ನೂತನ RTO ಕಚೇರಿ ತೆರೆಯುವ ಪ್ರಸ್ತಾವನೆ ಇಲ್ಲ : ಶ್ರೀರಾಮುಲು

Social Share

ಬೆಳಗಾವಿ,ಡಿ.21- ಇಲಾಖೆಗಳಲ್ಲಿ 30 ಸೇವೆಗಳನ್ನು ಆನ್‍ಲೈನ್ ಮೂಲಕವೇ ನೀಡುತ್ತಿರುವುದರಿಂದ ಹೊಸದಾಗಿ ಯಾವುದೇ ಭಾಗದಲ್ಲಿ RTO ಕಚೇರಿಗಳನ್ನು ತೆರೆಯುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು.

ಶಾಸಕ ಸುಕುಮಾರ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, RTO ಕಚೇರಿಗಳಿಗೆ ಸಾರ್ವಜನಿಕರು ಡಿಸಿ ಮತ್ತು ಎಫ್‍ಸಿ ಸೇವೆ ಪಡೆಯಲು ಮಾತ್ರ ಬರುತ್ತಾರೆ. 30 ಸೇವೆಗಳನ್ನು ಆನ್‍ಲೈನ್‍ನಲ್ಲೇ ನೀಡುತ್ತಿರುವುದರಿಂದ ಆರ್‍ಟಿಒ ಕಚೇರಿಗಳನ್ನು ತೆರೆಯುವ ಪ್ರಸ್ತಾವನೆ ಇಲ್ಲ ಎಂದರು.

ಸಾರ್ವಜನಿಕರ ಅನುಕೂಲಕ್ಕಾಗಿ ವಾಹನ್ ಫೋರ್, ಸಾರಥಿ ಫೋರ್, ಕರ್ನಾಟಕ 1, ಬೆಂಗಳೂರು ಒನ್, ಮೊಬೈಲ್ ಒನ್ ಆ್ಯಪ್‍ನಲ್ಲೂ ಸಹ ಸೇವೆ ಸಿಗುತ್ತದೆ. ಸರ್ಕಾರದ ಇ- ಆಡಳಿತ ವತಿಯಿಂದ ಸ್ಥಾಪನೆಗೊಂಡಿರುವ ಗ್ರಾಮ ಒನ್ ಮತ್ತು ಜನಸೇವಕ್ ಯೋಜನೆಯಿಂದಲೂ ಸಾರ್ವ ಜನಿಕರಿಗೆ ಸೇವೆ ಲಭ್ಯವಾಗುತ್ತಿದೆ. ಈ ಹಿನ್ನಲೆಯಲ್ಲಿ ಆರ್‍ಟಿಒ ಕಚೇರಿಗಳನ್ನು ತೆರೆಯುವ ಪ್ರಶ್ನೆಯೇ ಇಲ್ಲ ಎಂದರು.

ಶೀಘ್ರದಲ್ಲೇ ರಾಜ್ಯದಲ್ಲೂ ಕೊರೋನಾ ಮಾರ್ಗಸೂಚಿ ಬಿಡುಗಡೆ : ಸಚಿವ ಸುಧಾಕರ್‌

ಅನೇಕ ಕ್ಷೇತ್ರಗಳಲ್ಲಿ ಹೊಸದಾಗಿ ಆರ್‍ಟಿಒ ಕಚೇರಿಗಳನ್ನು ತೆರೆಯಬೇಕೆಂದು ಶಾಸಕರು ಮನವಿ ಮಾಡಿಕೊಂಡಿದ್ದಾರೆ. ಸಾರಿಗೆ ಇಲಾಖೆ ಸಚಿವರ ಮತ್ತು ಆಯುಕ್ತರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಇದರ ಪ್ರಕಾರ ಆನ್‍ಲೈನ್ ಸೇವೆಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಆರ್‍ಟಿಒ ಕಚೇರಿ ತೆರೆಯುವ ಅವಶ್ಯಕತೆ ಇಲ್ಲ.

ಎಸ್‍ಸಿ/ಎಸ್‍ಟಿ ಮೀಸಲಾತಿ ಹೆಚ್ಚಳ ಕೇಂದ್ರಕ್ಕೆ ಶಿಫಾರಸ್ಸು

ಇದರಿಂದ ಸಾರ್ವಜನಿಕರಿಗೆ ಅನುಕೂಲವೂ ಆಗುವುದಿಲ್ಲ. ಈಗ ಎಲ್ಲರೂ ಕಚೇರಿಗಳಿಗೆ ಭೇಟಿ ನೀಡದೆ ಸಂಪರ್ಕರಹಿತವಾಗಿ ಪ್ರಯೋಜನ ಪಡೆಯುತಿದ್ದಾರೆ. ಜತೆಗೆ ನಾವು ಸಾರಿಗೆ ಸಂಪರ್ಕ ಅಭಿಯಾನವನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.

new, RTO office, minister, sriramulu,

Articles You Might Like

Share This Article