ನೀಲಂ ಸಂಜೀವರೆಡ್ಡಿ ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ

Social Share

ನವದೆಹಲಿ, ಜು.16- ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ಏಳನೇ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ ಎಲ್ಲಾ ಅವಧಿಯಲ್ಲೂ ಚುನಾವಣೆಯ ಮೂಲಕವೇ ರಾಷ್ಟ್ರಾಧ್ಯಕ್ಷರು ಚುನಾಯಿತರಾಗಿದ್ದಾರೆ.

ಎರಡು ವರ್ಷಗಳ ತುರ್ತು ಪರಿಸ್ಥಿತಿ ನಂತರ ಹಾಗೂ ಲೋಕಸಭೆ ಚುನಾವಣೆಗಳು ಪ್ರಾರಂಭವಾದ ಒಂದು ದಿನದ ಮೊದಲು 1977ರ ನಂತರ ಫೆಬ್ರವರಿ 11ರಂದು ಫಕ್ರುದ್ದೀನ್ ಅಲಿ ಅಹ್ಮದ್ ನಿಧನರಾಗಿದ್ದರು. ಆಗ ಉಪಾಧ್ಯಕ್ಷ ಬಿ.ಡಿ.ಜತ್ತಿ ಹಂಗಾಮಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ನಂತರ ಅದೇ ವರ್ಷ ಜೂನ್-ಜುಲೈ ನಡುವೆ 11 ರಾಜ್ಯಗಳ ಅಸೆಂಬ್ಲಿಗಳಿಗೆ ಚುನಾವಣೆಗಳನ್ನು ನಿಗದಿಪಡಿಸಲಾಗಿತ್ತು.

ಜುಲೈ 4ರಂದು ರಾಷ್ಟ್ರಪತಿ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆ ವೇಳೆಗೆ ಹೊಸದಾಗಿ ಚುನಾಯಿತರಾದ 524 ಲೋಕಸಭಾ ಸದಸ್ಯರು, 232 ರಾಜ್ಯಸಭಾ ಸದಸ್ಯರು ಮತ್ತು 22 ರಾಜ್ಯಗಳ ವಿಧಾನಸಭೆಗಳ ಶಾಸಕರನ್ನು ಒಳಗೊಂಡ ಚುನಾವಣಾ ಕಾಲೇಜು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ಕಳೆದುಕೊಂಡಿತ್ತು.

ಆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ 36 ಮಂದಿಯ ಉಮೇದುವಾರಿಕೆಗಳು ತಿರಸ್ಕಾರಗೊಂಡಿದ್ದವು. ಅಂತಿಮ ಕಣದಲ್ಲಿ ಉಳಿದ ನೀಲಂ ಸಂಜೀವ್ ರೆಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.

1977ರ ಚುನಾವಣೆಯಲ್ಲಿನ ಅಸಾಮಾನ್ಯ ಸನ್ನಿವೇಶಗಳ ಹೊರತಾಗಿ, 1969ರ ಚುನಾವಣೆ ಆಸಕ್ತಿದಾಯಕವಾಗಿತ್ತು. ಸಂಜೀವ್ ರೆಡ್ಡಿ ಕಾಂಗ್ರೆಸ್‍ನ ಅಕೃತ ಅಭ್ಯರ್ಥಿಯಾಗಿದ್ದರು. ಪಕ್ಷದೊಳಗಿನ ತಮ್ಮ ಎದುರಾಳಿಗಳನ್ನು ಮಣಿಸಲು ಪ್ರಧಾನಿ ಇಂದಿರಾ ಗಾಂಧಿ ಸಂಸದರು ಮತ್ತು ಶಾಸಕರು ಆತ್ಮಸಾಕ್ಷಿ ಮತಗಳನ್ನು ಚಲಾಯಿಸಬೇಕು ಎಂದು ಕರೆ ನೀಡಿದ್ದರು.

ಆ ಚುನಾವಣೆಯಲ್ಲಿ ವರಾಹ ವೆಂಕಟಗಿರಿ ಅವರು ಸಂಜೀವ್ ರೆಡ್ಡಿಯನ್ನು ಸೋಲಿಸಿದ್ದರು. ನಂತರದ ವರ್ಷಗಳಲ್ಲಿ ಗಂಭೀರವಲ್ಲದ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಹೊರಗಿಡಲು ಕೆಲ ತಿದ್ದುಪಡಿಗಳನ್ನು ಮಾಡಲಾಗಿತ್ತು.
ಕೆಲವರು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಕಳವಳಕಾರಿ ಸನ್ನಿವೇಶವನ್ನು ನಿರ್ಮಿಸಿದ್ದರು. ಬದಲಾದ ಕಾನೂನಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ರ್ಪಧಿಸಬೇಕಾದ ಅಭ್ಯರ್ಥಿ, ಕನಿಷ್ಠ 50 ಚುನಾಯಿತ ಸದಸ್ಯರನ್ನು ಸೂಚಕರ ಸಹಿಯನ್ನಾಗಿ, 50ಮಂದಿ ಚುನಾಯಿತ ಸದಸ್ಯರನ್ನು ಅನುಮೋದಕರ ಸಹಿ ಹೊಂದಿರಬೇಕಿದೆ.

ಮುಂದಿನ ಸೋಮವಾರ ನಡೆಯಲಿರುವ 16ನೇ ಅಧ್ಯಕ್ಷೀಯ ಚುನಾವಣೆಯಲ್ಲಿ 233 ರಾಜ್ಯಸಭಾ ಸದಸ್ಯರು ಮತ್ತು 543 ಲೋಕಸಭೆ ಸದಸ್ಯರು ಸೇರಿ 776 ಸಂಸದರು, 4,033 ಶಾಸಕರನ್ನು ಒಳಗೊಂಡ 4,809 ಮತದಾರರ ಕಾಂಗ್ರೆಸ್ ಮತದಾನ ಮಾಡಲಿದೆ. 1952ರಲ್ಲಿ ನಡೆದ ಮೊದಲ ಅಧ್ಯಕ್ಷೀಯ ಚುನಾವಣೆಯಲ್ಲಿ, ಐದು ಅಭ್ಯರ್ಥಿಗಳು ಸ್ರ್ಪಧಿಸಿದ್ದರು, ರಾಜೇಂದ್ರ ಪ್ರಸಾದ್ ಗೆದ್ದು, ಕೊನೆಯ ಅಭ್ಯರ್ಥಿ ಕೇವಲ 533 ಮತಗಳನ್ನು ಪಡೆದಿದ್ದರು. ರಾಜೇಂದ್ರ ಪ್ರಸಾದ್ ಮರು ಆಯ್ಕೆಯಾದ 1957ರ ಚುನಾವಣೆಯಲ್ಲಿ ಮೂವರು ಸ್ರ್ಪಧಿಸಿದ್ದರು.

ಮೂರನೇ ಚುನಾವಣೆಯು ಕೇವಲ ಮೂವರು ಸ್ರ್ಪಧಿಗಳನ್ನು ಒಳಗೊಂಡಿತ್ತು. 1967ರಲ್ಲಿ ನಡೆದ ನಾಲ್ಕನೇ ಚುನಾವಣೆಯಲ್ಲಿ 17ಸ್ರ್ಪಧಿಗಳು ಕಣದಲ್ಲಿದ್ದರು. ಒಂಬತ್ತು ಅಭ್ಯರ್ಥಿಗಳು ಶೂನ್ಯ ಮತಗಳನ್ನು ಪಡೆದರೆ, ಐವರು ಒಂದು ಸಾವಿರಕ್ಕಿಂತ ಕಡಿಮೆ ಮತಗಳನ್ನು ಪಡೆದರು. ವಿಜೇತರಾದ ಜಾಕೀರ್ ಹುಸೇನ್ 4.7 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದರು. 1969ರಲ್ಲಿ ಐದನೇ ಚುನಾವಣೆಯಲ್ಲಿ 15 ಸ್ರ್ಪಧಿಗಳಿದ್ದು, ಅವರಲ್ಲಿ ಐವರು ಅಭ್ಯರ್ಥಿಗಳು ತಲಾ ಒಂದು ಮತವನ್ನು ಪಡೆದಿರಲಿಲ್ಲ.

ಹಲವು ಪ್ರಥಮಗಳು ಈ ಚುನಾವಣೆಯಲ್ಲಿ ಜಾರಿಯಾದವು. ಮತದಾನದ ಕಟ್ಟುನಿಟ್ಟಾದ ಗೌಪ್ಯತೆ ಪಾಲನೆಯಾಗಿತ್ತು. ಕೆಲವು ಶಾಸಕರಿಗೆ ತಮ್ಮ ರಾಜ್ಯಗಳ ಬದಲಿಗೆ ರಾಜಧಾನಿ ನವದೆಹಲಿಯ ಸಂಸತ್ ಭವನದಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಮತದಾನ ಮತ್ತು ಮತ ಎಣಿಕೆ ನಡುವೆ ನಾಲ್ಕು ದಿನಗಳ ಅಂತರದ ಕುರಿತು ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಮತ ಪೆಟ್ಟಿಗೆಗಳನ್ನು ದೆಹಲಿಗೆ ತರುವ ಬದಲು ರಾಜ್ಯಗಳ ರಾಜಧಾನಿಯಲ್ಲಿಯೇ ಎಣಿಕೆ ಮಾಡಬೇಕಿತ್ತು ಎಂದು ಹಲವರು ವಾದಿಸಿದ್ದರು.

1974ರ ಆರನೇ ಚುನಾವಣೆಯಲ್ಲಿ ಗಂಭೀರವಲ್ಲದ ಅಭ್ಯರ್ಥಿಗಳನ್ನು ಹೊರಗಿಡಲು ಚುನಾವಣಾ ಆಯೋಗ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಾಗ ಚುನಾವಣಾ ಕಣದಲ್ಲಿ ಇಬ್ಬರು ಮಾತ್ರ ಉಳಿದಿದ್ದರು. 1977ರ ಏಳನೇ ಚುನಾವಣೆಗೆ ಒಟ್ಟು 37 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಪರಿಶೀಲನೆ ವೇಳೆ 36 ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕಾರಗೊಂಡು ನಿಲಂ ಸಂಜೀವ ರೆಡ್ಡಿ ಮಾತ್ರ ಕಣದಲ್ಲಿದ್ದರು, ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

1982ರಲ್ಲಿ ನಡೆದ ಎಂಟನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಇಬ್ಬರು ಸ್ರ್ಪಧಿಗಳಿದ್ದರೆ, 1987ರಲ್ಲಿ ನಡೆದ ಒಂಬತ್ತನೇ ಚುನಾವಣೆಯಲ್ಲಿ ಮೂವರು ಸ್ರ್ಪಧಿಸಿದ್ದರು. ಅವರಲ್ಲಿ ಮಿಥಿಲೇಶ್ ಕುಮಾರ್ ಸಿನ್ಹಾ ಅವರು 2,223 ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು.

ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡಬೇಕು ಎಂದು ಮಿಥಿಲೇಶ್ ಆಯೋಗಕ್ಕೆ ಮನವಿ ಮಾಡಿದರು. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ 1977 ರಲ್ಲಿ ಅಭಿವೃದ್ಧಿಪಡಿಸಿದ ಯೋಜನೆಯಡಿಯಲ್ಲಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ತಮ್ಮ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಸೌಲಭ್ಯಗಳನ್ನು ಇತರ ಚುನಾವಣೆಗಳಿಗೆ ವಿಸ್ತರಿಸಲಾಗಿಲ್ಲ. ಮತ್ತೊಬ್ಬ ಅಭ್ಯರ್ಥಿ ವಿ.ಆರ್.ಕೃಷ್ಣ ಅಯ್ಯರ್ ಅವರು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಅಜಿತ್ ಕುಮಾರ್ ಪಂಜಾ ಅವರಿಗೆ ಮನವಿ ನೀಡಿ, ರಾಷ್ಟ್ರಪತಿ ಚುನಾವಣೆಯಲ್ಲಿ ಸ್ರ್ಪಧಿಸಿರುವ ಮೂರು ಸ್ರ್ಪಧಿ ಅಭ್ಯರ್ಥಿಗಳಿಗೆ ಆಕಾಶವಾಣಿ/ದೂರದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಬೇಕು ಎಂದು ಕೋರಿದ್ದರು.

ಆದರೆ, ಸರ್ಕಾರವು ವಿನಂತಿಯನ್ನು ಪುರಸ್ಕರಿಸಲಿಲ್ಲ. ಅದರ ಪ್ರಕಾರ ಯಾರಿಗೂ ಆಕಾಶವಾಣಿ ಮತ್ತು ದೂರ ದರ್ಶನದಲ್ಲಿ ಮಾತನಾಡುವ ಅವಕಾಶ ಸಿಗಲಿಲ್ಲ ಎಂದು ವರದಿಯಾಗಿದೆ.

1992ರಲ್ಲಿ ನಡೆದ 10ನೇ ಚುನಾವಣೆಯಲ್ಲಿ ನಾಲ್ಕು ಸ್ರ್ಪಧಿಗಳು ಕಣದಲ್ಲಿದ್ದರು. ರಾಮ್ ಜೇಠ್ಮಲಾನಿ 2,704 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರೆ, ಕಾಕಾ ಜೋಗಿಂದರ್ ಸಿಂಗ್ ಉರ್ಫ್ ಧರ್ತಿ-ಪಕಾಡ್ 1,135 ಮತಗಳ ಮೂಲಕ ನಾಲ್ಕನೇ ಸ್ಥಾನ ಪಡೆದಿದ್ದರು.

1997ರ 11ನೇ ಅಧ್ಯಕ್ಷೀಯ ಚುನಾವಣೆ ಬಳಿಕ ನಡೆದ ಎಲ್ಲಾ ಚುನಾವಣೆಗಳಲ್ಲಿ ಕೇವಲ ಇಬ್ಬರು ಮಾತ್ರ ಸ್ರ್ಪಗಳು ಕಣದಲ್ಲಿದ್ದಾರೆ. ಕ್ರಮವಾಗಿ ಭದ್ರತಾ ಠೇವಣಿ, ಸೂಚಕರ ಮತ್ತು ಅನುಮೋದಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

Articles You Might Like

Share This Article