ಚಿಕಾಗೋ,ಡಿ.17- ಕೊರೊನಾ ನಿರ್ಬಂಧಗಳನ್ನು ಚೀನಾ ತೆಗೆದು ಹಾಕಿದರೆ ಮುಂದಿನ ವರ್ಷದಲ್ಲಿ ಒಂದು ಮಿಲಿಯನ್ಗಿಂತಲೂ ಹೆಚ್ಚು ಸಾವು-ನೋವು ಸಂಭವಿಸುವ ಸಾಧ್ಯತೆಗಳಿವೆ ಎಂದು ಅಮೆರಿಕ ಎಚ್ಚರಿಸಿದೆ.
ಚೀನಾದಲ್ಲಿ ಕೊರೊನಾ ಕಾಟ ಹೆಚ್ಚಾಗಿದ್ದರೂ ಕೆಲ ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತಿದೆ.
ಇದೇ ರೀತಿ ಬೆಜವಬ್ದಾರಿತನ ಪ್ರದರ್ಶಿಸಿದರೆ, ಚೀನಾ ಜನಸಂಖ್ಯೆಯ ಮೂರನೇ ಒಂದು ಭಾಗದ ಜನರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆಗಳಿವೆ ಎಂದು ಅಮೆರಕಾ ಮೂಲಕ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಮತ್ತು ಇವಾಲ್ಯೂವೇಷನ್ ಸಂಸ್ಥೆ ಎಚ್ಚರಿಕೆ ನೀಡಿದೆ.
ಕೊರೊನಾ ನಿರ್ಬಂಧಗಳನ್ನು ತೆಗೆದು ಹಾಕಿದ ನಂತರ ಚೀನಾ ಯಾವುದೆ ಸಾವು-ನೋವುಗಳ ಬಗ್ಗೆ ಅಕೃತ ಮಾಹಿತಿ ನೀಡಿಲ್ಲ ಎಂದು ಸಂಸ್ಥೆಯ ನಿರ್ದೇಶಕ ಕ್ರಿಸ್ಟೋಫರ್ ಮುರ್ರೆ ಹೇಳಿದ್ದಾರೆ.
ಸಾರ್ವಜನಿಕರ ವ್ಯಾಪಕ ಪ್ರತಿಭಟನೆ ಹಿನ್ನಲೆಯಲ್ಲಿ ಚೀನಾ ಕೊರೊನಾದ ಕಠಿಣ ನಿರ್ಬಂಧಗಳನ್ನು ತೆಗೆದು ಹಾಕಿದ ಪರಿಣಾಮ ಈಗ ಅಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿರುವುದರಿಂದ ಭವಿಷ್ಯದಲ್ಲಿ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.
ಚೀನಾದ 1.41 ಶತಕೋಟಿ ಜನಸಂಖ್ಯೆಗೆ ಅನುಗುಣವಾಗಿ ಸಾಮೂಹಿಕ ವ್ಯಾಕ್ಸಿನೇಷನ್ ಬೂಸ್ಟರ್ ಅಭಿಯಾನ ಕೈಗೊಳ್ಳದ ಪರಿಣಾಮ ಒಂದು ಮಿಲಿಯನ್ಗೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
#NewCovidVariant, #emerge, #China, #covidcasesexplode,