ನೆಲಮಂಗಲ ನಗರಸಭೆ ಅಧ್ಯಕ್ಷರ ರಾಜಕೀಯ ಭವಿಷ್ಯಕ್ಕೆ ಅರ್ಧಚಂದ್ರ

Social Share

ನೆಲಮಂಗಲ,ಫೆ.3- ಜೆಡಿಎಸ್‍ನಿಂದ ಗೆದ್ದು ಕಾಂಗ್ರೆಸ್ ಸೇರಿರುವ ನಗರಸಭೆಯ ಮಧ್ಯಂತರ ಅಧ್ಯಕ್ಷೆಯಾಗಿರುವ ಲತಾ ಹೇಮಂತ್ ಕುಮಾರ್ ಹಾಗೂ ಇತರ ಕೆಲ ಸದಸ್ಯರ ಸದಸ್ಯತ್ವ ಅತಂತ್ರ ಸ್ಥಿತಿಗೆ ಸಿಲುಕಿದೆ.

ಪಕ್ಷ ದ್ರೋಹ ಮಾಡಿದ್ದಕ್ಕಾಗಿ ನಗರಸಭೆಯ ಅಧ್ಯಕ್ಷೆ ಸೇರಿ ಇತತರಿಗೆ ಪಕ್ಷದ ಜಿಲ್ಲಾಧ್ಯಕ್ಷರು ನೋಟಿಸ್ ನೀಡಿದ್ದಾರೆ. ರಾಜಕೀಯವಾಗಿ ಹೈಡ್ರಾಮಾ ಸೃಷ್ಟಿಸಲೆತ್ನಿಸಿದ ಜೆಡಿಎಸ್ ಸದಸ್ಯರಿಗೆ ಈಗ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಮೊದಲು ಪುರಸಭೆ ಯಾಗಿದ್ದ ನೆಲಮಂಗಲದ 23 ವಾರ್ಡ್‍ಗಳಿಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಲತಾ ಹೇಮಂತ್ ಕುಮಾರ್, ಆನಂದ್, ಭಾರತಿ ಬಾಯಿ, ರಾಜಮ್ಮ ಪಿಳ್ಳಪ್ಪ ಸೇರಿ 13 ಮಂದಿ ಆಯ್ಕೆಯಾಗಿದ್ದರು. ಏಳು ಕಾಂಗ್ರೆಸ್, ಒಬ್ಬ ಪಕ್ಷೇತರ, ಇಬ್ಬರು ಬಿಜೆಪಿ ಸದಸ್ಯರು ಚುನಾಯಿತರಾಗಿದ್ದರು.

ಸರ್ಕಾರ ನೆಲಮಂಗಲ ಪುರಸಭೆಯನ್ನು ಅರಿಶಿನಕುಂಟೆ, ವಿಶ್ವೇಶ್ವರ ಪುರ, ಬಸವನಹಳ್ಳಿ, ವಾಜರಹಳ್ಳಿ ಗ್ರಾಮ ಪಂಚಾಯತ್ ಒಳಗೊಂಡಂತೆ ನಗರಸಭೆಯನ್ನಾಗಿ ಮೇಲ್ದರ್ಜೆಗೆರಿಸಿದೆ. ಬಳಿಕ ಪುರಸಭೆ ಸದಸ್ಯರ ಅಧಿಕಾರವಧಿ ಗೊಂದಲಕ್ಕೆ ಸಿಲುಕಿತ್ತು. ಸರ್ಕಾರ ನೆಲಮಂಗಲ ನಗರಸಭೆಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿತ್ತು.

ಅಪ್ಪಿತಪ್ಪಿ ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಹೆಚ್ಚಿನ ವಹಿವಾಟು ನಡೆಸೀರಿ ಜೋಕೆ.. !

ಅದನ್ನು ಪ್ರಶ್ನಿಸಿ ಪುರಸಭೆ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಚುನಾವಣಾ ಆಧಿಸೂಚನೆಗೆ ಹಸಿರು ನಿಶಾನೆ ದೊರೆತಿತ್ತು. ಸದಸ್ಯರು ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಪ್ರಕರಣ ವಿಚಾರಣೆಗೆ ಬಾಕಿ ಇದೆ.
ಈ ನಡುವೆ ನ್ಯಾಯಾಲಯದ ಅಂತಿಮ ತೀರ್ಪಿಗೆ ಬದ್ಧವಾಗಿ ನಗರಸಭೆಗೆ ಮಧ್ಯಂತರ ಕೌನ್ಸಿಲ್ ಅನ್ನು ರಚಿಸಲಾಗಿದೆ. ಅದರ ಪ್ರಕಾರ ಲತಾ ಹೇಮಂತ್ ಕುಮಾರ್ ಅವಿರೋಧವಾಗಿ ನಗರಸಭೆಯ ಮಧ್ಯಂತರ ಅಧ್ಯಕ್ಷರಾಗಿದ್ದಾರೆ.

ಪುರಸಭೆ ವಾರ್ಡ್ ನಂಬರ್ 20ರ ಭರಮಣ್ಣ ಲೇಔಟ್‍ನಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಲತಾ ಹೇಮಂತ್ ಕುಮಾರ್ ಗೆದ್ದು ಅಧ್ಯಕ್ಷೆಯಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹೇಮಂತ್ ಕುಮಾರ್ ಕಳೆದ ಜ.23ರಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಬೇಮಲ್ ಕಾಂತರಾಜು ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಯಾಗಿದ್ದರು.

ಅವರೊಂದಿಗೆ ನಗರಸಭೆಯ ನಾಲ್ವರು ಸದಸ್ಯರು ಕಾಂಗ್ರೆಸ್ ಸೇರಿದ್ದಾರೆ ಎಂದು ಘೋಷಿಸಲಾಗಿತ್ತು. ಇದನ್ನು ಜೆಡಿಎಸ್ ಪಕ್ಷ ವಿರೋಧ ಚಟುವಟಿಕೆ ಎಂದು ಪರಿಗಣಿಸಿದೆ.

ಜೆಡಿಎಸ್‍ನ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಅವರು ಪುರಸಭೆ ಸದಸ್ಯರಾದ ಲತಾ ಹೇಮಂತ್ ಕುಮಾರ್, ಆನಂದ್, ಭಾರತಿ ಬಾಯಿ, ರಾಜಮ್ಮ ಪಿಳ್ಳಪ್ಪ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಏಳು ದಿನದ ಗಡುವು ಮುಗಿದರೂ ಸದಸ್ಯರು ಇನ್ನೂ ಉತ್ತರ ನೀಡಿಲ್ಲ.

ಕರ್ನಾಟಕ-ಆಂಧ್ರಪ್ರದೇಶ ರಾಜ್ಯಗಳ ನಡುವೆ ಅಂತರರಾಜ್ಯ ಸಾರಿಗೆ ಒಪ್ಪಂದ

ಕಾಂಗ್ರೆಸ್ ಸೇರಿರುವುದಾಗಿ ಹೇಳಿರುವ ಸದಸ್ಯರು ತಾವು ಜೆಡಿಎಸ್‍ನಲ್ಲೇ ಇರುವುದಾಗಿ ಘೋಷಿಸಿದ್ದಾರೆ. ಶಾಸಕ ಡಾ.ಶ್ರೀನಿವಾಸ ಮೂರ್ತಿ ಅವರನ್ನು ಭೇಟಿ ಮಾಡಿ ತಾವು ಪಕ್ಷ ವಿರೋಗಳಲ್ಲ ಎಂದು ಬಿಂಬಿಸುವ ಹೈಡ್ರಾಮವನ್ನು ನಡೆಸಿದ್ದರು ಎನ್ನಲಾಗಿದೆ.

ಆದರೆ ಅದನ್ನೇಲ್ಲಾ ಲೆಕ್ಕಕ್ಕೆ ತೆಗೆದುಕೊಳ್ಳದ ಜೆಡಿಎಸ್ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮಕ್ಕೆ ಮುಂದಾಗಿದೆ. ಅದರ ಭಾಗವಾಗಿ ಮೊದಲ ಹಂತದಲ್ಲಿ ನೋಟಿಸ್ ನೀಡಲಾಗಿದೆ. ಬಳಿಕ ಪ್ರಾದೇಶಿಕ ಆಯುಕ್ತರಿಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಸದಸ್ಯರ ವಿರುದ್ಧ ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಲಾಗಿದೆ.

ಒಂದು ವೇಳೆ ಪ್ರಾದೇಶಿಕ ಆಯುಕ್ತರು ತ್ವರಿತ ಕ್ರಮ ಕೈಗೊಂಡರೆ ನಗರಸಭೆಯ ಮಧ್ಯಂತರ ಅಧ್ಯಕ್ಷರು ಸೇರಿ ನಾಲ್ವರು ಸದಸ್ಯರ ಸದಸ್ಯತ್ವ ಅನೂರ್ಜಿತಗೊಳ್ಳಲಿದೆ. ಹಾಗಾದರೆ ನಗರಸಭೆ ಮತ್ತೆ ಅತಂತ್ರವಾಗಲಿದೆ.

Nelamangala, Municipal Council, President,

Articles You Might Like

Share This Article