ಕಠ್ಮಂಡು, ಜ.11- ನಾಟಕೀಯ ಬೆಳವಣಿಗೆಯಲ್ಲಿ ನೇಪಾಳದ ಪ್ರಧಾನಿಯಾಗಿರುವ ಪುಷ್ಪ ಕಮಲ್ ದಹಾಲ್ ಪ್ರಚಂಡ ಶೀಘ್ರವೇ ಭಾರತಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.ಭಾರತ ಭೇಟಿಗೆ ಸಂಬಂಸಿದಂತೆ ರಾಯಭಾರ ಕಚೇರಿ ಅಗತ್ಯ ತಯಾರಿಗಳನ್ನು ನಡೆಸುತ್ತಿದೆ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ. ಆದರೆ ಭಾರತದ ಕಡೆಯಿಂದ ಇನ್ನೂ ಪ್ರವಾಸದ ಕಾರ್ಯಕ್ರಮ ಕುರಿತು ಅಕೃತ ಮಾಹಿತಿ ಹೊರ ಬಿದ್ದಿಲ್ಲ.
ನೇಪಾಳಿ ಕಾಂಗ್ರೆಸ್ ನೊಂದಿಗೆ ಪ್ರಚಂಡ ನೇತೃತ್ವದ ಸಿಪಿಎನ್-ಮಾವೋವಾದಿ ಕೇಂದ್ರ ಚುನಾವಣಾ ಮೈತ್ರಿ ಹೊಂದಿತ್ತು. ಆದರೆ ಕಳೆದ ವರ್ಷ ನಡೆದ ನಾಟಕೀಯ ರಾಜಕೀಯ ಬೆಳವಣಿಗೆಯಲ್ಲಿ ಪ್ರಚಂಡ ಮೈತ್ರಿಯಿಂದ ಹೊರ ಬಂದರು. ನಂತರ ವಿರೋಧ ಪಕ್ಷದ ನಾಯಕರಾಗಿದ್ದ ಕೆ.ಪಿ.ಶರ್ಮಾ ಓಲಿ ಮೂರನೇ ಬಾರಿಗೆ ದೇಶದ ಅತ್ಯನ್ನತ ಕಾರ್ಯನಿರ್ವಾಹಕ ಹುದ್ದೆಯಾದ ಪ್ರಧಾನಿ ಸ್ಥಾನವನ್ನು ಡಿಸೆಂಬರ್ 26ರಂದು ಅಲಂಕರಿಸಿದರು.
ಸ್ಯಾಂಟ್ರೊ ರವಿ ಬಂಧನದಿಂದ ಸಚಿವರು ಸೇರಿ ಅನೇಕ ಗಣ್ಯರಿಗೆ ಶುರುವಾಯ್ತು ನಡುಕ
68 ವರ್ಷದ ಪ್ರಚಂಡ ಇತ್ತೀಚೆಗೆ ವಿಶ್ವಾಸಮತ ಸಾಬೀತುಪಡಿಸಿದರು. ಬಳಿಕ ಆಯ್ದ ಪತ್ರಕರ್ತರ ಜೊತೆ ಮಾತನಾಡುವ ವೇಳೆ ಭಾರತಕ್ಕೆ ಭೇಟಿ ನೀಡುವ ಉತ್ಸುಕತೆಯಲ್ಲಿ ಬಹಿರಂಗ ಪಡಿಸಿದರು.ಅದಕ್ಕಾಗಿ ರಾಜತಾಂತ್ರಿಕ ಮಟ್ಟದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಸಂಬಂತ ರಾಯಭಾರ ಕಚೇರಿಗಳು ನನ್ನ ಭೇಟಿಗೆ ಸಿದ್ಧತೆಗಳನ್ನು ನಡೆಸುತ್ತಿವೆ ಎಂದು ತಿಳಿಸಿದರು.
ನೇಪಾಳ ಸರ್ಕಾರ ಪ್ರಧಾನಿಯವರ ಭಾರತ ಭೇಟಿಯನ್ನು ಇನ್ನೂ ಅಕೃತವಾಗಿ ಪ್ರಕಟಿಸಿಲ್ಲ. ಭೇಟಿಯ ದಿನಾಂಕ ಮತ್ತು ಪ್ರಯಾಣದ ವಿವರ ಇನ್ನೂ ಅಂತಿಮಗೊಂಡಿಲ್ಲ. ನಾವು ದಿನಾಂಕ ಮತ್ತು ವಿವರವಾದ ಕಾರ್ಯಕ್ರಮಗಳು ಮತ್ತು ನಮ್ಮ ಪ್ರಧಾನಿಯವರ ಸಮಯದ ಸಮನ್ವಯದೊಂದಿಗೆ ಭೇಟಿಯ ಕಾರ್ಯಸೂಚಿಯನ್ನು ಅಂತಿಮಗೊಳಿಸುವುದಾಗಿ ಸ್ಪಷ್ಟ ಪಡಿಸಿದ್ದಾರೆ.
ಪ್ರಧಾನಿ ಸ್ಥಾನವನ್ನು ವಹಿಸಿಕೊಂಡ ನಂತರ ನೆರೆಯ ದೇಶಕ್ಕೆ ಭೇಟಿ ನೀಡುವುದು ಸಾಮಾನ್ಯ ಪ್ರಕ್ರಿಯೆ ಮತ್ತು ಆಂತರಿಕವಾಗಿ ನಾವು ಅದಕ್ಕೆ ಯಾವಾಗಲೂ ಸಿದ್ಧರಿದ್ದೇವೆ ಎಂದು ಭಾರತೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರಚಂಡ ಅವರು ಈ ಮೊದಲು ನೇಪಾಳದ ಪ್ರಧಾನಿಯಾಗಿದ್ದ ಅವಯಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು.ಕಳೆದ ವರ್ಷ ಜುಲೈನಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಆಹ್ವಾನದ ಮೇರೆಗೆ ಪ್ರಚಂಡ ಭಾರತಕ್ಕೆ ಭೇಟಿ ನೀಡಿದ್ದರು.
#NepalPM, #PushpaKamalDahalPrachanda, #visit, #India,