ನೇಪಾಳದಲ್ಲಿ 72 ಪ್ರಯಾಣಿಕರಿದ್ದ ವಿಮಾನ ಪತನ, 40ಕ್ಕೂ ಹೆಚ್ಚು ಮಂದಿ ಸಾವು..!

Social Share

ಕಠ್ಮಂಡು, ಜ.15- ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ ವಿದೇಶಿಗರು ಸೇರಿದಂತೆ 72 ಜನರನ್ನು ಒಳಗೊಂಡಿದ್ದ ವಿಮಾನವೊಂದು ಇಳಿಯುವಾಗ ಅಪಘಾತಕ್ಕೀಡಾಗಿದ್ದು, 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ನೇಪಾಳದ ನಾಗರಿಕ ವಿಮಾನಯಾನ ಪ್ರಾಕಾರದ ಪ್ರಕಾರ, ಯೇತಿ ಏರ್‍ಲೈನ್ಸ್‍ನ 9ಎನ್-ಎಟಿಆರ್ 72 ವಿಮಾನ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10:33 ಕ್ಕೆ ಟೇಕಾಫ್ ಆಗಿತ್ತು. ಹಳೆಯ ವಿಮಾನ ನಿಲ್ದಾಣ ಮತ್ತು ಸೇಟಿ ನದಿಯ ದಡದಲ್ಲಿ ನಿರ್ಮಿಸಿರುವ ಹೊಸ ವಿಮಾನ ನಿಲ್ದಾಣದ ನಡುವೆ ಪತನಗೊಂಡಿದೆ.ವಿಮಾನದಲ್ಲಿ 68 ಪ್ರಯಾಣಿಕರು, ನಾಲ್ವರು ಸಿಬ್ಬಂದಿಗಳಿದ್ದರು ಎಂದು ರಿಪಬ್ಲಿಕಾ ಪತ್ರಿಕೆ ವರದಿ ಮಾಡಿದೆ.

ಕಳ್ಳನನ್ನು ಹಿಡಿದುಕೊಟ್ಟ ಖಾಲಿ ವಾಟರ್ ಬಾಟಲ್

ನೇಪಾಳದ ಸರ್ಕಾರಿ ಟೆಲಿವಿಷನ್ ಪ್ರಕಾರ ಪ್ರಯಾಣಿಕರಲ್ಲಿ 53 ಮಂದಿ ನೇಪಾಳಿಯರು, ಐದು ಮಂದಿ ಭಾರತೀಯರು, ನಾಲ್ವರು ರಷ್ಯನ್ನರು, ಮತ್ತಿಬ್ಬರು ಕೊರಿಯನ್ನರು, ಆಫ್ಘಾನಿಸ್ತಾನ್, ಐರಿಸ್, ಪ್ರಾನ್ಸ್ ತಲಾ ಒಬ್ಬರು ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ಅಪಘಾತದ ಸ್ಥಳದಿಂದ 20ಕ್ಕು ಹೆಚ್ಚು ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಹಿಮಾಲಯ ವಲಯದಲ್ಲಿರುವ ಪ್ರಮುಖ ರಾಷ್ಟ್ರೀಯ ಪ್ರವಾಸಿ ತಾಣ ಪೆÇೀಖರಾದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದೆ.

ಕಸ್ಕಿ ಜಿಲ್ಲೆಯ ಮುಖ್ಯ ಜಿಲ್ಲಾ ಅಕಾರಿ ಟೆಕ್ ಬಹದ್ದೂರ್ ಪ್ರಕಾರ, ವಿಮಾನವು ಸೇಟಿ ನದಿಯ ಕಮರಿಯಲ್ಲಿ ಪತನಗೊಂಡಿದೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ದಿ ಹಿಮಾಲಯನ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.

ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು ಅಪಘಾತ ಸ್ಥಳಕ್ಕೆ ಭೇಟಿ ನೀಡಲಿದ್ದು, ಅದಕ್ಕೂ ಮೊದಲು ತುರ್ತು ಸಚಿವ ಸಂಪುಟ ಸಭೆ ನಡೆಸಿದ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದರು. ಸಂತ್ರಸ್ಥೆರ ನೆರವಿಗೆ ಧಾವಿಸುವಂತೆ ಪ್ರಧಾನಿ ರಕ್ಷಣಾ ಸಿಬ್ಬಂದಿ ಮತ್ತು ಎಲ್ಲಾ ಸರ್ಕಾರಿ ಏಜೆನ್ಸಿಗಳಿಗೆ ಸೂಚನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಸ್ಥಳದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಅಪಘಾತಕ್ಕೆ ಸದ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತಪಟ್ಟವರನ್ನು ಹೊರ ತೆಗೆಯಲು ಮತ್ತು ಗಾಯಗೊಂಡವರು ರಕ್ಷಣೆಗೆ ಆದ್ಯತೆ ನೀಡಲಾಗಿದೆ.

ಕಳೆದ ಮೇ 29 ರಂದು ನೇಪಾಳದ ಪರ್ವತ ಪ್ರದೇಶವಾದ ಮುಸ್ತಾಂಗ್ ಜಿಲ್ಲೆಯಲ್ಲಿ ತಾರಾ ಏರ್ ವಿಮಾನವು ಪತನಗೊಂಡಿದ್ದರಿಂದ ಭಾರತೀಯ ಕುಟುಂಬದ ನಾಲ್ವರು ಸೇರಿದಂತೆ ಎಲ್ಲಾ 22 ಜನರು ಸಾವನ್ನಪ್ಪಿದರು. ಅದರ ಬಳಿಕ ಸಂಭವಿಸಿದ ದೊಡ್ಡ ವಿಮಾನಾಪಘಾತ ಇದಾಗಿದೆ.

#Nepal, #planeCrash, #72onboard, #crashes, #Pokhara, #40dead,

Articles You Might Like

Share This Article