497 ನಗರಗಳಲ್ಲಿ ನಾಳೆ ನೀಟ್ ಪರೀಕ್ಷೆ

Social Share

ಬೆಂಗಳೂರು, ಜು.16- ವೈದ್ಯಕೀಯ ಕೋರ್ಸ್‍ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್) ಪರೀಕ್ಷೆ 2022 ನಾಳೆ ದೇಶಾದ್ಯಂತ 497 ನಗರಗಳಲ್ಲಿ ನಡೆಯಲಿದೆ. ದೇಶಾದ್ಯಂತ ಸುಮಾರು 18.72 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಅವರಲ್ಲಿ 10 ಲಕ್ಷ ಅಭ್ಯರ್ಥಿಗಳು ಮಹಿಳೆಯರಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಅಬ್ರಾಡ್‍ನಲ್ಲಿಯೂ ಸಹ ಪರೀಕ್ಷೆ ನಡೆಸಲಿದ್ದು, ಪರೀಕ್ಷೆಯ ಸಮಯದಲ್ಲಿ, ಅಭ್ಯರ್ಥಿಗಳು ಯಾವುದೇ ಲೋಹದ ಆಭರಣಗಳನ್ನು ಧರಿಸಲು ಅನುಮತಿಸಲಾಗುವುದಿಲ್ಲ. ಪರೀಕ್ಷಾ ಕೊಠಡಿಯೊಳಗೆ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಕೊಂಡೊಯ್ಯಲು ಸಹ ನಿರ್ಬಂಧಗಳಿವೆ.

ಸುಗಮವಾಗಿ ಪರೀಕ್ಷೆಗಳು ನಡೆಯುವಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರದ ಸುತ್ತ ಮುತ್ತ 200 ಮೀಟರ್ ಪರಿ ವ್ಯಾಪ್ತಿ ಪ್ರದೇಶವನ್ನು ಸಾರ್ವಜನಿಕ ನಿಷೇಧಿತ ಪ್ರದೇಶವೆಂದು ಹಾಗೂ ಜೆರಾಕ್ಸ್, ಸೈಬರ್ ಕೆಫೆ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ಸೂಚನೆ ನೀಡಲಾಗಿದೆ.

ಪರೀಕ್ಷಾ ಪತ್ರಿಕೆಯು ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಯಲ್ಲಿರುತ್ತದೆ ಮತ್ತು ತಪ್ಪು ಉತ್ತರಗಳಿಗೆ 1 ಅಂಕದ ಋಣಾತ್ಮಕ ಗುರುತು ಇರುತ್ತದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಅನ್ನು 13 ಭಾಷೆಗಳಲ್ಲಿ ನಡೆಸಲಿದೆ.

ನೀಟ್ ಪರೀಕ್ಷೆ ಈ ಹಿಂದೆ ಮೇ ತಿಂಗಳಲ್ಲಿ ನಿಗದಿಯಾಗಿತ್ತು. ಬಳಿಕ ಜೂನ್ ಮತ್ತು ಜುಲೈಗೆ ಮುಂದೂಡಲ್ಪಟ್ಟು ಮಗುನಿಗದಿಯಾಗಿದೆ. ಕಳೆದ ವರ್ಷ ಸೆಪ್ಟಂಬರ್ 12 ರಂದು ನೀಟ್ ಯುಜಿ ಪರೀಕ್ಷೆ ನಡೆದಿತ್ತು. ನೋಂದಾವಣೆ ಮಾಡಿಕೊಂಡವರ ಪೈಕಿ ಶೇಕಡ 95 ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ನೀಟ್ ಯುಜಿ ಪ್ರವೇಶ ಪರೀಕ್ಷೆಯನ್ನು ಅಂಡರ್‍ಗ್ರಾಜುಯೇಟ್ ಕೋರ್ಸ್‍ಗಳಾದ ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಎಸ್‍ಎಂಎಸ್, ಬಿಯುಎಂಎಸ್, ಬಿಹೆಚ್‍ಎಂಎಸ್ ಕೋರ್ಸ್‍ಗಳ ಪ್ರವೇಶಕ್ಕಾಗಿ ನಡೆಸಲಾಗುತ್ತದೆ.

ಅಂಡರ್ ಗ್ರಾಜುಯೇಟ್ ಮೆಡಿಕಲ್ ಎಜುಕೇಷನ್ ಬೋರ್ಡ್- ರಾಷ್ಟ್ರೀಯ ವೈದ್ಯಕೀಯ ಆಯೋಗವು, ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್ (ಓಇಇಖಿ-Uಉ) ಗೆ ಈವರೆಗೆ ನಿಗದಿಯಾಗಿದ್ದ ವರ್ಗಾವಾರು ಗರಿಷ್ಠ ವಯೋಮಿತಿ ನಿರ್ಬಂಧವನ್ನು ತೆಗೆದುಹಾಕಿದೆ.

ನೀಟ್ ಯುಜಿ ಪರೀಕ್ಷೆ ತೆಗೆದುಕೊಳ್ಳಲು ಎಷ್ಟೇ ವಯಸ್ಸಾದವರು ಅರ್ಹರು. ಈ ಹಿಂದೆ ನೀಟ್ ಯುಜಿ ಪರೀಕ್ಷೆ ತೆಗೆದುಕೊಳ್ಳಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ, ಮೀಸಲಾತಿ ಕೋರುವ ಅಭ್ಯರ್ಥಿಗಳಿಗೆ (ಇತರೆ ವರ್ಗದ ಅಭ್ಯರ್ಥಿಗಳಿಗೆ) ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಿತ್ತು.

ಹೊಸ ರೂಲ್ಸ್ ಪ್ರಕಾರ ಅಭ್ಯರ್ಥಿ ಯಾವುದೇ ಮೆಡಿಕಲ್ ಕೋರ್ಸ್‍ಗೆ ಅಡ್ಮಿಷನ್ ಪಡೆದಿದ್ದರೂ ಸಹ ಎಷ್ಟು ಬಾರಿ ಬೇಕಾದರೂ ನೀಟ್ ಯುಜಿ ಪರೀಕ್ಷೆ ತೆಗೆದುಕೊಳ್ಳಬಹುದು.

Articles You Might Like

Share This Article