ಹೊಸ ವರ್ಷಾಚರಣೆಗೆ ಭದ್ರತೆ ಪರಿಶೀಲಿಸಿದ ಪ್ರತಾಪ್ ರೆಡ್ಡಿ

Social Share

ಬೆಂಗಳೂರು, ಡಿ.28- ಹೊಸ ವರ್ಷ ಸಂಭ್ರಮಾಚರಣೆಗೆ ಅತಿ ಹೆಚ್ಚು ಜನರು ನಗರದಲ್ಲಿ ಸೇರುವ ನಿರೀಕ್ಷೆ ಇದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು. ನಗರದ ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಚರ್ಚ್ ಸ್ಟ್ರೇಟ್‍ಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಡ್ರೋಣ್ ನಿಗಾ:
ಹೊಸ ವರ್ಷದ ಸಂಭ್ರಮಾಚರಣೆ ಆಗುತ್ತಿದೆ. ಈ ಪ್ರಮುಖ ರಸ್ತೆಗಳಲ್ಲಿ ಅತಿ ಹೆಚ್ಚು ಜನರು ಸೇರಲಿದ್ದಾರೆ.
ಯಾವ ಪ್ರಮುಖ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂಬ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಸಿಸಿ ಕ್ಯಾಮೆರಾದ ಜೊತೆ ಡ್ರೋಣ್ ಬಳಕೆ ಮಾಡಲಾಗುತ್ತದೆ ಎಂದರು.

ಹೊಸ ವರ್ಷಾಚರಣೆ ಸಂಭ್ರಮದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲು ಬಿಡುವುದಿಲ್ಲ. ಸೂಕ್ತ ಭದ್ರತೆ ಒದಗಿಸಲಾಗುತ್ತದೆ. ಮಹಿಳೆಯರು ಹಾಗೂ ಮಕ್ಕಳು ಹಾಗೂ ವೃದ್ಧರ ಬಗ್ಗೆ ನಿಗಾ ವಹಿಸಿ ಹೆಚ್ಚಿನ ಭದ್ರತೆ ನೀಡಲಾಗುತ್ತದೆ. ನಗರದಲ್ಲಿನ ಪಬ್, ಬಾರ್ ಮತ್ತು ರೆಸ್ಟೊರೆಂಟ್‍ಗಳಲ್ಲಿ ಇನ್ನಷ್ಟು ಕ್ಯಾಮೆರಾ ಅಳವಡಿಸುವಂತೆ ಮಾಲೀಕರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಲೋಕದ ಅಪ್ಪಟ ಕವಿಕೋಗಿಲೆ ರಸಋಷಿ ಕುವೆಂಪು

ರೆಸ್ಟೋರೆಂಟ್ ಪರಿಶೀಲನೆ:
ಈಗಾಗಲೇ ಆಯಾ ವಿಭಾಗದ ಡಿಸಿಪಿಗಳು, ಇತರೆ ಅಕಾರಿಗಳು, ಪಬ್, ಬಾರ್ ಮತ್ತು ರೆಸ್ಟೋರೆಂಟ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸೀಟ್‍ಗಳಲ್ಲಿ ಅತಿ ಹೆಚ್ಚಾಗಿ ಬಂದೋಬಸ್ತ್ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮೆಟಲ್ ಡಿಟೆಕ್ಟರ್ ಅಳವಡಿಕೆ:
ರಸ್ತೆಯ ಎರಡು ಬದಿಗಳಲ್ಲಿ ಮೆಟಲ್ ಡಿಟೆಕ್ಟರ್ ಹಾಕಲಾಗುವುದು. ಡಿ. 31ರಂದು ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸರ್ಕಾರ ಮಧ್ಯರಾತ್ರಿ 1 ಗಂಟೆವರೆಗೆ ವರ್ಷಾಚರಣೆಗೆ ಅನುಮತಿ ನೀಡಿದೆ. ಒಟ್ಟಾರೆ ನಗರದಲ್ಲಿ ವರ್ಷಾಚರಣೆ ವೇಳೆ ಹೆಚ್ಚಿನ ಭದ್ರತೆ ಜೊತೆಗೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ನಾನಾ ದೇಶಗಳಿಂದ ವಿದೇಶಿಗರ ದಾಂಗುಡಿ, ಬೆಂಗಳೂರಲ್ಲಿ ಹೆಚ್ಚಾಯ್ತು ಕೊರೊನಾ ಆತಂಕ

ಈ ಸಂದರ್ಭದಲ್ಲಿ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹಾಗೂ ಇನ್ನಿತರ ಅಕಾರಿಗಳು ಇದ್ದರು.

New Year, celebration, security, check, Police Commissioner, Pratap Reddy,

Articles You Might Like

Share This Article