ನವದೆಹಲಿ, ಫೆ.11- ಪರಿಸರ ಮಾಲಿನ್ಯ ನಿಯಂತ್ರಣ, ಇಂಧನ ಉತ್ಪಾದನೆಗೆ ಬಳಕೆ ಮಾಡುವ ಸಲುವಾಗಿ ಇಂಗಾಲ ಸಂಗ್ರಹಕ್ಕೆ ಮುಂಬೈ ಹಾಗೂ ಬೆಂಗಳೂರಿನಲ್ಲಿ ಎರಡು ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ ಎರಡು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಮುಂಬೈನ ಬಾಂಬೆ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಬೆಂಗಳೂರಿನ ಜವಹರಲಾಲ್ ನೆಹರು ಅತ್ಯಾಧುನಿಕ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಇವು ಅನುಷ್ಠಾನಕ್ಕೆ ಬರಲಿವೆ.
ಈ ಕೇಂದ್ರಗಳು ಕಾರ್ಬನ್ ಬಳಕೆಯ ಸಂಶೋಧನೆ ಕುರಿತ ಚಟುವಟಿಕೆಗಳಿಗೆ ಹಾಗೂ ಈ ಕ್ಷೇತ್ರಗಳ ಬಾಧ್ಯಸ್ಥ ಸಂಸ್ಥೆಗಳು, ಕೈಗಾರಿಕೆಗಳೊಂದಿಗೆ ಸಮನ್ವಯ ಸಾಸಲು ಕೆಲಸ ಮಾಡಲಿದೆ. ದೀರ್ಘಾವಯ ಸಂಶೋಧನೆ, ವಿನ್ಯಾಸ, ಅಭಿವೃದ್ಧಿ, ಸಾಮಥ್ರ್ಯ ವೃದ್ಧಿಯ ಧೇಯೋದ್ದೇಶಗಳನ್ನು ಹೊಂದಿರುವ ಈ ಕೇಂದ್ರಗಳಲ್ಲಿ ಸಾಮೂಹಿಕ ಶಕ್ತಿಯನ್ನು ಒಟ್ಟುಗೂಡಿಸಲು ಕಾರ್ಯಯೋಜನೆ ಸಿದ್ಧವಾಗಿದೆ.
ಇಂಗಾಲ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಮೂಲಕ ಪರಿಸರ ಸಮತೋಲನ ಕಾಪಾಡುವುದು, ಸುಸ್ಥಿರ ಅಭಿವೃದ್ಧಿಯ ಗುರಿಯೊಂದಿಗೆ ಬೆಂಗಳೂರಿನ ಕೇಂದ್ರ ಕಾರ್ಬನ್ ವಸ್ತುಗಳು ಮತ್ತು ವಿಧಾನಗಳನ್ನು ಅಭಿವೃದ್ಧಿಪಡಿಸಲಿದೆ. ಹೈಡ್ರೋ ಕಾರ್ಬನ್, ಓಲಿಫೈನ್‍ಗಳು ಮತ್ತು ಇತರ ಮೌಲ್ಯಾಧಾರಿತ ರಸಾಯನಿಕಗಳನ್ನು ಇಂಧನ ಉತ್ಪಾದನೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಪ್ರಾಯೋಗಿಕ ಮಾದರಿಯನ್ನು ರೂಪಿಸುತ್ತದೆ ಎಂದು ತಿಳಿಸಲಾಗಿದೆ.
