ನೆಲಮಂಗಲದಲ್ಲಿ ಘರ್ಜಿಸಿದ ಪೊಲೀಸ್ ಪಿಸ್ತೂಲ್ : ದರೋಡೆಕೋರನಿಗೆ ಗುಂಡೇಟು

Social Share

ನೆಲಮಂಗಲ, ನ.23- ಸ್ಥಳ ಮೊಹಜರಿಗೆ ಕರೆದೊಯ್ದ ವೇಳೆ ಇಟ್ಟಿಯಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ದರೋಡೆಕೋರ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಯೋಗಾನಂದ ಅಲಿಯಾಸ್ ನೈಟ್‍ಶಿಫ್ಟ್ ಯೋಗಿ ಗುಂಡೇಟಿನಿಂದ ಗಾಯಗೊಂಡಿರುವ ದರೋಡೆಕೋರ.

ಈತ ವಿರುದ್ಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಸರಗಳ್ಳತನ ಪ್ರಕರಣವಲ್ಲದೆ ಬೆಂಗಳೂರು ನಗರದ ಬ್ಯಾಟರಾಯನಪುರ, ಕುಮಾರಸ್ವಾಮಿ ಲೇಔಟ್ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪ್ರಕರಣಗಳು,
ತುಮಕೂರಿನ ಕೋರಾ, ಅಮೃತೂರು ಠಾಣೆ, ನೆಲಮಂಗಲ ಗ್ರಾಮಾಂತರ, ಶ್ರೀರಂಗಪಟ್ಟಣ, ಹಿರಿಸಾವೆ ಪೊಲೀಸ್ ಠಾಣೆ ಸೇರಿದಂತೆ ಇತರೆ ಠಾಣೆಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಕೊಲೆ, ಡಕಾಯಿತಿ, ಸುಲಿಗೆ, ಪೆಟ್ರೋಲ್ ಬಂಕ್ ದರೋಡೆ ಪ್ರಕರಣಗಳು ದಾಖಲಾಗಿರುತ್ತದೆ.

ನೆಲಮಂಗಲ ಉಪ ವಿಭಾಗ ವ್ಯಾಪ್ತಿಯ ನೆಲಮಂಗಲ ಟೌನ್ ಠಾಣೆ ಸರಗಳ್ಳತನ ಪ್ರಕರಣವೊಂದರಲ್ಲಿ ಆರೋಪಿಯನ್ನು ಬಂಧಿಸಿ ಸಂಬಂಧಪಟ್ಟ ಮಾಲನ್ನು ಪತ್ತೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ನಿರ್ದೇಶಿಸಿದ್ದರು.

ಜೈಲಲ್ಲಿ ಹೊಟ್ಟೆ ಬಿರಿಯೋಹಾಗೆ ತಿಂದು 8 ಕೆಜಿ ತೂಕ ಹೆಚ್ಚಿಸಿಕೊಂಡ ಸತ್ಯೇಂದ್ರ ಜೈನ್

ಅಪರ ಪೊಲೀಸ್ ಅೀಧಿಕ್ಷಕ ಪುರುಷೋತ್ತಮ್, ನೆಲಮಂಗಲ ಉಪವಿಭಾಗದ ಪೊಲೀಸ್ ಉಪಾೀಧಿಕ್ಷರಾದ ಗೌತಮ್ ಅವರ ಸೂಕ್ತ ಮಾರ್ಗದರ್ಶನ ಮೇರೆಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಶಶಿಧರ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮೈಸೂರಿನ ಹೆಬ್ಬಾಳದಲ್ಲಿ ಪತ್ತೆ ಹಚ್ಚಿ ಬಂಧಿಸಿ ವಿಚಾರಣೆಗೊಳಪಡಿಸಿ 50 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದರು.

ಆರೋಪಿಯು ತಪ್ಪನ್ನು ಒಪ್ಪಿಕೊಂಡು, ಸ್ಥಳ ತೋರಿಸುತ್ತೇನೆಂದು ತಿಳಿಸಿದ್ದರಿಂದ ಇನ್‍ಸ್ಪೆಕ್ಟರ್ ಶಶಿಧರ್ ಅವರು ಎಎಸ್‍ಐ ರಘು ಹಾಗೂ ಸಿಬ್ಬಂದಿಯೊಂದಿಗೆ ರಾತ್ರಿ ಕರೆದುಕೊಂಡು ಹೋಗಿದ್ದಾರೆ. ಸ್ಥಳ ಮಹಜರಿಗೆ ಹೋಗುತ್ತಿದ್ದಂತೆ ಆರೋಪಿಯು ತಪ್ಪಿಸಿಕೊಳ್ಳುವ ಭರದಲ್ಲಿ ಕಾನ್‍ಸ್ಟೇಬಲ್ ಹನುಮಂತ ಹಿಪ್ಪರಗಿ ಅವರಿಗೆ ಹಾಲೋಬ್ರಿಕ್ಸ್ ಇಟ್ಟಿಗೆಯಿಂದ ತಲೆಗೆ ಹೊಡೆಯಲು ಯತ್ನಿಸಿದ್ದಾನೆ.

ಕುಕ್ಕರ್ ಕ್ರಿಮಿ ಕುರಿತು ಬಗೆದಷ್ಟು ಬಯಲಾಗುತ್ತಿವೆ ಸ್ಪೋಟಕ ಮಾಹಿತಿ

ಆ ವೇಳೆ ಕಾನ್‍ಸ್ಟೇಬಲ್ ಹನುಮಂತ ಹಿಪ್ಪರಗಿ ಅವರು ತಮ್ಮ ರಕ್ಷಣೆಗಾಗಿ ಕೈಯನ್ನು ಅಡ್ಡಕೊಟ್ಟಿದ್ದರಿಂದ ಕೈಗೆ ಏಟು ಬಿದ್ದು ಮೂಳೆ ಮುರಿಯುವಂತಾಗಿರುತ್ತೆ. ತಕ್ಷಣ ಇನ್‍ಸ್ಪೆಕ್ಟರ್ ಶಶಿಧರ್ ಅವರು ಆರೋಪಿಗೆ ಶರಣಾಗುವಂತೆ ಸೂಚನೆ ನೀಡಿದರೂ ಸಹ ಮತ್ತೆ ಹಲ್ಲೆಗೆ ಯತ್ನಿಸಿದಾಗ ಇನ್‍ಸ್ಪೆಕ್ಟರ್ ಅವರು ಜೀವ ರಕ್ಷಣೆಗಾಗಿ ತಮ್ಮ ಸರ್ವೀಸ ಪಿಸ್ತೂಲಿನಿಂದ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ.

ಪೊಲೀಸರ ಮಾತಿಗೆ ಕಿವಿಗೊಡದೆ ಪುನಃ ಅದೇ ಹಾಲೋಬ್ರಿಕ್ಸ್ ಇಟ್ಟಿಗೆಯಿಂದ ಹೊಡೆಯಲು ಹೋದ ಸಂದರ್ಭದಲ್ಲಿ ಇನ್‍ಸ್ಪೆಕ್ಟರ್ ಅವರು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.

ಬಾಲಕಿ ಮೇಲೆ ಅತ್ಯಾಚಾರವೆಸಗಿದವನಿಗೆ 43 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್

ತಕ್ಷಣ ಪೊಲೀಸರು ಆರೋಪಿಯನ್ನು ಸುತ್ತುವರಿದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾನ್‍ಸ್ಟೇಬಲ್ ಹನುಮಂತ ಹಿಪ್ಪರಗಿ ಸಹ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್‍ಸ್ಪೆಕ್ಟರ್ ಶಶಿಧರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯನ್ನು ಬೆಂಗಳೂರು ಜಿಲ್ಲಾ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿದ್ದಾರೆ.

Nelamangala, Police, shot, Robber,

Articles You Might Like

Share This Article