ಎನ್‍ಡಿಆರ್‍ಎಫ್ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಮಾಡಲು ಯತ್ನ..?

Social Share

ನವದೆಹಲಿ,ಜ.23-ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್‍ಡಿಆರ್‍ಎಫ್)ಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಹ್ಯಾಕ್ ಮಾಡುವ ಯತ್ನ ತಡರಾತ್ರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪರಿಣತರು ಈ ವಿಷಯವನ್ನು ಪರಿಶೀಲಿಸುತ್ತಿದ್ದು, ಹ್ಯಾಂಡಲ್‍ಅನ್ನು ಶೀಘ್ರವೇ ಪುನರ್ ಸ್ಥಾಪನೆ ಮಾಡಲಾಗುವುದು ಎಂದು ಪಡೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹ್ಯಾಂಡಲ್ @NDRFHQ ಸಂಕ್ಷಿಪ್ತವಾಗಿ ಕೆಲವು ತತ್‍ಕ್ಷಣದ ಸಂದೇಶಗಳನ್ನು ಪೋಸ್ಟ್ ಮಾಡಿದ್ದು, ಈಗಾಗಲೇ ಪ್ರಕಟಿಸಿದ ಮೆಸೇಜ್‍ಗಳು ಲೋಡ್ ಆಗುತ್ತಿರಲಿಲ್ಲ. ಹೀಗಿದ್ದರೂ ಕೇಂದ್ರೀಯ ಪಡೆಯ ಅಕೃತ ಫೋಟೋ ಮತ್ತು ಬಯೋ ಡಿಸ್‍ಪ್ಲೇ ಗೋಚರವಾಗಿತ್ತು.
ಎನ್‍ಡಿಆರ್‍ಎಫ್ ಮಾನವ ನಿರ್ಮಿತ ಹಾಗೂ ನೈಸರ್ಗಿಕ ವಿಕೋಪಗಳ ವಿರುದ್ಧದ ಕೇಂದ್ರೀಯ ಸಂಯುಕ್ತ ಪಡೆಯಾಗಿ 2006ರಲ್ಲಿ ಸ್ಥಾಪನೆಗೊಂಡಿತು ಮತ್ತು ಜನವರಿ 19ರಂದು 17ನೇ ಸಂಸ್ಥಾಪನಾ ದಿನವನ್ನು ಆಚರಿಸಿತ್ತು.

Articles You Might Like

Share This Article