Wednesday, May 31, 2023
Homeಇದೀಗ ಬಂದ ಸುದ್ದಿನಾಳೆ ಲೋಕಾರ್ಪಣೆಯಾಗಲಿದೆ ಭವ್ಯ ನೂತನ ಸಂಸತ್ ಭವನ, ಏನೇನಿದೆ ವಿಶೇಷತೆ..?

ನಾಳೆ ಲೋಕಾರ್ಪಣೆಯಾಗಲಿದೆ ಭವ್ಯ ನೂತನ ಸಂಸತ್ ಭವನ, ಏನೇನಿದೆ ವಿಶೇಷತೆ..?

- Advertisement -

ನವದೆಹಲಿ, ಮೇ 27- ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹೆಮ್ಮೆಯ ಪ್ರತೀಕ ಎಂದೇ ಕರೆಯುವ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾದವನ್ನು ನಾಳೆ ಲೋಕಾರ್ಪಣೆ ಮಾಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜಕೀಯದ ಕರಿನರಳು ಆವರಿಸಿದ್ದು ಒಟ್ಟು 19 ಪ್ರತಿಪಕ್ಷಗಳು ಬಿಹಿಷ್ಕರಿಸಿದ್ದರೆ, ಬಿಜೆಪಿ ಜೊತೆಗಿನ ಭಿನ್ನಾಭಿಪ್ರಾಯನ್ನು ಬದಿಗೊತ್ತಿ ಕೆಲವು ರಾಜಕೀಯ ಪಕ್ಷಗಳು ಪಾಲ್ಗೊಳ್ಳಲಿವೆ.ಇದೇ ವೇಳೆ ಲೋಕಾರ್ಪಣೆಯ ನೆನಪಿಗಾಗಿ 75 ರೂಪಾಯಿಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಇನ್ನು ಕರ್ನಾಟಕದಿಂದ ಜೆಡಿಎಸ್ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ. ಇದು ಬಿಜೆಪಿ, ಆರೆಸ್ಸೆಸ್ ಕಾರ್ಯಕ್ರಮವಲ್ಲ. ದೇಶದ ಜನರ ತೆರಿಗೆ ಹಣದಿಂದ ನಿರ್ಮಾಣವಾಗಿರುವ ಸಂಸತ್ ಭವನ ನಿರ್ಮಾಣವಾಗಿದೆ ಎಂದು ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.

ಈ ಹಿಂದಿನ ಹಳೆಯ ಸಂಸತ್ ಭವನ ವೃತ್ತಾಕಾರದಲ್ಲಿದ್ದರೆ,ಹೊಸದಾಗಿ ಕಟ್ಟಿರುವ ಸಂಸತ್ ಭವನ ತ್ರಿಕೋನಾಕಾರದಲ್ಲಿ ಇದೆ. ಹಳೆಯ ಸಂಸತ್ ಭವನದ ಪಕ್ಕದಲ್ಲೇ ಹೊಸ ಸಂಸತ್ ಭವನವನ್ನ ನಿರ್ಮಾಣ ಮಾಡಲಾಗಿದೆ. ಈ ಹೊಸ ಕಟ್ಟಡವು 150 ವರ್ಷ ಬಾಳಿಕೆ ಬರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭೂಕಂಪ ಆದರೂ ಯಾವುದೇ ರೀತಿ ಹಾನಿ ಆಗದ ರೀತಿಯಲ್ಲಿ ಈ ಕಟ್ಟಡ ವಿನ್ಯಾಸ ಮಾಡಲಾಗಿದೆ.

ಹಳೆಯ ಕಟ್ಟಡದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಡಿಮೆ ಸ್ಥಳಾವಕಾಶ ಇತ್ತು. ಆದರೆ, ಹೊಸ ಕಟ್ಟಡದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ವಿಶಾಲವಾಗಿವೆ. ಲೋಕಸಭೆಯಲ್ಲಿ 888 ಜನ ಕೂರುವಂತೆ ವಿನ್ಯಾಸ ಮಾಡಲಾಗಿದೆ. ರಾಜ್ಯಸಭೆಯಲ್ಲಿ 384 ಜನ ಕೂರಬಹುದಾಗಿದೆ. ಅಂದರೆ, ಭವಿಷ್ಯದಲ್ಲಿ ಸಂಸದರ ಸಂಖ್ಯೆ ಹೆಚ್ಚಾದರೂ ಕೂಡಾ ಇಲ್ಲಿ ಸ್ಥಳಾವಕಾಶದ ಕೊರತೆ ಎದುರಾಗವುದಿಲ್ಲ.

ಪ್ರವೀಣ್ ನೆಟ್ಟಾರ್ ಪತ್ನಿಯನ್ನು ನೌಕರಿಯಿಂದ ವಜಾಗೊಳಿಸಿದ ಕಾಂಗ್ರೆಸ್ ಸರ್ಕಾರ

ಜೊತೆಗೆ ಈ ಕಟ್ಟಡದಲ್ಲಿ ಸಂಟ್ರಲ್ ಹಾಲ್ ಇರೋದಿಲ್ಲ. ಒಂದು ವೇಳೆ ಜಂಟಿ ಅವೇಶನ ನಡೆಸಬೇಕು ಅಂದ್ರೆ ಲೋಕಸಭೆಯಲ್ಲೇ 1,272 ಮಂದಿ ಕುಳಿತುಕೊಳ್ಳೋದಕ್ಕೆ ವ್ಯವಸ್ಥೆ ಮಾಡಬಹುದು. ಒಟ್ಟು 4 ಅಂತಸ್ತಿನ ಈ ಕಟ್ಟಡದಲ್ಲಿ ಸಚಿವರು, ಹಲವು ಕಮಿಟಿಗಳಿಗೂ ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡದ ಒಳಗೆ ವಿಶಾಲ ಜಾಗವನ್ನೂ ಬಿಡಲಾಗಿದೆ. ಇಲ್ಲಿ ಆಲದ ಮರ ನೆಡುವ ಉದ್ದೇಶ ಇದೆ ಎಂದು ಹೇಳಲಾಗಿದೆ.

ಒಟ್ಟು ಆಸನ ಸಾಮಥ್ರ್ಯ:
ಭವಿಷ್ಯದಲ್ಲಿ ಸಂಸತ್ ಸದಸ್ಯರ ಸಂಖ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ. ಈ ಕಟ್ಟಡದಲ್ಲಿ 1224 ಸಂಸದರು ಒಟ್ಟಿಗೆ ಕುಳಿತುಕೊಳ್ಳಬಹುದಾಗಿದೆ. ಲೋಕಸಭೆಯಲ್ಲಿ 888 ಹಾಗೂ ರಾಜ್ಯಸಭೆಯಲ್ಲಿ 384 ಆಸನ ವ್ಯವಸ್ಥೆ ಇರಲಿದೆ. ಸದ್ಯ ಲೋಕಸಭೆಯಲ್ಲಿ 543 ಹಾಗೂ ರಾಜ್ಯಸಭೆಯಲ್ಲಿ 245 ಸಂಸದರಿಗೆ ಆಸನ ವ್ಯವಸ್ಥೆ ಇದೆ.

ಈಗಿರುವ ಕಟ್ಟಡ ಏನಾಗಲಿದೆ:

ನೂತನ ಸಂಸತ್ ಭವನ ನಿರ್ಮಾಣವಾದ ಬಳಿಕ ಹಳೆಯ ಕಟ್ಟಡವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತದೆ. ಹೊಸ ಸಂಸತ್ ಭವನ ಕಾರ್ಯಾರಂಭಿಸುವವರೆಗೂ ಸಂಸತ್ತಿನ ಚಟುವಟಿಕೆಗಳು ಹಳೆಯ ಕಟ್ಟಡದಲ್ಲೇ ನಡೆಯಲಿವೆ. ಬಳಿಕ ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ದೇಶದ ಪುರಾತತ್ವ ಸಂಪತ್ತು ಎಂದು ಪರಿಗಣಿಸಲಾಗುತ್ತದೆ.

ವೆಚ್ಚ ಎಷ್ಟು:

ರಾಷ್ಟ್ರರಾಜಧಾನಿ ಪ್ರದೇಶ ಮರು ನಿರ್ಮಾಣ ಯೋಜನೆ (ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್) ಯೋಜನೆಯ ಅಡಿಯಲ್ಲಿ ಸಂಸತ್ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ. 64,500 ಚದರ ಮೀಟರ್ ಪ್ರದೇಶದಲ್ಲಿ ತ್ರಿಭುಜಾಕೃತಿಯ ಸಂಸತ್ ಆವರಣ ನಿರ್ಮಾಣ ಆಗಲಿದೆ. ಈ ಯೋಜನೆಗೆ 971 ಕೋಟಿ ರು. ವೆಚ್ಚವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಖರ್ಚು ವೆಚ್ಚದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ವಿಪಕ್ಷಗಳ ವಿರೋಧ:

ಇನ್ನು ಹೊಸದಾಗಿ ನಿರ್ಮಾಣ ಆಗಿರುವ ಸಂಸತ್ ಕಟ್ಟಡವನ್ನು ಮೇ 28ರಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ದೇಶದ ಎಲ್ಲಾ ಪಕ್ಷಗಳಿಗೂ ಆಹ್ವಾನವನ್ನು ನೀಡಲಾಗಿದೆ. ಆದರೆ ಕಾಂಗ್ರೆಸ್, ಆಪ್, ತೃಣಮೂಲ ಕಾಂಗ್ರೆಸ್, ಶಿವಸೇನೆ, ಎಡಪಕ್ಷಗಳು ಮತ್ತು ಸಮಾಜವಾದಿ ಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡಿವೆ.

ಸಂಸತ್ ಭವನದ ಉದ್ಘಾಟನೆಯನ್ನು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಅವರಲ್ಲಿ ಮಾಡಿಸಬೇಕಿತ್ತು. ಆದರೆ ಪ್ರಧಾನಿ ತಾವೇ ಉದ್ಘಾಟನೆ ಮಾಡುವ ಮೂಲಕ ಸಂವಿಧಾನಕ್ಕೂ, ರಾಷ್ಟ್ರಪತಿಗಳಿಗೆ ಅವಮಾನ ಮಾಡಿದೆ ಎಂದು ವಿಪಕ್ಷಗಳು ಆರೋಪ ಮಾಡಿವೆ.

ಹಲವರ ಭಾಗಿ:
ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಏಳು ಪ್ರತಿಪಕ್ಷಗಳು ಸೇರಿದಂತೆ 25 ರಾಜಕೀಯ ಪಕ್ಷಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಾರತೀಯ ಜನತಾ ಪಾರ್ಟಿ ಸೇರಿದಂತೆ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‍ಡಿಎ)ದ 18 ಮಿತ್ರ ಪಕ್ಷಗಳ ಹೊರತಾಗಿ, ಏಳು ಎನ್‍ಡಿಎಯೇತರ ಪಕ್ಷಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿವೆ.ಬಹುಜನ ಸಮಾಜ ಪಕ್ಷ, ಶಿರೋಮಣಿ ಅಕಾಲಿದಳ, ಜನತಾ ದಳ(ಜಾತ್ಯತೀತ), ಲೋಕ ಜನಶಕ್ತಿ ಪಕ್ಷ- ರಾಮ್ ವಿಲಾಸ್, ಯುವಜನ ಶ್ರಮಿಕ ರೈತ ಕಾಂಗ್ರೆಸ್, ಬಿಜು ಜನತಾ ದಳ ಮತ್ತು ತೆಲುಗು ದೇಶಂ ಪಕ್ಷ ಸೇರಿದಂತೆ ಏಳು ಎನ್‍ಡಿಎಯೇತರ ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ.

ಹೊಸ ನಾಣ್ಯ ಬಿಡುಗಡೆ:
75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವಾರ್ಥವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ನಾಣ್ಯವನ್ನು ಭಾನುವಾರ ಅನಾವರಣಗೊಳಿಸಲಿದ್ದಾರೆ.75 ರೂಪಾಯಿಯ ವಿಶೇಷ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದ್ದು, ಅದರ ಕೆಳಗಡೆ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ಎಡಭಾಗದಲ್ಲಿ ಭಾರತ್ ಎಂದು ದೇವನಾಗರಿ ಲಿಪಿ ಹಾಗೂ ಬಲ ಭಾಗದಲ್ಲಿ ಇಂಡಿಯಾ ಎಂದು ಇಂಗ್ಲಿಷ್‍ನಲ್ಲಿ ಬರೆಯಲಾಗುತ್ತದೆ. ಸಿಂಹದ ಲಾಂಛನದ ಕೆಳಗಡೆ ಮುಖಬೆಲೆಯನ್ನು ತೋರಿಸುವ ರೂಪಾಯಿ ಚಿಹ್ನೆಯೊಂದಿಗೆ 75 ಎಂದು ಇಂಗ್ಲಿಷ್ ಅಂಕೆಯಲ್ಲಿ ಬರೆಯಲಾಗುತ್ತದೆ ಎಂದು ತಿಳಿದು ಬಂದಿದೆ.

ಇನ್ನು, ನ್ಯಾಣದ ಮತ್ತೊಂದು ಬದಿಯಲ್ಲಿ ಸಂಸತ್ ಸಂಕೀರ್ಣದ ಫೋಟೋ ಇರಲಿದೆ. ಸಂಸದ್ ಸಂಕುಲ್ ಪದಗಳನ್ನು ಮೇಲಿನ ಪರಿಯಲ್ಲಿ ದೇವನಾಗರಿ ಲಿಪಿಯಲ್ಲಿ ಮತ್ತು ಕೆಳಗಿನ ಪರಿಯಲ್ಲಿ ಪಾರ್ಲಿಮೆಂಟ್ ಕಾಂಪ್ಲೆಕ್ಸ್‍ಅನ್ನು ಇಂಗ್ಲಿಷ್‍ನಲ್ಲಿ ಬರೆಯಲಾಗುತ್ತದೆ. ಇನ್ನು ಈ ನಾಣ್ಯವು 44 ಮಿಲಿಮೀಟರ್ ವ್ಯಾಸವನ್ನು ಹೊಂದಿರುವ ವೃತ್ತಾಕಾರದ ಆಕಾರದಲ್ಲಿರಲಿದ್ದು, ಅದರ ಅಂಚುಗಳ ಉದ್ದಕ್ಕೂ 200 ತೋಡು ಅಂಚನ್ನು ಹೊಂದಿರುತ್ತದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಒಳಗೊಂಡಿರುವ ನಾಲ್ಕು ಭಾಗಗಳ ಮಿಶ್ರ ಲೋಹದಿಂದ 35 ಗ್ರಾಂ ತೂಕದ ನಾಣ್ಯವನ್ನು ತಯಾರಿಸಲಾಗುತ್ತದೆ.

ವಿಶೇಷತೆಗಳು:
ನೂತನ ಸಂಸತ್ ಭವನದ ಎತ್ತರ – 50 ಮೀಟರ್
ಸಂಸತ್ ಭವನದ ಒಟ್ಟು ನಿರ್ಮಾಣ ವೆಚ್ಚ- 971 ಕೋಟಿ ರೂ.
ಸಂಸತ್ ಭವನದ ವಿಸ್ತೀರ್ಣ- 64,500 ಚದರ್ ಮೀಟರ್
ಲೋಕಸಭಾ ಸದಸ್ಯರಿಗೆ ಆಸನ ವ್ಯವಸ್ಥೆ – 888
ರಾಜ್ಯಸಭೆ ಸದಸ್ಯರಿಗೆ ಆಸನ ವ್ಯವಸ್ಥೆ – 384
ಹೊಸ ಕಟ್ಟಡದಲ್ಲಿ ಸಂಸದರ ಆಸನ ಸಾಮಥ್ರ್ಯ- 1,224:
ಹಾಲಿ ಸಂಸತ್ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ – 5000

#NewParliamentBuilding, #Opening, #IndianProud, #PMModi,

- Advertisement -
RELATED ARTICLES
- Advertisment -

Most Popular