಹಿಂದಿನವರಂತೆ ಬಿಜೆಪಿಯ ಕೈಗೊಂಬೆಯಾಗುವುದಿಲ್ಲ ಎಂದು ಭಾವಿಸುತ್ತೇನೆ. ಮಹಾ ವಿಕಾಸ್ ಅಘಾಡಿಯ ಬೇಡಿಕೆಯಂತೆ ಮಹಾರಾಷ್ಟ್ರ ರಾಜ್ಯಪಾಲರನ್ನು ಬದಲಾಯಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಹಿಂದಿನ ರಾಜ್ಯಪಾಲರು ರಾಜ್ಯದ ಸಾಮಾಜಿಕ ಪ್ರತಿಮೆಗಳ ವಿರುದ್ಧ ವಿವಾದಾತ್ಮಕ ಟೀಕೆಗಳನ್ನು ಮಾಡುತ್ತಿದ್ದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು : ಬಿಎಸ್‌ವೈ
ಅಸಂವಿಧಾನಾತ್ಮಕವಾಗಿ ಸರ್ಕಾರ ರಚನೆಯಾಗಲು ಪ್ರಮಾಣವಚನ ಬೋಧಿಸಿದರು. ತಮ್ಮ ನಡವಳಿಕೆಗಳ ಮೂಲಕ ರಾಜ್ಯಪಾಲರ ಹುದ್ದೆಯ ಗೌರವವನ್ನು ಕೋಶ್ಯಾರಿ ತಗ್ಗಿಸಿದ್ದರು. ಹೊಸ ರಾಜ್ಯಪಾಲರ ನೇಮಕವನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.
ಕಳೆದ ವರ್ಷ ಮಹಾವಿಕಾಸ ಅಘಾಡಿ ಸರ್ಕಾರವನ್ನು ಪತನಗೊಳಿಸಲು ಶಿವಸೇನೆಯನ್ನು ವಿಭಜಿಸಲಾಯಿತು. ಬಂಡಾಯ ಚಟುವಟಿಕೆಯ ನಾಯಕರಾಗಿದ್ದ ಏಕನಾಥ್ ಶಿಂಧೆ ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದರು. ಆ ವೇಳೆ ವಿವಾದಿತ ಕ್ರಮಕ್ಕೆ ರಾಜ್ಯಪಾಲರು ಸಹಕಾರ ನೀಡಿದರು. ಬಂಡಾಯಗಾರರ ಗುಂಪಿನ ಸರ್ಕಾರಕ್ಕೆ ಪ್ರಮಾಣ ವಚನ ಬೋಧಿಸಿದರು ಎಂದು ವಿಪಕ್ಷಗಳು ಆರೋಪಿಸಿದವು.
ಕೋಶ್ಯಾರಿ ಬದಲಾವಣೆಯನ್ನು ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣದ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಕೂಡ ಸ್ವಾಗತಿಸಿದ್ದಾರೆ. ಇದು ಮಹಾರಾಷ್ಟ್ರಕ್ಕೆ ದೊಡ್ಡ ಗೆಲುವು. ಮಹಾರಾಷ್ಟ್ರ ವಿರೋಧಿ ರಾಜ್ಯಪಾಲರ ರಾಜೀನಾಮೆಯನ್ನು ಅಂತಿಮವಾಗಿ ಅಂಗೀಕರಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಲೋಕ್ ಅದಾಲತ್ ನಲ್ಲಿ ಒಂದಾದ ವಿಚ್ಛೇದನಕ್ಕೆ ಮುಂದಾಗಿದ್ದ 14 ದಂಪತಿಗಳು
ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮಾ ಜ್ಯೋತಿಬಾ ಪುಲೆ ಮತ್ತು ಸಾವಿತ್ರಿ ಬಾಯಿ ಫುಲೆ, ನಮ್ಮ ಸಂವಿಧಾನ, ವಿಧಾನಸಭೆ ಮತ್ತು ಪ್ರಜಾಪ್ರಭುತ್ವದ ಆದರ್ಶಗಳನ್ನು ನಿರಂತರವಾಗಿ ಅವಮಾನಿಸುವ ಅವರನ್ನು ರಾಜ್ಯಪಾಲರನ್ನಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಆದಿತ್ಯ ಟ್ವೀಟ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಶ್ಯಾರಿಯವರ ಕೆಲವು ಹೇಳಿಕೆಗಳು ವಿವಾದವನ್ನು ಹುಟ್ಟುಹಾಕಿದ್ದವು. ಕಳೆದ ವರ್ಷ ನವೆಂಬರ್‍ನಲ್ಲಿ ಸಾರ್ವಜನಿಕವಾಗಿ ಮಾತನಾಡಿದ ಕೊಶ್ಯಾರಿ, ಛತ್ರಪತಿ ಶಿವಾಜಿ ಅವರು ಹಳೆಯ ಕಾಲದ ಐಕಾನ್. ಡಾ.ಬಾಬಾಸಾಹೇಬ್ ಅಂಬೇಡ್ಕರ್‍ನಿಂದ ನಿತಿನ್ ಗಡ್ಕರಿಯಂತಹ ವ್ಯಕ್ತಿಗಳು ರಾಜ್ಯದ ಆಧುನಿಕ ಐಕಾನ್‍ಗಳು ಎಂದಿದ್ದರು.
ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗ, ಕೊಶ್ಯಾರಿ ಅತಿಯಾಗಿ ಕ್ರಿಯಾಶೀಲರಾಗಿದ್ದರು. ರಾಜ್ಯ ಸರ್ಕಾರದ ಶಿಫಾರಸಿನ ಹೊರತಾಗಿಯೂ ವಿಧಾನ ಪರಿಷತ್ತಿನಲ್ಲಿ ಖಾಲಿ ಇರುವ 12 ಸ್ಥಾನಗಳನ್ನು ಭರ್ತಿ ಮಾಡಲು ಸಹಿ ಹಾಕಿರಲಿಲ್ಲ.
ರಾಖಿ ಸಾವಂತ್ ಪ್ರಿಯಕರ ಆದಿಲ್ ವಿರುದ್ಧ ಮೈಸೂರಿನಲ್ಲಿ ಪ್ರಕರಣ ದಾಖಲು
ಇದಕ್ಕೂ ಮೊದಲು 2019ರ ನವೆಂಬರ್‍ನಲ್ಲಿ, ಬಿಜೆಪಿ-ಶಿವಸೇನೆ ನಡುವೆ ಬಿರುಕು ಸಂಭವಿಸಿದ ವೇಳೆ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಎನ್‍ಸಿಪಿಯ ಅಜಿತ್ ಪವಾರ್ ಅವರಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಮುಂಜಾನೆಯೇ ಪ್ರಮಾಣವಚನ ಬೋಧಿಸಿದರು. ಇದು ರಾಜಭವನದ ದುರ್ಬಳಕೆ ಕುರಿತು ಚರ್ಚೆಗಳನ್ನು ಹುಟ್ಟು ಹಾಕಿತ್ತು.
NCP, Uddhav-led Sena, camp, welcome, Koshyari, exit, Maharashtra, Governor,