ಹೊಸ ವರ್ಷಾಚರಣೆಗೆ ಪ್ರತ್ಯೇಕ ಮಾರ್ಗಸೂಚಿ : ಸಚಿವ ಅಶೋಕ್

Social Share

ಬೆಳಗಾವಿ,ಡಿ.26- ದೇಶದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕಿನ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ರಾಜ್ಯದ ಜನತೆಗೆ ಅಭಯ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ತಡೆಯಲು ರಾಜ್ಯ ಸರ್ಕಾರ ಸಮರ್ಥವಾಗಿದೆ. ನಾವು ಹಿಂದೆಯೂ ಕೂಡ ಸವಾಲುಗಳನ್ನು ಎದುರಿಸಿದ್ದೇವೆ. ಹೊಸ ಮಾದರಿಯ ಸೋಂಕು ಕಾಣಿಸಿಕೊಂಡಿರುವುದರಿಂದ ಆತಂಕಪಡುವ ಅಗತ್ಯವಿಲ್ಲ. ಆದರೆ ಇದನ್ನು ನಿಯಂತ್ರಿಸಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಈ ಕುರಿತು ವೈದ್ಯಕೀಯ ಸಚಿವ ಸುಧಾಕರ್ ಹಾಗೂ ನನ್ನ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಕೋವಿಡ್ ಮುನ್ನಚೆರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು.

ಔಟ್‍ಪೋಸ್ಟ್ ನಲ್ಲಿ ಲಂಚ ಪಡೆಯುತ್ತಿದ್ದ ಕಾನ್‍ಸ್ಟೆಬಲ್ ಅಮಾನತು

ಜನರು ಯಾವುದೇ ಆತಂಕ ಪಡಬೇಕಿಲ್ಲ. ಹೊಸ ವರ್ಷ ಬರುತ್ತಿದೆ. ನ್ಯೂ ಇಯರ್ ಆಚರಣೆ ವೇಳೆ ಜನಜಂಗುಳಿ ಸೇರುವುದು ಅಧಿಕವಾಗಿರುತ್ತದೆ. ಇದಕ್ಕೆ ಬೇಕಾದ ಎಲ್ಲ ಕ್ರಮ ತೆಗದುಕೊಳ್ಳುತ್ತೇವೆ. ಈ ಕುರಿತು ಅಂತಿಮವಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ.

ಅಮೆರಿಕದಲ್ಲಿ ತೀವ್ರ ಹಿಮ ಮತ್ತು ಚಳಿಗೆ 34 ಮಂದಿ ಸಾವು

ಹಳೇ ಮೈಸೂರು ಭಾಗದಲ್ಲಿ 50 ಸೀಟ್ ಗೆದ್ದು ತೋರಿಸಲಿ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹಾಕಿರುವ ಸವಾಲಿನ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್, ಪ್ರಶ್ನೆ ಕೇಳುತ್ತಿದ್ದಂತೆ ನನಗೆ ಏನು ಕೇಳಿಸುತ್ತಿಲ್ಲ ಎಂದು ಅಲ್ಲಿಂದ ತೆರಳಿದರು.

#NewYearCelebrations, #CovidGuidelines, #Minister #RAshok,

Articles You Might Like

Share This Article