ಕಠ್ಮಂಡು,ಜ.16- ನೇಪಾಳದ ಪೋಖರಾದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಪ್ರಯಾಣಿಕರು, ಸಿಬ್ಬಂಧಿ ಸೇರಿ ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಮಾನದಲ್ಲಿ 53 ನೇಪಾಳಿಗಳು, 5 ಭಾರತೀಯರು, 4 ರಷ್ಯನ್ನರು, ಒಬ್ಬ ಐರಿಶ್, 2 ಕೊರಿಯನ್ನರು, ಬಬ್ಬ ಅರ್ಜೆಂಟೀನಾದ ಪ್ರಜೆ ಮತ್ತು ಒಬ್ಬ ಫ್ರೆಂಚ್ ಪ್ರಜೆ ವಿಮಾನದಲ್ಲಿದ್ದರು ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ವಿಮಾನವು ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್ ಆಗಿತ್ತು. ಸುಮಾರು 20 ನಿಮಿಷಗಳಲ್ಲೇ ಅಪಘಾತ ಸಂಭವಿಸಿದೆ. ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಲ್ಯಾಂಡಿಂಗ್ ಮೊದಲು ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ . ಪ್ರಾಥಮಿಕ ತನಿಖೆಯ ಪ್ರಕಾರ, ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ ಎಂದು ನೇಪಾಳ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಬುದ್ಧಿಮಾತು ಹೇಳಿದ ಟಿಟಿ ಚಾಲಕನ ಇರಿದು ಕೊಲೆ
ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಯಿಂದ ಲ್ಯಾಂಡಿಂಗ್ಗೆ ಅನುಮತಿ ಪಡೆದರು ಮತ್ತು ಅದಕ್ಕೆ ಒಪ್ಪಿಗೆ ನೀಡಲಾಯಿತು. ಆದರೆ ನಂತರ ಏನಾಯಿತು ತಿಳಿಯುತ್ತಲ್ಲ ,ಇಂದು ಬೆಳಿಗ್ಗೆ ಮತ್ತೆ ಐವರ ಶವ ಪತ್ತೆಯಾಗಿದ್ದು ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ವಿಮಾನ ದುರಂತದ ಕುರಿತು ತನಿಖೆ ನಡೆಸಲು 5 ಸದಸ್ಯರ ತನಿಖಾ ಆಯೋಗವನ್ನು ರಚಿಸಲಾಗಿದೆ. ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ವಾರಸುದಾರರಿಗೆ ಒಪ್ಪಸುವ ಕಾರ್ಯ ನಡೆದಿದೆ ರಾಯಭಾರಿ ಕವೇರಿ ಪಾಸ್ ಫೋರ್ಟ್ ಆಧಾರದ ಮೇಲೆ ಮಾಹಿತಿ ಕಲೆಹಾಕಿ ಅಂತಿಮ ಸಂಸ್ಕಾರ ಇಲ್ಲಿಯೇ ನೆರವೇರಿಸುವ ಕುರುತು ಅನುಮತಿ ಪಡೆಯಲಾಗುತ್ತಿದೆ.
Nepal, plane crash, death, toll rises,