ನೀಟ್ : ಫೆ.4ಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟ

Social Share

ಬೆಂಗಳೂರು,ಜ.31- ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳ ಪ್ರವೇಶಾತಿಗೆಂದು ನಡೆಸಿದ್ದ ನೀಟ್ ಪರೀಕ್ಷೆಯನುಸಾರ ಫೆ.4ರಂದು ಮೊದಲ ಸುತ್ತಿನ ಸೀಟ್‍ ಹಂಚಿಕೆಯನ್ನು ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಮೊದಲನೇ ಸುತ್ತಿನ ಸೀಟು ಹಂಚಿಕೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟವಾಗಿದ್ದು, ದೃಢೀಕರಣ ಚೀಟಿಯನ್ನು ಡೌನ್‍ಲೋಡ್ ಮಾಡಿಕೊಳ್ಳುವ ಪ್ರಕ್ರಿಯೆಯೂ ಆರಂಭವಾಗಿದೆ ಎಂದು ಪ್ರಾಧಿಕಾರವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಫೆ.4ರಂದು ಈ ಮೂರೂ ಕೋರ್ಸುಗಳಿಗೆ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ಪ್ರಕಟಿಸಲಿದ್ದು, ನಾಳೆ ಬೆಳಿಗ್ಗೆ 10 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
ನಾಳೆಯಿಂದ ಫೆ. 3ರ ಬೆಳಿಗ್ಗೆ 10 ಗಂಟೆಯವರೆಗೆ ತಮ್ಮ ಐಚ್ಛಿಕ ವಿಷಯಗಳಲ್ಲಿ ಅಗತ್ಯವೆನಿಸಿದರೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದೆ.
ಬಳಿಕ ಚಾಯ್ಸ್-1 ಮತ್ತು ಚಾಯ್ಸ್-2 ಸ್ತರದ ವಿದ್ಯಾರ್ಥಿಗಳು ನಿಗದಿತ ಶುಲ್ಕ ತುಂಬಿ, ಪ್ರವೇಶ ದಾಖಲಾತಿಯನ್ನು ಡೌನ್-ಲೋಡ್ ಮಾಡಿಕೊಳ್ಳಲು ಫೆ.4ರ ಮಧ್ಯಾಹ್ನ 2 ಗಂಟೆಯಿಂದ ಫೆ.7ರ ಮಧ್ಯಾಹ್ನ ಒಂದು ಗಂಟೆಯವರೆಗೆ ಅವಕಾಶವಿರುತ್ತದೆ.
ನಂತರ, ವಿದ್ಯಾರ್ಥಿಗಳು ಒಂದು ಸೆಟ್ ದೃಢೀಕೃತ ಪ್ರಮಾಣಪತ್ರಗಳೊಂದಿಗೆ ಮೂಲ ದಾಖಲೆಗಳನ್ನು ಫೆ.5ರಿಂದ 7ರ ಒಳಗೆ ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಕಾರದಲ್ಲಿ ಪರಿಶೀಲನೆಗೆ ಸಲ್ಲಿಸಬೇಕು ಎಂದು ತಿಳಿಸಿದೆ.

Articles You Might Like

Share This Article