ನೆಲಮಂಗಲ- ದೇವಿಹಳ್ಳಿ ಹೆದ್ದಾರಿ ಪೂರ್ಣ

Social Share

ನವದೆಹಲಿ,ಜ.1- ನೆಲಮಂಗಲ-ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿ-75 ನಿರ್ಮಾಣ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಪ್ರಕಟಿಸಿರುವ ಕೇಂದ್ರ ರಸ್ತೆ ಸಾರಿಗೆ, ಅತ್ಯಾಧುನಿಕ ಬಳಸಿ ನಿರ್ಮಿಸಿರುವ ರಸ್ತೆ ದೀರ್ಘ ಕಾಲ ಬಾಳಿಕೆ ಬರಲಿದೆ ಎಂದಿದ್ದಾರೆ.

ಬೆಂಗಳೂರು ಹೊರ ವಲಯದ ನೆಲಮಂಗಲದಿಂದ ಹಾಸನದ ದೇವಿಹಳ್ಳಿ ನಡುವಿನ ರಸ್ತೆ ಚಿತ್ರವನ್ನು ಟ್ವೀಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ರಸ್ತೆ ಮೈಸೂರು, ಸಕಲೇಶಪುರ, ಹಳೆಬೀಡು, ಧರ್ಮಸ್ಥಳ ಸೇರಿ ಹಲವು ಪ್ರವಾಸಿ ತಾಣಗಳನ್ನು ವೇಗವಾಗಿ ತಲುಪಲು ನೆರವಾಗಲಿದೆ. ವಾರಾಂತ್ಯದಲ್ಲಿ ಈ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ 30 ಸಾವಿರ ದಾಟಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು-ಮಂಗಳೂರು, ಬೆಂಗಳೂರು-ಮೈಸೂರು, ಬೆಂಗಳೂರು-ಹಾಸನ/ಸಕಲೇಶಪುರ/ ಧರ್ಮಸ್ಥಳ ನಡುವೆ ವೇಗ ವರ್ಧಕವಾಗಲಿದೆ. ರಸ್ತೆ ಬಿರುಕುಗಳನ್ನು ನಿಯಂತ್ರಿಸಲು ಮತ್ತು ದೂರ ಕಾಲದ ಸ್ಥಿರತೆಗಾಗಿ ರಸ್ತೆ ನಿರ್ಮಾಣದಲ್ಲಿ ಅತ್ಯಾಧುನಿಕ ಹಾಗೂ ಅನ್ವೇಷಣಾತ್ಮಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ.

ವರ್ಷಪೂರ್ತಿ ವರ್ಚಸ್ಸು ಕಾಪಾಡಿಕೊಂಡರೆ ರಾಹುಲ್ ರಾಜಕೀಯವಾಗಿ ಯಶಸ್ವಿ

ಫೈಬರ್ ರೈನ್ ಪೋರ್ಸ್‍ಡ್ ಮೈಕ್ರೋ ಸರ್ಫೆಸಿಂಗ್ ಹೆಚ್ಚಿಸಿ, ಮೈಕ್ರೋ ಸರ್ಫೆಸಿಂಗ್ ಮಿಕ್ಸ್ ಮಾಡಲಾಗಿದೆ.
ಪಾದಾಚಾರಿ ಮಾರ್ಗಗಳ ಸಮಸ್ಯೆಗಳನ್ನು ನಿವಾರಿಸಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ.

ಜ.5 ರಿಂದ 2ನೇ ಹಂತದ ಪಂಚರತ್ನ ಯಾತ್ರೆ ಪ್ರಾರಂಭ

ಈ ಮಾರ್ಗ ಹಲವು ಕೈಗಾರಿಕೆಗಳು ಮತ್ತು ಫೆರಿಫರಲ್ ರಿಂಗ್ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಅಭೂತಪೂರ್ವವಾದ ರಸ್ತೆ ಸಂಪರ್ಕವನ್ನು ನಿರ್ಮಿಸಲಾಗುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ.

Nelamangala, Devihalli, highway, completed,

Articles You Might Like

Share This Article