ಬೆಂಗಳೂರು,ಮೇ 27- ಸಂಪುಟದಲ್ಲಿ ಅವಕಾಶ ಪಡೆದ ನೂತನ ಸಚಿವರು ತಮ್ಮ ಹರ್ಷ ವ್ಯಕ್ತಪಡಿಸಿದ್ದು, ಯಾವುದೇ ಖಾತೆ ಕೊಟ್ಟರು ಜವಾಬ್ದಾರಿ ನಿಭಾಯಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸಚಿವ ಈಶ್ವರ್ ಖಂಡ್ರೆ, ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಅಥವಾ ಒತ್ತಡ ಹಾಕಿಲ್ಲ. ಕಾರ್ಯಾಧ್ಯಕ್ಷನಾಗಿ ಐದು ವರ್ಷ ಕೆಲಸ ಮಾಡಿದ್ದೇನೆ. ಆ ಕೆಲಸವನ್ನು ಪಕ್ಷ ಗುರುತಿಸಿದೆ.
ಎರಡನೇ ಬಾರಿ ಸಚಿವನಾಗುತ್ತಿರುವ ವೇಳೆ ಖಾತೆಗಾಗಿ ತಕರಾರು ತೆಗೆಯುವುದಿಲ್ಲ ಎಂದಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿರುವ ಪ್ರಾತಿನಿಧ್ಯ ಸಮಾಧಾನ ತಂದಿದೆ. ಬಿಜೆಪಿ ಕಲ್ಯಾಣ ಕರ್ನಾಟಕವನ್ನು ನಿರ್ಲಕ್ಷ್ಯಿಸಿತ್ತು. ಕಾಂಗ್ರೆಸ್ ಸರ್ಕಾರ ಉತ್ತಮ ಅವಕಾಶಗಳನ್ನು ನೀಡಿದೆ. ಬೀದರ್ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಕ್ಕಿವೆ ಎಂದಿದ್ದಾರೆ.

ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಹಿಂದೆ ಎರಡು ಬಾರಿ ಸಚಿವನಾಗಿದ್ದೆ. ಜನರಿಗೆ ಒಳ್ಳೆಯ ಕೆಲಸ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ಪ್ರಮಾಣಿಕವಾಗಿ ಎಲ್ಲರಿಗೂ ಸೇವೆ ಮಾಡುತ್ತೇನೆ ಎಂದಿದ್ದಾರೆ.ತಂದೆಯ ಮಾರ್ಗದರ್ಶನ ಇದೆ ಇರುತ್ತದೆ. ಹಾಗೂ ಹೋಗುಗಳ ಬಗ್ಗೆ ಅವರ ಜೊತೆ ಚರ್ಚೆ ಮಾಡುತ್ತೇನೆ. ಎಲ್ಲರನ್ನೂ ಸರಿ ಸಮಾನವಾಗಿ ನೋಡಿ, ನಿರೀಕ್ಷೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಡಬಲ್ ಧಮಾಕ ಖುಷಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್
ಮಧು ಬಂಗಾರಪ್ಪ ಮಾತನಾಡಿ, ನಂಬಿಕೆ ವಿಶ್ವಾಸದ ಮೇಲೆ ನಾನು ಕಾಂಗ್ರೆಸ್ ಸೇರಿದ ದಿನದಿಂದಲೂ ಜವಾಬ್ದಾರಿ ನಿಡುತ್ತಿದ್ದಾರೆ. ಈ ಮೊದಲು ತಮ್ಮ ತಂದೆ ಬಂಗಾರಪ್ಪ ಅವರಿಗೆ ಅವಕಾಶ ನೀಡಿದಂತೆ ಕಾಂಗ್ರೆಸ್ ನನಗೂ ಅವಕಾಶ ನೀಡುತ್ತಿದೆ ಎಂದು ಹೇಳಿದರು.
ಅವಕಾಶಕ್ಕೆ ತಕ್ಕ ಹಾಗೆ ಜವಾಬ್ದಾರಿ ನಿಭಾಯಿಸುತ್ತೇನೆ.

ನಾನು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲಿಲ್ಲ, ಅಳೆದು ತೂಗಿ ಅವಕಾಶ ನೀಡಿದ್ದಾರೆ. ಅವರಿಗೂ ಒತ್ತಡಗಳಿರುತ್ತವೆ.ಹಾಗಾಗಿ ಕಾಲಾವಕಾಶ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ನಾನು ಎಲ್ಲಿಯೂ ಹೋಗದೆ ಕ್ಷೇತ್ರದಲ್ಲೇ ಇದ್ದೆ ಎಂದಿದ್ದಾರೆ.
#CabinetMinisters, #takeoath, #CabinetExpansion, #CongressGovt,