ಬೆಂಗಳೂರು,ಫೆ.24-ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನವಾಗುತ್ತಿದ್ದು, ಕ್ರೈಸ್ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಶಿಕ್ಷಣ ನೀತಿ ಜಾರಿಗಾಗಿ ಪಠ್ಯ ಕ್ರಮಗಳನ್ನು ರಚಿಸಬೇಕಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ವಿಧಾನಪರಿಷತ್ ಪ್ರಶ್ನೋತ್ತರದಲ್ಲಿ ಸದಸ್ಯ ಹನುಮಂತ ನಿರಾಣಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಶಿಕ್ಷಣ ಇಲಾಖೆ ಯೋಜನೆಯನ್ನು ಸಿದ್ದಪಡಿಸಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿ 804 ವಸತಿ ಶಾಲೆಗಳು, ಸ್ವತಂತ್ರ ಪದವಿಪೂರ್ವ ವಿಜ್ಞಾನ ಕಾಲೇಜುಗಳು ಸೇರಿ 830 ವಸತಿ ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. 804 ವಸತಿ ಶಾಲೆಗಳ ಪೈಕಿ 58ರಲ್ಲಿ ಪಿಯುಸಿ ತರಗತಿಗಳನ್ನು ಪ್ರಾರಂಭಿಸ ಲಾಗಿದೆ.
ವಿಧಾನಸಭೆಯಲ್ಲಿ ದೇವೇಗೌಡರನ್ನು ಕೊಂಡಾಡಿದ ಯಡಿಯೂರಪ್ಪ
ಈ ವರ್ಷ 5 ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ಉಳಿದ ಶಾಲೆಗಳನ್ನು ಪ್ರಥಮ ಪಿಯುಸಿ ತರಗತಿಗಳಿಗೆ ಅನುದಾನ ಲಭ್ಯತೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.
ವಸತಿ ಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸಲಾಗುತ್ತಿದೆ. ಪ್ರಸ್ತುತ 6ರಿಂದ 12ನೇ ತರಗತಿವರೆಗೆ ರಾಷ್ಟ್ರೀಯ ಮತ್ತು ರಾಜ್ಯ ಪಠ್ಯಕ್ರಮ ರಚನೆಯಾಗಿಲ್ಲ. ಶಿಕ್ಷಣ ನೀತಿಯ ಪ್ರಕಾರ ಸರ್ಕಾರದ ನಿರ್ದೇಶದಂತೆ ವಸತಿ ಶಾಲೆಗಳಲ್ಲಿ ಹೊಸ ಪಠ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.
#NEP, #Curriculum, #ChristianResidentialSchools, #NationalEducationPolicy,