ಪಾಟ್ನಾ,ಡಿ.9-ನೆಟ್‍ಫ್ಲಿಕ್ಸ್ ಸಂಸ್ಥೆಯೊಂದಿಗೆ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ ಆರೋಪಕ್ಕಾಗಿ ಬಿಹಾರದ ಐಪಿಎಸ್ ಅಧಿಕಾರಿ ಅಮಿತ್‍ಲೋದಾ ಅವರನ್ನು ಅಮಾನತುಗೊಳಿಸಲಾಗಿದೆ. ಬಹು ಚರ್ಚಿತ ಖಾಕಿ ಚಿತ್ರ ಸರಣಿಯ ಆವೃತಿ ಬಿಡುಗಡೆ ಬಳಿಕ ಅಮಿತ್‍ಲೋದಾ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅಮಿತ್ ಅವರು ತಮ್ಮ ವೈಯಕ್ತಿಕ ಹಣಕಾಸು ಲಾಭಕ್ಕಾಗಿ ಸರ್ಕಾರಿ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ವೆಬ್‍ಸೀರಿಸ್ ಪ್ರಸಾರಗಳ ಕುರಿತಂತೆ ಪ್ರೊಡೆಕ್ಸನ್ ಹೌಸ್ ಜತೆ ಒಪ್ಪಂದ ಮಾಡಿಕೊಂಡಿರುವುದು ಅಕ್ಷಮ್ಯ ಎಂದು ಹೇಳಲಾಗಿದೆ.
ಅಧಿಕೃತ ಹೇಳಿಕೆಯ ಪ್ರಕಾರ ಇಲಾಖೆಯ ಆಂತರಿಕ ತನಿಖೆಯಲ್ಲಿ ಅಮಿತ್ ಅವರ ಲೋಪಗಳು ಕಂಡು ಬಂದಿದ್ದವು. ಡಿ.7ರಂದು ವಿಶೇಷ ಜಾಗೃತ ಘಟಕದಲ್ಲಿ ಐಪಿಸಿ 120ಬಿ , 168 ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ವೆಬ್ ಸೀರಿಸ್ ಒಪ್ಪಂದಕ್ಕೆ ಸಹಿ : ಐಪಿಎಸ್ ಅಧಿಕಾರಿ ಅಮಾನತು
ಮೇಲ್ನೊಟಕ್ಕೆ ಪುರಾವೆಗಳು ಸಿಕ್ಕ ಕಾರಣಕ್ಕಾಗಿ ವಿಚಾರಣೆಯನ್ನು ಕಾಯ್ದಿರಿಸಿ ಅಮಿತ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.