ನಿರ್ಧಿಷ್ಟ ಕೊಠಡಿಗೆ ಬೇಡಿಕೆ ಇಟ್ಟ ನೂತನ ಸಚಿವರು

ಬೆಂಗಳೂರು, ಆ.4- ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ವಿಧಾನಸೌಧ-ವಿಕಾಸಸೌಧದಲ್ಲಿ ನಿರ್ದಿಷ್ಟ ಕೊಠಡಿಗಳಿಗೆ ಕೆಲವು ಸಚಿವರು ಬೇಡಿಕೆ ಇಟ್ಟಿದ್ದಾರೆ.  ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಮತ್ತು ನಂತರ ಕೆಲವು ಸಚಿವರು ತಮಗೆ ಇಷ್ಟವಾದ ಕೊಠಡಿಗಳನ್ನು ಹಂಚಿಕೆ ಮಾಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆದು ಕೋರಿದ್ದಾರೆ.

ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವುದು ಖಾತರಿಯಾಗುತ್ತಿದ್ದಂತೆ ತಮಗೆ ಇಷ್ಟವಾದ ಕೊಠಡಿಗಳ ಹುಡುಕಾಟದಲ್ಲಿ ಕೆಲವರು ತೊಡಗಿದ್ದರೆ, ಇಂತಹುದೇ ಕೊಠಡಿ ಬೇಕೆಂದು ಪತ್ರ ಬರೆದಿದ್ದಾರೆ.

#ಒಂದು ಸಾವಿರ ಪೊಲೀಸರ ಭದ್ರತೆ ” 
ಬೆಂಗಳೂರು, ಆ.4- ರಾಜಭವನದಲ್ಲಿ ಇಂದು ಮಧ್ಯಾಹ್ನ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದ ಬಂದೋಬಸ್ತ್‍ಗಾಗಿ 8 ಮಂದಿ ಡಿಸಿಪಿಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಒಬ್ಬರು ಜಂಟಿ ಪೊಲೀಸ್ ಆಯುಕ್ತರು, ಒಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, 12 ಕೆಎಸ್‍ಆರ್‍ಪಿ ತುಕಡಿಯನ್ನು ಭದ್ರತೆಗಾಗಿ ರಾಜಭವನದ ಬಳಿ ನಿಯೋಜಿಸಲಾಗಿದೆ.