ಅಮೆರಿಕ ಮತ್ತು ಚೀನಾಗೆ ಓಮಿಕ್ರಾನ್‍ನ ಉಪತಳಿಗಳ ಕಾಟ

Social Share

ನವದೆಹಲಿ,ನ.6-ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕೋವಿಡ್ ಹಾವಳಿ ತಗ್ಗಿದೆಯಾದರೂ ಅಮೆರಿಕ ಮತ್ತು ಚೀನಾವನ್ನು ಕೊರೊನಾದ ಉಪತಳಿಗಳು ಕಾಡಲಾರಂಭಿಸಿವೆ. ಓಮಿಕ್ರಾನ್‍ನ ಉಪತಳಿಗಳಾದ ಬಿಕ್ಯೂ1 ಮತ್ತು ಬಿಕ್ಯೂ1.1 ರೂಪಾಂತರಿಗಳು ಚೀನಾ ಮತ್ತು ಅಮೆರಿಕಕ್ಕೆ ಕಂಟಕಪ್ರಾಯವಾಗಿದ್ದು, ಒಟ್ಟು ಕೋವಿಡ್ ಸೋಂಕಿನಲ್ಲಿ ಶೇ.35ರಷ್ಟು ಪಾಲು ಪಡೆದಿವೆ.

ಭಾರತದಲ್ಲಿ ಕೋವಿಡ್ ಸೋಂಕು ತಗ್ಗಿದ್ದು, ಭಾನುವಾರ 1132 ಹೊಸ ಪ್ರಕರಣಗಳು ವರದಿಯಾಗಿವೆ. 14 ಸಾವುಗಳು ಸಂಭವಿಸಿವೆ. ಅದೃಷ್ಟವಶಾತ್ ಸಕ್ರಿಯ ಪ್ರಕರಣಗಳ ಸಂಖ್ಯೆ 15 ಸಾವಿರದ ಒಳಗೆ ತಗ್ಗಿದೆ. ಚೀನಾ ಶೂನ್ಯ ಕೋವಿಡ್ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿದೆ. ಲಾಕ್‍ಡೌನ್, ಕ್ವಾರಂಟೈನ್ ಸೇರಿದಂತೆ ಬಿಗಿಕ್ರಮಗಳ ಹೊರತಾಗಿಯೂ ಅಲ್ಲಿ ಕಳೆದ 6 ತಿಂಗಳ ನಂತರ ಅತ್ಯಕ ಪ್ರಕರಣಗಳು ವರದಿಯಾಗಿದ್ದು, ಸ್ಥಳೀಯ ಆಡಳಿತಕ್ಕೆ ತಲೆನೋವು ತಂದಿದೆ.

ಈ ಆಸ್ಪತ್ರೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಉಚಿತ ಚಿಕಿತ್ಸೆ

ಬಹುತೇಕ ವರದಿಯಾದ ಪ್ರಕರಣಗಳನ್ನು ಬಿಕ್ಯೂ1 ಮತ್ತು ಬಿಕ್ಯೂ1.1 ಪ್ರಕರಣಗಳ ಹಾವಳಿ ಹೆಚ್ಚಾಗಿದೆ. ಬೀಜಿಂಗ್‍ನಲ್ಲಿ 43 ರೋಗಲಕ್ಷಣಗಳ ಹೊಸ ಪ್ರಕರಣಗಳು ಪತ್ತೆಯಾಗಿವೆ. 4,420ಕ್ಕೂ ಹೆಚ್ಚು ಹೊಸ ಪ್ರಕರಣಗಳು ಜನರನ್ನು ಕಂಗೆಡಿಸಿದೆ.

ಬೆಂಗಳೂರಿಗೆ ಬಂದಿಳಿದ AICC ಅಧ್ಯಕ್ಷ ಖರ್ಗೆ, ಕಾಂಗ್ರೆಸ್‍ನಲ್ಲಿ ಹಬ್ಬದ ವಾತಾವರಣ

ಅಮೆರಿಕದಲ್ಲಿ ಅ.15ರಿಂದೀಚೆಗೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ವಿಶ್ವದ ದೊಡ್ಡಣ್ಣನನ್ನು ವಿಜ್ಞಾನಿಗಳು, ಔಷ ತಯಾರಿಕಾ ಕಂಪನಿಗಳು ರೂಪಾಂತರ ಉಪತಳಿಗಳ ನಿಯಂತ್ರಣಕ್ಕೆ ಲಸಿಕೆಗಳ ಪರಿಣಾಮ ಎಷ್ಟು ಎಂಬ ಬಗ್ಗೆ ಅನ್ವೇಷಣೆ ನಡೆಸುತ್ತಿದ್ದಾರೆ.

ವಿಶ್ವದ ಬಹುತೇಕ ದೇಶಗಳಲ್ಲಿ ಕೋವಿಡ್ ತಗ್ಗಿದ್ದರೂ ಚೀನಾ ಮತ್ತು ಅಮೆರಿಕವನ್ನು ಬಿಟ್ಟು ಬಿಡದೆ ಕಾಡುತ್ತಿರುವುದು ವಿಶ್ವಸಂಸ್ಥೆಯ ಕಳವಳಕ್ಕೆ ಕಾರಣವಾಗಿದೆ.

Articles You Might Like

Share This Article