ಹೊಸ ಪಾರ್ಕಿಂಗ್ ನೀತಿಗೆ ಬಿಜೆಪಿಯಲ್ಲೇ ಅಪಸ್ವರ

Social Share

ಬೆಂಗಳೂರು,ಸೆ.24-ನಗರದ ವಾಹನದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜಾರಿಗೆ ತರಲು ನಿರ್ಧರಿಸಲಾಗಿರುವ ಹೊಸ ಪಾರ್ಕಿಂಗ್ ನೀತಿಗೆ ಆಡಳಿತರೂಢ ಬಿಜೆಪಿಯಲ್ಲಿ ಅಪಸ್ವರ ಕೇಳಿ ಬಂದಿದೆ. ನಾಗರಿಕರಿಗೆ ಹೊರೆಯಾಗುವ ಹೊಸ ಪಾರ್ಕಿಂಗ್ ನೀತಿ ಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಅಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳ ಸುಮಾರು 723 ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ವಿಸುವ ಸಂಬಂಧ ನಗರ ಭೂ ಸಾರಿಗೆ ನಿರ್ದೇಶನಾಲಯ ರೂಪಿಸಿರುವ ಪಾರ್ಕಿಂಗ್ ನೀತಿ – 2.0 ಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.

ಮನೆ ಮುಂದೆ ನಿಲ್ಲಿಸುವ ವಾಹನಗಳಿಗೂ ಶುಲ್ಕ ವಿಧಿಸುವುದು ಸೇರಿದಂತೆ ಹಲವಾರು ಲೋಪದೋಷಗಳಿಂದ ಕೂಡಿರುವ ಹೊಸ ಪಾರ್ಕಿಂಗ್ ನೀತಿಯಿಂದ ವಾಹನದಟ್ಟಣೆಗೆ ಕಡಿವಾಣ ಹಾಕಬಹುದು ಎಂಬ ಬಿಬಿಎಂಪಿ ಹೇಳಿಕೆ ಹಾಸ್ಯಸ್ಪದವಾಗಿದೆ.

ನಗರದಲ್ಲಿ ಯಾವುದೇ ಕಾರಣಕ್ಕೂ ಪಾರ್ಕಿಂಗ್ ಶುಲ್ಕ ಜಾರಿ ಮಾಡಬಾರದು ಎಂದು ಹತ್ತಾರು ಬಾರಿ ಹಲವಾರು ಸಂಘಟನೆಗಳು, ಹೋರಾಟಗಾರರು ಹಾಗೆಯೇ ವಿವಿಧ ಸಂಘ ಸಂಸ್ಥೆಗಳು ಪಾಲಿಕೆಯ ಮಾನ್ಯ ಆಯುಕ್ತರಿಗೆ ಮತ್ತು ಹಿಂದಿನ ಮಹಾಪೌರರಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದರ ಪರಿಣಾಮ ಬೆಂಗಳೂರು ಮಹಾನಗರದಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಆದರೆ, ಸಾರ್ವಜನಿಕರ ಮನವಿಗಳಿಗೆ ಓಗೊಡದೇ ಏಕಾಏಕಿ ಪಾಲಿಕೆ ವ್ಯಾಪ್ತಿಯ 08 ವಲಯಗಳ 723 ರಸ್ತೆಗಳಲ್ಲಿ ಹೊಸ ಪಾರ್ಕಿಂಗ್ ನೀತಿ ಯನ್ನು ಜಾರಿಗೆ ತರುತ್ತಿರುವುದು ನಿಜಕ್ಕೂ ಬೆಂಗಳೂರು ನಾಗರಿಕ ವಿರೋ ಕ್ರಮವಾಗಿರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ನಗರದ ನಾಗರೀಕರಿಗೆ ವಿರೋಧವಾಗಿರುವ ಹೊಸ ಪಾರ್ಕಿಂಗ್ ನೀರಿಯನ್ನು ಕೂಡಲೇ ಕೈಬಿಡಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

Articles You Might Like

Share This Article