ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ಕಣ್ಮರೆ..!

Spread the love

ಕಠ್ಮಂಡು,ಮೇ29- ನಾಲ್ವರು ಭಾರತೀಯರು ಸೇರಿದಂತೆ 22 ಪ್ರಯಾಣಿಕರಿದ್ದ ನೇಪಾಳಿ ವಿಮಾನ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದೆ.
ತಾರಾ ವಿಮಾನ ನಿಲ್ದಾಣದಿಂದ ಹಿಮಾಲಯ ಪ್ರಾಂತ್ಯದ ಜಾಮ್‍ಸೋಮ್‍ಗೆ ಹೊರಟ್ಟಿದ್ದ ವಿಮಾನ ಇಂದು ಬೆಳಗ್ಗೆ 9.55ಕ್ಕೆ ನಿಯಂತ್ರಣ ಕಳೆದುಕೊಂಡಿತು.

ವಿಮಾನ ನಿಯಂತ್ರಣ ಕಳೆದುಕೊಂಡ ಸ್ಥಳಕ್ಕೆ ಹೆಲಿಕಾಪ್ಟರ್‍ನಲ್ಲಿ ತೆರಳಿ ಪರಿಶೀಲನೆ ನಡೆಸಲಾಯಿತಾದರೂ ವಿಮಾನ ಪತ್ತೆಯಾಗಿಲ್ಲ ಎಂದು ಏರ್‍ಪೊರ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ಕಣ್ಮರೆಯಾಗಿರುವ ವಿಮಾನದಲ್ಲಿ ನಾಲ್ವರು ಭಾರತೀಯರು, 13 ನೇಪಾಳಿಗಳು, ಇಬ್ಬರು ಜರ್ಮನ್‍ರು ಹಾಗೂ ಮೂವರು ವಿಮಾನ ಸಿಬ್ಬಂದಿಗಳಿದ್ದರು ಎನ್ನಲಾಗಿದೆ.

ಕಳೆದ ಹಲವಾರು ದಿನಗಳಿಂದ ಹಿಮಾಲಯ ಪ್ರಾಂತ್ಯದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹವಾಮಾನ ವೈಪರೀತ್ಯ ಉಂಟಾಗಿ ವಿಮಾನ ಕಣ್ಮರೆಯಾಗಿರಬಹುದೆಂದು ಶಂಕಿಸಲಾಗಿದೆ.

ತೊರಂಗ್‍ಲಾ ಬೆಟ್ಟದಲ್ಲಿರುವ ಹಿಂದೂ ಮತ್ತು ನೇಪಾಳಿಗಳ ಆರಾಧ್ಯದೇವ ಇರುವ ಮುಕ್ತಿನಾಥ ದೇವಾಲಯಕ್ಕೆ ಪ್ರತಿ ವರ್ಷ ನೂರಾರು ಭಕ್ತಾಗಳು ಈ ಮಾರ್ಗದಲ್ಲೇ ತೆರಳುವುದು ವಾಡಿಕೆಯಾಗಿದೆ. ಇದೀಗ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಿಮಾನ ನಾಪತ್ತೆಯಾಗಿದ್ದು, ಪತ್ತೆ ಹಚ್ಚುವ ಕಾರ್ಯ ಚುರುಕುಗೊಳಿಸಲಾಗಿದೆ.