ಬೀಜಿಂಗ್,ಮಾ.18- ಮನುಕುಲವನ್ನೇ ಅಪಾಯದಂಚಿಗೆ ನೂಕಿದ್ದ ಕೋವಿಡ್-19 ಸೋಂಕು ಪತ್ತೆಯಾದ ಮೊದಲ ಸ್ಥಳದಲ್ಲಿನ ರಕೂನ್ ನಾಯಿಗಳಲ್ಲಿ ಕೊರೊನಾ ಡಿಎನ್‍ಎ ಪತ್ತೆಯಾಗಿದ್ದು, ಇದರ ಆಧಾರದ ಮೇಲೆ ಚೀನಾ ಮತ್ತೊಂದು ವಾದವನ್ನು ಮುಂದಿಡಲಾರಂಭಿಸಿದೆ.
ಕೊರೊನಾ ಸೋಂಕು ಚೀನಾದ ವ್ಯೂಹಾನ್‍ನಲ್ಲಿ ವೈರಾಣು ಸಂಶೋಧನಾ ಕೇಂದ್ರದಿಂದ ಸೋರಿಕೆಯಾಗಿದೆ ಎಂಬ ಆರೋಪಗಳಿವೆ. ಆದರೆ ಹೊಸ ಜಿನೆಟಿಕ್ ಮೆಟಿರಿಲ್‍ನ ಅಂಶಗಳು ಕೋವಿಡ್-19 ಸೋಂಕು ಪ್ರಾಣಿ ಜನ್ಯವಾಗಿರಬಹುದು ಎಂಬುದಕ್ಕೆ ಅಸ್ಪಷ್ಟ ಪುರಾವೆಯಾಗಿದೆ ಎಂದು ಅಂತರಾಷ್ಟ್ರೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇಡೀ ವಿಶ್ವವನ್ನೇ ನಲುಗಿಸಿದ ಕೋವಿಡ್-19 ರೋಗಾಣುವಿನ ಮೂಲ ಪತ್ತೆ ಹಚ್ಚುವುದು ಅನಿವಾರ್ಯವಾಗಿದೆ ಎಂದು ವಿಶ್ವಸಂಸ್ಥೆ ಘೋಷಿಸಿದ ಬೆನ್ನಲ್ಲೆ ರಕೂನ್ ನಾಯಿಯ ಡಿಎನ್‍ಎ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕೋಲ್ಡ್ ಸ್ಟೋರೇಜ್ ಕುಸಿದು 14 ಮಂದಿ ಸಾವಿನ ಪ್ರಕರಣ, ಇಬ್ಬರು ಮಾಲೀಕರ ಬಂಧನ
ಹೊಸದಾದ ಸಂಶೋಧನೆಗಳು ಕೋವಿಡ್ ಸೋಂಕು ಸಂಪೂರ್ಣ ಪ್ರಾಣಿಜನ್ಯ ಎಂದು ಹೇಳಲು ಸಬಲವಾಗಿಲ್ಲ. ಆದರೆ ಅಧ್ಯಯನ ಹೊಸ ದಿಕ್ಕುಗಳನ್ನು ಸೃಷ್ಟಿಸಿದೆ. ವ್ಯೂಹಾನ್‍ನಲ್ಲಿನ ಮಾಂಸ ಮಾರುಕಟ್ಟೆಯಲ್ಲಿ ಸೋಂಕು ಜನ್ಮತಾಳಿದೆ ಎಂಬ ವಾದಗಳು ಇವೆ. ಅದರ ಮೂಲ ಪತ್ತೆ ಹಚ್ಚಲು ಅಂತಾರಾಷ್ಟ್ರೀಯ ತಜ್ಞರು ಸತತ ಪ್ರಯತ್ನ ನಡೆಸುತ್ತಲೇ ಇದ್ದಾರೆ.
ಈವರೆಗೂ ಚೀನಾ ಹಳೆಯ ಮಾಹಿತಿಗಳನ್ನಾಗಲಿ, ಹೊಸ ಅಂಶಗಳನ್ನಾಗಲಿ ಪಾರದರ್ಶಕವಾಗಿ ಹಂಚಿಕೊಳ್ಳದೆ ಗೊಂದಲ ಮೂಡಿಸಿದೆ. 2020ರ ಆರಂಭದಲ್ಲಿ ವ್ಯೂಹಾನ್‍ನ ಹುವಾನಾನ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಕೆಲ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.
ಆ ಸಂಶೋಧನೆಗಳನ್ನು ನಡೆಸಿರುವ ಚೀನಾದ ರೋಗ ನಿಯಂತ್ರಕ ಮತ್ತು ನಿಯಂತ್ರಣಾ ವಿಜ್ಞಾನಿಗಳು ಸೋಂಕಿನ ಅನುವಂಶಿಕೆ ಅನುಕ್ರಮಗಳನ್ನು ವಿಶ್ಲೇಷಣೆ ನಡೆಸಿದ್ದಾರೆ. ಆದರೆ ವಿದೇಶಿ ವಿಜ್ಞಾನಿಗಳೊಂದಿಗೆ ಹಂಚಿಕೊಂಡಿಲ್ಲ. ಆದರೆ ಆಕಸ್ಮಿಕವಾಗಿ ಪ್ರೆಂಚ್ ವಿಜ್ಞಾನಿಗಳು ಈ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಸಿದ್ದು ವಿರುದ್ಧ ಬಿ.ವೈ.ವಿಜಯೇಂದ್ರ ಕಣಕ್ಕೆ..?
ಮಾಂಸಾಹಾರ ಮಾರುಕಟ್ಟೆಯಲ್ಲಿ ರಕೂನ್ ನಾಯಿ ಮಾಂಸದಲ್ಲಿ ಸಂಗ್ರಹಿಸಲಾದ ಮಾದರಿಯಲ್ಲಿ ಕೋವಿಡ್ ಡಿಎನ್‍ಎ ಪತ್ತೆಯಾಗಿದೆ. ರಕೂನ್ ನಾಯಿಗಳನ್ನು ಕೋರೆ ಹಲ್ಲುಗಳು, ಮಾಂಸ ಹಾಗೂ ತುಪ್ಪಳಕ್ಕಾಗಿ ಬಳಸಲಾಗುತ್ತದೆ. ಆ ನಾಯಿಗಳಿಂದಲೂ ಕೋವಿಡ್ ಹರಡಿರುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ.