ಯುಜೀನ್ , ಜುಲೈ 24- ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಇಲ್ಲಿ ನಡೆದ ವಿಶ್ವ ಚಾಂಪಿಯನ್‍ಶಿಪ್‍ನ ಜಾವೆಲಿನ್ ಥ್ರೋ ಫೈನಲ್‍ನಲ್ಲಿ ಬೆಳ್ಳಿ ಪದಕ ಗೆದ್ದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‍ನಲ್ಲಿ ಪದಕ ಗೆದ್ದು ಭಾರತದ ಮೊದಲ ಪದಕ ತಂದುಕೊಟ್ಟಿದ್ದಾರೆ.
ಪದಕ ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆ ನಿಜವಾಗಿದ್ದು 24 ವರ್ಷದ ಚೋಪ್ರಾ ಇಂದು ಬೆಳ್ಳೆಗೆ ನಡೆದ ಫೈನಲ್‍ನಲ್ಲಿ ಈಟಿಯನ್ನು 88.13 ಮೀ ಎಸೆದು ಎರಡನೇ ಸ್ಥಾನ ಗಳಿಸಿದರು. 2003ರ ಪ್ಯಾರಿಸ್‍ನಲ್ಲಿ ವಿಶ್ವ ಚಾಂಪಿಯನ್‍ಶಪ್ ಆವೃತ್ತಿಯಲ್ಲಿ ಲಾಂಗ್ ಜಂಪರ್ ಅಂಜು ಬೂಬಿ ಜಾರ್ಜ್ ಅವರು ಕಂಚಿನ ಪದಕ ಗೆದ್ದ ಮೊದಲ ಭಾರತೀಯರಾಗಿದ್ದರು.
ಹಾಲಿ ಚಾಂಪಿಯನ್ ಗ್ರೆನಡಾದ ಆ್ಯಂಡಸನ್ ಪೀಟರ್ಸ್ 90.54 ಮೀಟರ್ ಈಟಿ ಎಸೆದು ಚಿನ್ನ ಗೆದ್ದರೆ, ಒಲಿಂಪಿಕ್ ಬೆಳ್ಳಿ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಾಡ್ಲೆಜ್ 88.09 ಮೀಟರ್‍ಳೊಂದಿಗೆ ಕಂಚಿನ ಪದಕ ಪಡೆದರು.
ಭಾರತದ ಮತ್ತೊಬ್ಬ ಆಟಗಾರ ರೋಹಿತ್ ಯಾದವ್ 78.72 ಮೀಟರ್ ಎಸೆದು 10ನೇ ಸ್ಥಾನ ಪಡೆದರು. ರೋಹಿತ್ ಅರ್ಹತಾ ಸುತ್ತಿನಲ್ಲಿ 80.42 ಮೀಟರ್ ಎಸೆದು ಒಟ್ಟಾರೆ 11ನೇ ಸ್ಥಾನ ಪಡೆದಿದ್ದರು.ಪ್ರಧಾನಿ ನರೇಂದ್ರ ಮೋದಿ ನೀರಜ್ ಚೋಪ್ರಾ ಗೆ ಅಭಿನಂದನೆ ಸಲ್ಲಿಸಿದ್ದಾರೆ