ಒಂದೇ ಎಸೆತದಲ್ಲಿ ಫೈನಲ್ ತಲುಪಿದ ನೀರಜ್ ಚೋಪ್ರಾ

Social Share

ಯುಜೀನ್, ಜು.22(ಅಮೆರಿಕ) – ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ತಮ್ಮ ಮೊದಲ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಸ್ವಲ್ಪ ಅಳುಕಿನ ನಡುವೆ ಮೊದಲ ಪ್ರಯತ್ನದಲ್ಲೇ 88.39 ಮೀಟರ್ ಜಾವ್ಲಿನ್ ಎಸೆಯುವ ಮೂಲಕ ತಮ್ಮ ಚೊಚ್ಚಲ ಫೈನಲ್ ಪ್ರವೇಶಿಸಿದ್ದಾರೆ.

24 ವರ್ಷದ ಭಾರತೀಯ ಸೂಪರ್ ಸ್ಟಾರ್, ಪದಕದ ಹಾಟ್ ಫೇವರಿಟ್ ಅಗಿದ್ದು , ತಮ್ಮ ಈಟಿಯನ್ನು 88.39 ಮೀಟರ್ ಎಸೆಯುವ ಮೂಲಕ ಗ್ರೂಪ್ ಎ ಅರ್ಹತಾ ಸುತ್ತಿನ ಅಗ್ರಸ್ಥಾನ ಅಲಂಕರಿಸಿದ್ದಾರೆ. ಗ್ರೂಪ್ ಬಿ ವಿಭಾಗದಲ್ಲಿ ಗ್ರೆನಡಾದ ಹಾಲಿ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ಗಮನ ಸೆಳೆದಿದ್ದು ಅವರು ತಮ್ಮ ಆರಂಭಿಕ ಸುತ್ತಿನ ಪ್ರಯತ್ನದಲ್ಲಿ 89.91 ಮೀ ಈಟಿ ಎಸೆದಿದ್ದಾರೆ.

ಉತ್ತಮ ಆರಂಭವಾಗಿದೆ ನಾನು ಫೈನಲ್‍ನಲ್ಲಿ 100% ನೀಡುತ್ತೇನೆ ಅದು ಖಚಿತ ಪ್ರತಿದಿನ ವಿಭಿನ್ನವಾಗಿರುತ್ತದೆ ನಾನು ನನ್ನ ಅತ್ಯುತ್ತಮವಾದದ್ದನ್ನು ನೀಡುತ್ತೇನೆ. ಯಾವ ದಿನ ಯಾರು ದೂರ ಎಸೆಯುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಚೋಪ್ರಾ ಹೇಳಿದರು.

ನನ್ನ ಓಟದಲ್ಲಿ ಸ್ವಲ್ಪ ಅಂಕುಡೊಂಕು ಇದೆ. ನಾನು ಸ್ವಲ್ಪ ಅಲುಗಾಡಿದೆ, ಆದರೆ ಚೆನ್ನಾಗಿ ಎಸೆದಿದ್ದೇನೆ ಈಗ ಅನೇಕ ಎಸೆತಗಾರರು ಉತ್ತಮ ಸ್ಥಿತಿಯಲ್ಲಿದ್ದಾರೆ. ಈ ವರ್ಷ ಐದಾರು ಎಸೆತಗಾರರು ರೇಸ್‍ನಲ್ಲಿದ್ದಾರೆ ಎಂದರು.

ಭಾರತದ ಮತ್ತೊಬ್ಬ ಸ್ರ್ಪಧಿ ರೋಹಿತ್ ಯಾದವ್ ಕೂಡ ಗ್ರೂಪ್ ಬಿ ಅರ್ಹತಾ ಸುತ್ತಿನಲ್ಲಿ ಆರನೇ ಸ್ಥಾನ ಗಳಿಸಿದ್ದರೆ ತಮ್ಮ ಪ್ರಯತ್ನದಲ್ಲಿ 80.42 ಮೀಟರ್ ಜಾವ್ಲಿನ್ ಎಸೆತದೊಂದಿಗೆ ಒಟ್ಟಾರೆ 11ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದರು.

ಭಾನುವಾರ ನಡೆಯುವ ಫೈನಲ್ ಕುತೂಹಲ ಕೆರಳಿಸಿದೆ.ಟೋಕಿಯೊ ಒಲಿಂಪಿಕ್ಸï ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಕೂಡ ಮೊದಲ ಸುತ್ತಿನ ಥ್ರೋ 85.23 ಮೀಟರ್‍ಗುರಿ ಮುಟ್ಟಿ ಫೈನಲ್‍ಗೆ ಅರ್ಹತೆ ಪಡೆದರು. ಮೇ ತಿಂಗಳಲ್ಲಿ ಕತಾರ್‍ನ ದೋಹಾದಲ್ಲಿ ನಡೆದ ವರ್ಷದ ಮೊದಲ ಡೈಮಂಡ್ ಲೀಗ್‍ನಲ್ಲಿ ಪೀಟರ್ಸ್ 93.07 ಮೀ ಜಾವ್ಲಿನ್ ಎಸದು ಚಿನ್ನವನ್ನು ಗೆದ್ದಿದ್ದರು ಜರ್ಮನಿಯ ಜೂಲಿಯನ್ ವೆಬರ್ ಪಾಕಿಸ್ತಾನದ ಅರ್ಷದ್ ನದೀಮ್ ಅಂತಿಮ ಹಂತ ತಲುಪಿದ್ದಾರೆ.

Articles You Might Like

Share This Article