ಬೆಂಗಳೂರಿಗೆ ಬಂದ ಹೊಸ ಮೆಟ್ರೋ ರೈಲು ಬೋಗಿಗಳು

Social Share

ಬೆಂಗಳೂರು, ಅ.15- ಮೆಟ್ರೋ ರೈಲಿನ ಹೊಸ ಬೋಗಿಗಳು ಇಂದು ನಗರಕ್ಕೆ ಆಗಮಿಸಿವೆ. ಇಂದು ಬೆಳಿಗ್ಗೆ ಅಗಮಿಸಿದ ಬೋಗಿ ಗಳನ್ನು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್ ಅವರು ಸ್ವೀಕರಿಸಿದರು.

ವೈಟ್ಫೀಲ್ಡ್ಗೆ ಅಗಮಿಸಿದ 6 ಹೊಸ ಕೋಚ್ಗಳನ್ನು ಮೇಟ್ರೋ ಡಿಪೋದಲ್ಲಿ ಅನ್ಲೋಡ್ ಮಾಡಲಾಗಿದೆ.
ಒಂದೊಂದು ಕೋಚ್ಗಳು ಸುಮಾರು 9 ಕೋಟಿ ರೂ. ಬೆಲೆ ಬಾಳಲಿವೆ. ಈಗ ಬಂದಿರುವ 6 ಬೋಗಿಗಳನ್ನು ಒಂದುಗೂಡಿಸಿದರೆ ಅದು ಹೊಸ ಮೆಟ್ರೋ ರೈಲಾಗಲಿದೆ.

ಹೊಸ ಮೆಟ್ರೋ ರೈಲು ತಯಾರಿಸುವ ಹೊಣೆಯನ್ನು ಬಿಇಎಂಎಲ್ ವಹಿಸಿಕೊಂಡಿದ್ದು ಸಧ್ಯ ಒಂದು ರೈಲಿನ 6ಬೋಗಿಗಳನ್ನು ನಗರಕ್ಕೆ ತರಲಾಗಿದೆ. ಇದೇ ರೀತಿಯ 7 ರೈಲುಗಳನ್ನು ಬಿಇಎಂಎಲ್ ಸಿದ್ಧಪಡಿಸುತ್ತಿದೆ.

Articles You Might Like

Share This Article