ಹೊಸ ವರ್ಷಾಚರಣೆ ಭದ್ರತೆಗೆ ಆಯುಕ್ತರ ಸೂಚನೆ

Social Share

ಬೆಂಗಳೂರು,ಡಿ.27- ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವರ್ಷಾಚರಣೆ ಸಂಬಂಧ ಇಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಸಭೆ ನಡೆಸಿ ಹಲವು ಸಲಹೆಸೂಚನೆಗಳನ್ನು ನೀಡಿದರು.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಯಾವ ರೀತಿ ನಗರಾದ್ಯಂತ ಕ್ರಮ ಕೈಗೊಳ್ಳಬೇಕು, ಪ್ರಮುಖವಾಗಿ ಎಂಜಿರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‍ಸ್ಟ್ರೀಟ್‍ನಲ್ಲಿ ಯಾವ ರೀತಿ ಭದ್ರತೆ ವಹಿಸಬೇಕೆಂಬ ಬಗ್ಗೆ ಚರ್ಚಿಸಲಾಯಿತು.

ಅದೇ ರೀತಿ ಇಂದಿರಾನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ ಪ್ರದೇಶಗಳಲ್ಲಿ ಯಾವ ರೀತಿ ಕಟ್ಟೆಚ್ಚರ ವಹಿಸಬೇಕು ಅಲ್ಲದೆ ನಗರದ ಹೊರವಲಯಗಳಲ್ಲಿರುವ ರೆಸಾರ್ಟ್‍ಗಳು, ಪಬ್ ಮತ್ತು ಬಾರ್‍ಗಳು ಹಾಗೂ ರೆಸ್ಟೋರೆಂಟ್‍ಗಳ ಮೇಲೆ ಯಾವ ರೀತಿ ನಿಗಾ ವಹಿಸಬೇಕೆಂಬ ಬಗ್ಗೆಯೂ ಸಹ ಸಲಹೆಸೂಚನೆ ನೀಡಲಾಯಿತು.

ಡಿ.31ರಂದು ಸಣ್ಣಪುಟ್ಟ ಘಟನೆಗಳು ಸೇರಿದಂತೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಎಲ್ಲ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಮುಖವಾಗಿ ಫ್ಲೈಓವರ್ ಮೇಲೆ ಡಿ.31ರಂದು ಸಂಜೆಯಿಂದಲೇ ವಾಹನ ಸಂಚಾರ ನಿಷೇಧಿಸುವ ಸಂಬಂಧ ಸಮಾಲೋಚನೆ ನಡೆಸಲಾಯಿತು.

ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ : ಸುಧಾಕರ್

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಹಾಗೂ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡುವುದರ ಜೊತೆಗೆ ಅವರ ಸಮಸ್ಯೆಗಳಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಕ್ಷಣ ಸ್ಪಂದಿಸುವಂತೆ ಸೂಚಿಸಲಾಯಿತು.

ಹಾಸನ ಮಿಕ್ಸಿ ಸ್ಪೋಟ ಪ್ರಕರಣ, ಇಬ್ಬರ ವಿಚಾರಣೆ

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು, ಸಂಚಾರಿ ವಿಭಾಗದ ವಿಶೇಷ ಆಯುಕ್ತರು ಸೇರಿದಂತೆ ಎಲ್ಲ ವಿಭಾಗದ ಡಿಸಿಪಿಗಳು ಉಪಸ್ಥಿತರಿದ್ದರು.

New Year, celebrations, Bengaluru, Police Commissioner, Pratap Reddy,

Articles You Might Like

Share This Article